ETV Bharat / state

ಭಿಕ್ಷಾಟನೆ ನಿಲ್ಲಿಸಿ ಡೆಲಿವರಿ ಬಾಯ್‌ ಆಗಿ ಬದುಕು ಕಟ್ಟಿಕೊಂಡ ವಿಶೇಷ ಚೇತನ ಯುವಕ - Parasurama who lived

ಬೈಕಂಪಾಡಿಯ ಯುವಕ ಪರಶುರಾಮ ಅಂಗವೈಕಲ್ಯವನ್ನು ಮೆಟ್ಟಿನಿಂತು ಬದುಕು ರೂಪಿಸಿಕೊಂಡು ಮಾದರಿಯಾಗಿದ್ದಾನೆ.

An exceptional young man who is a role model for others
ವಿಶೇಷಚೇತನ ಯುವಕ ಪರಶುರಾಮ
author img

By

Published : Feb 10, 2023, 10:45 PM IST

ಮಾದರಿ ಯುವಕ ಪರಶುರಾಮ

ಮಂಗಳೂರು: ಅಂಗವಿಕಲನಾದರೆ ಜೀವನವೇ ಮುಗಿಯಿತು ಅಂದುಕೊಳ್ಳುವವರೇ ಹೆಚ್ಚು. ಆದ್ರೆ, ಮಂಗಳೂರಿನ ಯುವಕನೊಬ್ಬ ವಿಶೇಷಚೇತನನಾದರೂ ಕೂಡಾ ಜೀವನದಲ್ಲಿ ಕುಗ್ಗದೇ ದುಡಿದು ಒಳ್ಳೆಯ ಬದುಕು ಕಟ್ಟಿಕೊಂಡಿದ್ದಾನೆ. ಬೈಕಂಪಾಡಿಯ ಪರಶುರಾಮ ಅಂಗವೈಕಲ್ಯವನ್ನೇ ಮೆಟ್ಟಿ ನಿಂತವನು. ಬಾಲ್ಯದಲ್ಲೇ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ ಈತ ಬಹುತೇಕ ಕಾರ್ಯಗಳನ್ನು ತನ್ನ ಕೈಗಳ ಸಹಾಯದಿಂದಲೇ ಮಾಡುತ್ತಾನೆ.

ಕೆಲವರು ಎಲ್ಲಾ ಅಂಗಗಳು ಸರಿಯಾಗಿದ್ದರೂ ಕೂಡಾ ಕೆಲಸ ಮಾಡಲು ಹಿಂದೇಟು ಹಾಕುತ್ತಾರೆ. ಆದ್ರೆ ಈ ವಿಶೇಷಚೇತನ ಕಷ್ಟಪಟ್ಟು ದುಡಿದು ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದಾನೆ. ಯಾರ ಮೇಲೂ ಹೊರೆಯಾಗದೇ ಸ್ವತಂತ್ರ ಬದುಕು ಕಟ್ಟಿಕೊಳ್ಳುವ ಮೂಲಕ ಇತರರಿಗೂ ಮಾದರಿಯಾಗಿದ್ದಾನೆ.

ಪರಶುರಾಮನ ತಂದೆ-ತಾಯಿಯ ಮೂಲ ವಿಜಯಪುರ. ಕುಟುಂಬ ಸದಸ್ಯರು 30 ವರ್ಷಗಳ ಹಿಂದೆಯೇ ಮಂಗಳೂರಿಗೆ ವಲಸೆ ಬಂದಿದ್ದಾರೆ. ಕುಟುಂಬ ಮಂಗಳೂರಿನಲ್ಲೇ ನೆಲೆಸಿದೆ. ಪರಶುರಾಮ ಏಳು ಮಕ್ಕಳಲ್ಲಿ ಹಿರಿಯವನು. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇರುವುದರಿಂದ ಭಿಕ್ಷಾಟನೆಯಲ್ಲಿ ತೊಡಗಿದ್ದ. ಅಂಗವೈಕಲ್ಯದಲ್ಲಿಯೇ 9ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ ಪರಶುರಾಮ ಬದುಕು ಸಾಗಿಸಲು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದಾನೆ.

ಸೆಕ್ಯೂರಿಟಿ, ಡೆಲಿವರಿ ಕೆಲಸ: ಪರಶುರಾಮ ಆರಂಭದಲ್ಲಿ ಜೀವನ ಸಾಗಿಸಲು ಭಿಕ್ಷಾಟನೆ ನಡೆಸುತ್ತಿದ್ದ. ಅದರಿಂದ ಬಂದ ಹಣವನ್ನು ಮನೆಯ ಖರ್ಚಿಗೆ ನೀಡುತ್ತಿದ್ದ. ಭಿಕ್ಷಾಟನೆ ಮಾಡುವುದನ್ನು ಬಿಟ್ಟು, ಮನೆಯೊಂದರ ಸೆಕ್ಯೂರಿಟಿ ಕೆಲಸ ಮಾಡಲು ಆರಂಭಿಸಿದ್ದಾನೆ. ನಂತರ, ಡೆಲಿವರಿ ಬಾಯ್ ಆಗಿ ಕಾಯಕ ಮಾಡುತ್ತಿದ್ದಾನೆ. ಸದ್ಯ ಎರಡೂ ಕೆಲಸಗಳನ್ನು ಮಾಡುತ್ತಿದ್ದಾನೆ. ಬೆಳಿಗ್ಗೆ ಸೆಕ್ಯೂರಿಟಿ ಹಾಗೂ ರಾತ್ರಿ ವೇಳೆ ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾನೆ.

ಸಂಜೆ 6ರಿಂದ ರಾತ್ರಿ 12ರವರೆಗೆ ಡೆಲಿವರಿ ಬಾಯ್ ಆಗಿ ಕಾಯಕ ಮಾಡುತ್ತಾನೆ. ಸ್ವಿಗ್ಗಿಯ ಆರ್ಡರ್ ಪಡೆದು ನಿಗದಿಪಡಿಸಿದ ಸ್ಥಳಕ್ಕೆ ತ್ರಿಚಕ್ರ ಬೈಕ್​ನಲ್ಲಿ ತೆರಳುತ್ತಾನೆ. ಬೈಕ್​ನಿಂದ ಕೆಳಗೆ ಇಳಿದು ಕೈಯಿಂದಲೇ ನಡೆದುಕೊಂಡು ಹೋಗಿ ಆರ್ಡರ್ ತಲುಪಿಸುತ್ತಾನೆ. ಯಾವುದಾದರೂ ಅಪಾರ್ಟ್ ಮೆಂಟ್ ಆಗಿದ್ದರೆ, ಅಲ್ಲಿ ಲಿಫ್ಟ್‌ ಇಲ್ಲದೇ ಇದ್ದರೆ, ಗ್ರಾಹಕರಿಗೆ ಕರೆ ಮಾಡಿ, ನಾನು ಅಂಗವಿಕಲ ಇದ್ದೇನೆ. ಕೆಳಗೆ ಬಂದು ಪಾರ್ಸೆಲ್ ತೆಗೆದುಕೊಳ್ಳುವಂತೆ ವಿನಂತಿಸುತ್ತಾನೆ. ಈ ಕೆಲಸಕ್ಕಾಗಿಯೇ ಪರಶುರಾಮ ಸೆಕೆಂಡ್ ಹ್ಯಾಂಡ್ ಬೈಕ್​ ಖರೀದಿಸಿದ್ದಾನೆ. ಆದರೆ, ಅದು ಸ್ವಲ್ಪ ಸಮಯದಲ್ಲಿ ಕೈಕೊಟ್ಟಿದೆ. ಸರ್ಕಾರದಿಂದ ಇತ್ತೀಚಿಗೆ ಒಂದು ತ್ರಿಚಕ್ರ ವಾಹನ ಸಿಕ್ಕಿದ್ದು, ಅದರಲ್ಲಿ ಡೆಲಿವರಿ ಮಾಡುವ ಕಾರ್ಯ ಮುಂದುವರಿಸಿದ್ದಾನೆ.

ಭಿಕ್ಷಾಟನೆಗೆ ಗುಡ್​ ಬೈ: ''ಮೊದಲಿಗೆ ಜೀವನ ನಿರ್ವಹಣೆಗೆ ಭಿಕ್ಷಾಟನೆ ಮಾಡುತ್ತಿದ್ದೆ. ನಂತರ ಸೆಕ್ಯೂರಿಟಿ ಕೆಲಸ ಆರಂಭಿಸಿದೆ. ಸರ್ಕಾರದಿಂದ ದ್ವಿಚಕ್ರ ವಾಹನ ಸಿಕ್ಕ ಬಳಿಕ ಸ್ವಿಗ್ಗಿ ಡೆಲಿವರಿ ಮಾಡ್ತಾ ಇದ್ದೇನೆ. ಗ್ರಾಹಕರು ಸಹಕರಿಸಿ ಟಿಪ್ಸ್​ ಕೂಡ ನೀಡುತ್ತಾರೆ. ನಾನು ಕಾಲು ಇಲ್ಲದೇ ದುಡಿಯುತ್ತಿದ್ದೇನೆ. ಕೈ ಮತ್ತು ಕಾಲು ಸರಿಯಿದ್ದವರೂ ಕೂಡಾ ಮನೆಯಲ್ಲಿ ಕೂರದೇ ದುಡಿದು ತಿನ್ನಬೇಕು" ಎನ್ನುವುದು ಪರಶುರಾಮನ ಸಂದೇಶ.

ಮೆಚ್ಚುಗೆ: ''ಪರಶುರಾಮನ ಬಗ್ಗೆ ಬಹಳ ಹೆಮ್ಮೆಪಡುತ್ತೇನೆ. ತುಂಬಾ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾನೆ. ಈತ ಯುವಕರಿಗೆ ಸ್ಫೂರ್ತಿ" ಎನ್ನುತ್ತಾರೆ ಡಿಂಕಿ ಡೈನ್ ಹೋಟೆಲ್​ ವ್ಯವಸ್ಥಾಪಕ ತೇಜ.

ಇದನ್ನೂ ಓದಿ: ಕೊನೆಗೂ ತನ್ನ ಮರಿಗಳೊಂದಿಗೆ ಸೇರಿದ ಶ್ವಾನ: ಇದರ ಹಿಂದಿದೆ ಒಂದು ಮನುಷ್ಯತ್ವದ ಕಥೆ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.