ಮಂಗಳೂರು ಬೋಟ್ ದುರಂತ: ಐದನೇ ಮೃತದೇಹ ಪತ್ತೆ, ಕೈಜಾರಿದ ಆರನೇ ಮೃತದೇಹ - Fisheries body found
ಮಂಗಳೂರಿನಲ್ಲಿ ಸಂಭವಿಸಿದ ಬೋಟ್ ದುರಂತದಲ್ಲಿ ನಾಪತ್ತೆಯಾಗಿದ್ದ ಮೀನುಗಾರರನ್ನು ಪತ್ತೆ ಹಚ್ಚುವ ಶೋಧ ಕಾರ್ಯ ಮುಂದುವರಿದಿದ್ದು, ಇಂದು ಮತ್ತೊಬ್ಬನ ಮೀನುಗಾರರ ಮೃತದೇಹ ಪತ್ತೆಯಾಗಿದೆ. ಒಟ್ಟು ಇಲ್ಲಿಯವರೆಗೆ ನಾಪತ್ತೆಯಾದ ಆರು ಮಂದಿಯಲ್ಲಿ ಐವರ ಮೃತದೇಹ ಪತ್ತೆಯಾಗಿವೆ.

ಮಂಗಳೂರು: ಬೋಟ್ ದುರಂತದಲ್ಲಿ ನಾಪತ್ತೆಯಾದ ಆರು ಮಂದಿಯಲ್ಲಿ ಐದು ಮಂದಿಯ ಮೃತದೇಹ ಪತ್ತೆಯಾಗಿವೆ.

ನಿನ್ನೆ ಪಾಂಡುರಂಗ ಸುವರ್ಣ ಮತ್ತು ಪ್ರೀತಂ ಎಂಬ ಮೀನುಗಾರರ ಮೃತದೇಹ ಪತ್ತೆಯಾಗಿದ್ದರೆ, ಇಂದು ಮಧ್ಯಾಹ್ನ ಚಿಂತನ್ ಮತ್ತು ಹಸೈನಾರ್ ಅವರ ಮೃತದೇಹ ಪತ್ತೆಯಾಗಿವೆ.

ಮಧ್ಯಾಹ್ನದ ಬಳಿಕ ಝಿಯಾದ್ ಎಂಬುವರ ಮೃತದೇಹ ಪತ್ತೆಯಾಗಿದ್ದು, ಅಲ್ಲಿಗೆ ನಾಪತ್ತೆಯಾದ ಆರು ಮಂದಿಯಲ್ಲಿ ಐವರ ಮೃತದೇಹ ಪತ್ತೆಯಾದಂತಾಗಿದೆ. ಆರನೇ ಮೃತದೇಹ ಮೇಲಕ್ಕೆತ್ತುವ ವೇಳೆ ಮತ್ತೆ ಸಮುದ್ರದಾಳಕ್ಕೆ ಮೃತದೇಹ ಬಿದ್ದಿದೆ. ಅನ್ಸಾರ್ ಎಂಬ ಮೀನುಗಾರರ ಮೃತದೇಹವನ್ನು ಮುಳುಗು ತಜ್ಞರು ಮೇಲಕ್ಕೆ ತರುವ ಸಂದರ್ಭದಲ್ಲಿ ಕೈಜಾರಿದ್ದು, ಮತ್ತೆ ಸಮುದ್ರದೊಳಗೆ ಬಿದ್ದಿದೆ.

ಮತ್ತೆ ಮೃತದೇಹದ ಶೋಧ ಕಾರ್ಯ ಮುಂದುವರಿದಿದೆ. ಶೋಧದ ವೇಳೆ ಸಿಕ್ಕಿರುವ ಐದು ಮೃತದೇಹಗಳನ್ನು ಮಂಗಳೂರಿನಲ್ಲಿರುವ ಜಿಲ್ಲಾಸ್ಪತ್ರೆ ವೆನ್ಲಾಕ್ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ಕುಟುಂಬಿಕರಿಗೆ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ : ಮಂಗಳೂರು ಬೋಟ್ ದುರಂತ: ಮತ್ತಿಬ್ಬರ ಮೃತದೇಹ ಪತ್ತೆ, ಇನ್ನಿಬ್ಬರಿಗೆ ಮುಂದುವರಿದ ಶೋಧ