ಮಂಗಳೂರು: ನಗರದಲ್ಲಿ ಖಾಸಗಿ ಆಸ್ಪತ್ರೆಯ ಆ್ಯಂಬುಲೆನ್ಸ್ವೊಂದು ರಿವರ್ಸ್ ತೆಗೆಯುವ ವೇಳೆ ಬಿದ್ದು ಪಲ್ಟಿಯಾದ ಘಟನೆ ನಡೆದಿದೆ. ಮಂಗಳೂರಿನ ಫಳ್ನೀರ್ ಎಂಬಲ್ಲಿ ಈ ಘಟನೆ ಸಂಭವಿಸಿದೆ.
ಆ್ಯಂಬುಲೆನ್ಸ್ ಚಾಲಕ ವಾಹನವನ್ನು ತೊಳೆದು ರಿವರ್ಸ್ ತೆಗೆಯುವಾಗ ಈ ಘಟನೆ ನಡೆದಿದೆ. ಚಾಲಕ ವಾಹನವನ್ನು ರಿವರ್ಸ್ ತೆಗೆಯುವಾಗ ಹಿಂದುಗಡೆ ಇದ್ದ ಆಳವನ್ನು ಗಮನಿಸಿರಲಿಲ್ಲ. ತರಾತುರಿಯಲ್ಲಿ ಹಿಂದಕ್ಕೆ ತೆಗೆದುಕೊಂಡಾಗ ವಾಹನ ಪಲ್ಟಿಯಾಗಿ 8 ಅಡಿ ಆಳಕ್ಕೆ ಬಿದ್ದಿದೆ.
ಆ್ಯಂಬುಲೆನ್ಸ್ ಮೂರು ದ್ವಿಚಕ್ರ ವಾಹನಗಳ ಮೇಲೆ ಬಿದ್ದ ಪರಿಣಾಮ ಅವು ಜಖಂ ಆಗಿವೆ. ಘಟನೆಯಲ್ಲಿ ಆ್ಯಂಬುಲೆನ್ಸ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.