ETV Bharat / state

ಮದ್ಯ ಮಾರಾಟ ಮತ್ತೆ ಪ್ರಾರಂಭಿಸುವ ಸರ್ಕಾರದ ನಿರ್ಧಾರ ತಿರಸ್ಕರಿಸಲು ಜನತೆಗೆ ಕರೆ - ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ

ಮದ್ಯ ಮಾರಾಟ ಮತ್ತೆ ಪ್ರಾರಂಭಿಸುವ ಸರ್ಕಾರದ ನಿರ್ಧಾರವನ್ನು ರಾಜ್ಯದ ಜನತೆ ಸ್ವಯಂ ಪ್ರೇರಿತವಾಗಿ ತಿರಸ್ಕರಿಸಬೇಕೆಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳು ಕರೆ ನೀಡಿದ್ದಾರೆ.

AKhila Karnataka Janajagriti Forum calls
ಮದ್ಯ ಸೇವನೆ ಪುನಃ ಪ್ರಾರಂಭಿಸದಂತೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕರೆ
author img

By

Published : May 2, 2020, 11:38 PM IST

ಬೆಳ್ತಂಗಡಿ: ಮೇ 4ರಿಂದ ಕರ್ನಾಟಕ ರಾಜ್ಯವನ್ನು ಮದ್ಯ ಮಾರಾಟಕ್ಕೆ ಮುಕ್ತಗೊಳಿಸುವ ಸರ್ಕಾರದ ನಿರ್ಧಾರವನ್ನು ರಾಜ್ಯದ ಜನತೆ ಸ್ವಯಂ ಪ್ರೇರಿತವಾಗಿ ತಿರಸ್ಕರಿಸಬೇಕೆಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳು ಕರೆ ನೀಡಿದ್ದಾರೆ.

AKhila Karnataka Janajagriti Forum calls
ಮದ್ಯ ಮಾರಾಟ ಮತ್ತೆ ಪ್ರಾರಂಭಿಸುವ ಸರ್ಕಾರದ ನಿರ್ಧಾರ ತಿರಸ್ಕರಿಸಲು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕರೆ

ರಾಜ್ಯದ ಎಲ್ಲಾ ಸ್ವಸಹಾಯ ಸಂಘಗಳ ಸದಸ್ಯರು ಮತ್ತು ವೇದಿಕೆಯ ಸದಸ್ಯರಿಗೆ ಕಳುಹಿಸಲಾಗಿರುವ ಸಂದೇಶದಲ್ಲಿ ಮದ್ಯ ಸೇವನೆಯನ್ನು ಪುನಃ ಪ್ರಾರಂಭಿಸಬಾರದೆಂದು ವಿನಂತಿ ಮಾಡಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಹೆಚ್.ಮಂಜುನಾಥ್‌, ಗ್ರಾಮಾಭಿವೃದ್ಧಿ ಯೋಜನೆಯು ಇತ್ತೀಚೆಗೆ ನಡೆಸಿದ ಸರ್ವೇಕ್ಷಣಾ ವರದಿಗಳನ್ನು ಉಲ್ಲೇಖಿಸಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆಸಿದ ಈ ಸರ್ವೇಕ್ಷಣೆಯಲ್ಲಿ ಮದ್ಯ ಮಾರಾಟದ ಸ್ಥಗಿತದಿಂದ ಉಂಟಾದ ಪರಿಸ್ಥಿತಿಯ ಬಗ್ಗೆ ವಿಶ್ಲೇಷಿಸಲಾಗಿದೆ. ಕೋವಿಡ್ ಸಮಸ್ಯೆಯಿಂದ ಸರ್ಕಾರವು ಲಾಕ್‌ಡೌನ್ ಘೋಷಣೆ ಮಾಡಿದ ನಂತರದ 40 ದಿನಗಳಲ್ಲಿ ಮದ್ಯ ಸೇವನೆಯು 89% ಕಡಿಮೆಯಾಗಿ ಸಂಸಾರಗಳಲ್ಲಿ ಸಂತೋಷ, ನೆಮ್ಮದಿ ಹೆಚ್ಚಾಗಿದೆ. ಮದ್ಯ ಸೇವನೆ ಮಾಡದೇ ಇರುವುದರಿಂದ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗಿಲ್ಲ. ಉಳಿತಾಯ ಹೆಚ್ಚಾಗಿದೆ ಎಂದು ಸರ್ವೇಕ್ಷಣಾ ವರದಿಯಲ್ಲಿ ತಿಳಿಸಲಾಗಿದೆ.

ವೇದಿಕೆಯ ಗೌರವಾಧ್ಯಕ್ಷ ಡಾ. ವೀರೇಂದ್ರ ಹೆಗ್ಗಡೆಯವರು 40 ದಿನಗಳಿಂದ ಮದ್ಯ ಸೇವನೆಯನ್ನು ನಿಲ್ಲಿಸಿರುವ ಎಲ್ಲರೂ ಮದ್ಯಪಾನವನ್ನು ಶಾಶ್ವತವಾಗಿ ತ್ಯಜಿಸಬೇಕೆಂದು ಕರೆ ನೀಡಿದ್ದಾರೆ. ಅಲ್ಲದೆ ರಾಷ್ಟ್ರೀಯ ಮಟ್ಟದಲ್ಲಿ ಮದ್ಯ ನಿಷೇಧ ಘೋಷಣೆಯಾಗಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರವು ಮದ್ಯದ ಅಂಗಡಿಗಳನ್ನು ತೆರೆಯಲು ನಿರ್ಧರಿಸಿದರೂ ಮದ್ಯಪಾನ ನಿಷೇಧವನ್ನು ಜನತಾ ಚಳುವಳಿಯಾಗಿ ಮಾಡಿಕೊಂಡು ಯಾರೂ ಮದ್ಯದ ಅಂಗಡಿಯ ಬಳಿ ಸುಳಿಯಬಾರದೆಂದು ವೇದಿಕೆಯ ಅಧ್ಯಕ್ಷ ಶ್ರೀ ರಾಮಸ್ವಾಮಿ ವಿನಂತಿಸಿದ್ದಾರೆ.

ಧರ್ಮಸ್ಥಳ ಯೋಜನೆಯು ಪ್ರಾಯೋಜಿಸಿರುವ ಹೆಚ್ಚಿನ ಮಹಿಳಾ ಸಂಘದ ಸದಸ್ಯರ ಒಕ್ಕೊರಲ ಅಭಿಪ್ರಾಯ ಮದ್ಯ ಖರೀದಿಯನ್ನು ಸ್ಥಗಿತಗೊಳಿಸಬೇಕೆಂಬುದೇ ಆಗಿದೆ. ಈ ನಿಟ್ಟಿನಲ್ಲಿ ಕುಟುಂಬ ಮಟ್ಟದಲ್ಲಿ ದೇವರ ಹೆಸರಿನಲ್ಲಿ ಮದ್ಯ ಖರೀದಿಸದಂತೆ ಸಂಕಲ್ಪ ಮಾಡಬೇಕೆಂದು ವೇದಿಕೆಯು ಕರೆ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.