ಮಂಗಳೂರು: ಜ್ವರದ ಹಿನ್ನೆಲೆ ಆಗಸ್ಟ್ 13ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ. ಗಣೇಶ್ ಸಾವಿಗೆ ಡೆಂಘಿ ಜ್ವರ ಕಾರಣ ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ.
ನಗರದ ಜಪ್ಪುಪಟ್ಟಣ ನಿವಾಸಿ ಗಣೇಶ್ ಕರ್ಕೆರ (35) ಮೃತಪಟ್ಟ ದುರ್ದೈವಿ. ಗಣೇಶ್ ಜಪ್ಪಿನ ಸಾಗರ್ ಟ್ರಾವೆಲ್ಸ್‌ನ ಕಚೇರಿಯಲ್ಲಿ ಉದ್ಯೋಗಿಯಾಗಿದ್ದರು. ಮೃತನ ಕುಟುಂಬಕ್ಕೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಜಿಲ್ಲೆಯಲ್ಲಿ ಡೆಂಘಿ ಜ್ವರಕ್ಕೆ ಬಲಿಯಾದವರ ಸಂಖ್ಯೆ 10ರ ಗಡಿ ದಾಟಿದೆ.