ETV Bharat / state

ದ.ಕ ಪೊಲೀಸ್ ಕಮಿಷನರ್ ಮುಂದೆ ಆಫ್ಘನ್​​​ ವಿದ್ಯಾರ್ಥಿಗಳ ಅಳಲು: ಪರಿಹಾರದ ಭರವಸೆ - Afghanistan crisis

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಆಫ್ಘನ್ ವಿದ್ಯಾರ್ಥಿಗಳು ಇಂದು ಮಂಗಳೂರು ಪೊಲೀಸ್ ಕಮಿಷನರ್​ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಒಂದಷ್ಟು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ‌. ಇದರಲ್ಲಿ ಈ ವರ್ಷ ಅಂತಿಮ ಪದವಿಯಲ್ಲಿರುವವರ ವೀಸಾ ಸೆಪ್ಟೆಂಬರ್​​ ಗೆ ಮುಗಿಯಲಿದೆ. ಅಲ್ಲದೇ, ಫೆಲೋಶಿಪ್ ಮುಗಿದಿರುವ ಅವರಿಗೆ ಇಲ್ಲಿಯೇ ಉದ್ಯೋಗ ದೊರಕಿಸಿಕೊಡಬೇಕು. ಆಫ್ಘನ್​ಗೆ ತೆರಳಿರುವ 11 ವಿದ್ಯಾರ್ಥಿಗಳು ಮತ್ತೆ ಮರಳಿ ಬಂದಲ್ಲಿ ಅವರಿಗೆ ಪರೀಕ್ಷೆಯ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

Afghanistan student met mangalore police commissioner
ಆಫ್ಘಾನ್​​​ ವಿದ್ಯಾರ್ಥಿಗಳು
author img

By

Published : Aug 21, 2021, 4:34 PM IST

ಮಂಗಳೂರು: ನಗರದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಆಫ್ಘನ್ ವಿದ್ಯಾರ್ಥಿಗಳು ಇಂದು ಮಂಗಳೂರು ಪೊಲೀಸ್ ಕಮಿಷನರ್​ ಅವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸಮಸ್ಯೆಗಳನ್ನು ಆಲಿಸಿದ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್., ವಿದ್ಯಾರ್ಥಿಗಳ ಸುರಕ್ಷತೆಗೆ ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದ್ದಾರೆ.

ಮಂಗಳೂರಿನಲ್ಲಿ ಒಟ್ಟು 58 ಆಫ್ಘನ್​ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅವರಲ್ಲಿ 11 ವಿದ್ಯಾರ್ಥಿಗಳು ಕಾರ್ಯ ನಿಮಿತ್ತ ಸ್ವದೇಶಕ್ಕೆ ತೆರಳಿದ್ದಾರೆ. ಉಳಿದ 47 ವಿದ್ಯಾರ್ಥಿಗಳು ಇಂದು ಪೊಲೀಸ್ ಕಮಿಷನರ್ ಭೇಟಿ ಮಾಡಿದ್ರು.

ದ.ಕ ಪೊಲೀಸ್ ಕಮಿಷನರ್ ಆಫ್ಘಾನ್​​​ ವಿದ್ಯಾರ್ಥಿಗಳ ಅಳಲು

ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ವಿವಿಯಯಲ್ಲಿ ಓದುತ್ತಿರುವ ಆಫ್ಘನ್​ ವಿದ್ಯಾರ್ಥಿನಿ ಫರ್ಕುಂದ, ತಾಲಿಬಾನ್​ಗಳು‌ ನಮ್ಮ ದೇಶದವರಲ್ಲ. ಆದರೆ, ಇದೀಗ ಅವರು ಅಫ್ಘಾನಿಸ್ತಾನವನ್ನು ಆಕ್ರಮಿಸಿದ್ದಾರೆ. ಇದರಿಂದ ಭಯಗೊಂಡಿರುವ ಆಫ್ಘನ್ನರು ದೇಶ ತೊರೆಯುತ್ತಿದ್ದಾರೆ. ನನ್ನ ಕುಟುಂಬದವರೂ ಆಫ್ಘನ್​ನಲ್ಲಿಯೇ ಇದ್ದು, ನಾನು ಕರೆ ಮಾಡಿ ವಿಚಾರಿಸುತ್ತಿದ್ದೇನೆ.

ಇತ್ತೀಚಿನ ಬೆಳವಣಿಗೆ ಬಳಿಕ ನನ್ನ ತಾಯಿ ಹಾಗೂ ಸಹೋದರಿ ಹೊರಗೆ ಹೋಗುತ್ತಿಲ್ಲ. ತಾಲಿಬಾನಿಗಳಿಂದ ಮಹಿಳೆಯರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಹೆಣ್ಮಕ್ಕಳು ಶಾಲಾ- ಕಾಲೇಜು, ಉದ್ಯೋಗಕ್ಕೆ ಹೋಗುವುದನ್ನು ನಿಲ್ಲಿಸಿದ್ದಾರೆ. ತಾಲಿಬಾನಿಗಳಿಗೆ ಮಹಿಳೆಯರೇ ಟಾರ್ಗೆಟ್ ಆಗಿದ್ದಾರೆ. ಆದರೂ, ಉಗ್ರರು ನಮ್ಮ ದೇಶ (ಅಫ್ಘಾನಿಸ್ತಾನ) ತೊರೆಯುವ ಭರವಸೆ ಇದೆ ಎಂದು ಹೇಳಿದರು.

ಆಫ್ಘನೀಸ್ ಅಸೋಸಿಯೇಟ್ ಸ್ಥಾಪಕ ಸಯ್ಯದ್ ಅನ್ವರ್ ಮಾತನಾಡಿ, ಮಂಗಳೂರು ಪೊಲೀಸ್ ಕಮಿಷನರ್ ಅವರನ್ನು ಇಂದು ಆಫ್ಘನ್​ನ ಎಲ್ಲ ವಿದ್ಯಾರ್ಥಿಗಳು ಭೇಟಿ ಮಾಡಿದ್ದು, ನಮ್ಮ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದಿದ್ದೇವೆ. ಅವರು ನಮ್ಮ ಸಮಸ್ಯೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ ಎಂದರು.

ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಮಾತನಾಡಿ, ಅಫ್ಘಾನಿಸ್ತಾನ ವಿದ್ಯಾರ್ಥಿಗಳ ಅಸೋಸಿಯೇಷನ್ ಆಫ್ಘನ್​ನಲ್ಲಿನ ಇತ್ತೀಚಿನ ಬೆಳವಣಿಗೆಯಿಂದ ಇಂದು ನನ್ನನ್ನು ಭೇಟಿಯಾಗಿದ್ದಾರೆ. ಅವರು ಒಂದಷ್ಟು ಬೇಡಿಕೆಗಳನ್ನು ನನ್ನ ಮುಂದಿಟ್ಟಿದ್ದಾರೆ‌. ಇದರಲ್ಲಿ ಈ ವರ್ಷ ಅಂತಿಮ ಪದವಿಯಲ್ಲಿರುವವರ ವೀಸಾ ಸೆಪ್ಟೆಂಬರ್ ಗೆ ಮುಗಿಯಲಿದೆ.

ಆದರೆ, ಅವರಿಗೆ ವಾಪಸ್ ಹೋಗಲು ಆಫ್ಘನ್​ನ ಪರಿಸ್ಥಿತಿ ಸೂಕ್ತವಾಗಿಲ್ಲ. ಫೆಲೋಶಿಪ್ ಮುಗಿದಿರುವ ಅವರಿಗೆ ಇಲ್ಲಿಯೇ ಉದ್ಯೋಗ ದೊರಕಿಸಿಕೊಡಬೇಕು. ಆಫ್ಘನ್​ಗೆ ತೆರಳಿರುವ 11 ವಿದ್ಯಾರ್ಥಿಗಳು ಮತ್ತೆ ಮರಳಿ ಬಂದಲ್ಲಿ ಅವರಿಗೆ ಪರೀಕ್ಷೆಯ ವ್ಯವಸ್ಥೆ ಮಾಡಬೇಕು.

ಅಲ್ಲದೇ ಭಾರತ ಸರ್ಕಾರದ ವಿವಿಧ ಸ್ಕೀಮ್ ಪ್ರಕಾರ ಹೊಸದಾಗಿ ಅಡ್ಮಿಷನ್ ಆಗುವವರಿಗೆ ವೀಸಾ ವ್ಯವಸ್ಥೆ ಮಾಡಬೇಕು ಸೇರಿ ಮುಂತಾದ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅದನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಮುಖೇನ ಕಳುಹಿಸಿಕೊಡುತ್ತೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.