ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿಗುರು ಅಡಿಕೆ ಹೆಚ್ಚಾಗಿ ಉದುರುತ್ತಿರುವುದು ಹಾಗೂ ಸಿಂಗಾರ ಒಣಗುವ ಸಮಸ್ಯೆ ವಿಪರೀತವಾಗಿ ಕಂಡುಬಂದ ಹಿನ್ನೆಲೆ ಅಡಿಕೆ ತೋಟಗಳಿಗೆ ಸಿಪಿಸಿಐಆರ್ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ವಿಟ್ಲದ ಸಿಪಿಸಿಆರ್ಐ ವಿಜ್ಞಾನಿಗಳ ಗಮನಕ್ಕೆ ತಂದು, ಈ ಕುರಿತು ಸೂಕ್ತ ಅಧ್ಯಯನ ಹಾಗೂ ಪರಿಹಾರದ ಮಾರ್ಗ ಅಗತ್ಯವಾಗಿದೆ ಎಂದು ಅಡಿಕೆ ಬೆಳೆಗಾರರ ಪರವಾಗಿ ತಿಳಿಸಿದ್ದರು.
ಇದಕ್ಕೆ ಸ್ಪಂದಿಸಿದ ವಿಜ್ಞಾನಿಗಳ ತಂಡ ಸುಳ್ಯ, ಪುತ್ತೂರು, ಕಡಬ ಪ್ರದೇಶದ ಕೆಲವು ಅಡಿಕೆ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಅಡಿಕೆ ಸ್ಯಾಂಪಲ್ಗಳನ್ನು ಪಡೆದು ಅಧ್ಯಯನ ನಡೆಸಿದ್ದಾರೆ.
ವಿಜ್ಞಾನಿಗಳ ತಂಡದಲ್ಲಿ ಸಸ್ಯ ಸಂತಾನೋತ್ಪತ್ತಿ ವಿಜ್ಞಾನಿ ಡಾ. ಎನ್. ಆರ್. ನಾಗರಾಜ, ಕೃಷಿ ಕೀಟಶಾಸ್ತ್ರ ವಿಜ್ಞಾನಿ ಡಾ. ಶಿವಾಜಿ ಹೌಸ್ರಾವ್ ಥೂಬ್ ಸೇರಿದಂತೆ ಮೊದಲಾದವರು ಇದ್ದರು.