ETV Bharat / state

ಪೊಲೀಸರನ್ನು ನಿಂದಿಸಿದ ಆರೋಪ: ಎಸ್​​ಡಿಪಿಐ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು - ಆರೋಪಿಗಳು ಕರ್ತವ್ಯನಿರತ ಪೊಲೀಸರಿಗೆ ನಿಂದಿಸುವ ವಿಡಿಯೋ ವೈರಲ್

ಮೇ .27 ರಂದು ನಡೆದ ಎಸ್​ಡಿಪಿಐ ಸಮಾವೇಶದಲ್ಲಿ ಭಾಗವಹಿಸಲು ತೆರಳುತ್ತಿದ್ದ ಕಾರ್ಯಕರ್ತರು ಪೊಲೀಸರನ್ನು ನಿಂದಿಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

Video of the accused being offensive to a policeman is viral
ಪೊಲೀಸರನ್ನು ನಿಂದಿಸಿದ ಎಸ್​​ಡಿಪಿಐ ಕಾರ್ಯಕರ್ತರು
author img

By

Published : May 29, 2022, 3:19 PM IST

Updated : May 29, 2022, 3:31 PM IST

ಮಂಗಳೂರು: ಮಂಗಳೂರಿನ ಹೊರವಲಯದ ಅಡ್ಯಾರ್ ಕಣ್ಣೂರಿನಲ್ಲಿ ಎರಡು ದಿನಗಳ ಹಿಂದೆ ನಡೆದ ಎಸ್​ಡಿಪಿಐ ಸಮಾವೇಶಕ್ಕೆ ತೆರಳುತ್ತಿದ್ದ ಕಾರ್ಯಕರ್ತನೋರ್ವ ಪೊಲೀಸರಿಗೆ ನಿಂದಿಸಿದ್ದಾನೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇ. 27 ರಂದು ನಡೆದ ಎಸ್​ಡಿಪಿಐ ಸಮಾವೇಶದಲ್ಲಿ ಭಾಗವಹಿಸಲು ತೆರಳುತ್ತಿದ್ದ ಕಾರ್ಯಕರ್ತರು ಪೊಲೀಸರಿಗೆ ನಿಂದಿಸಿ ಘೋಷಣೆಗಳನ್ನು ಕೂಗುತ್ತಾ, ಪೊಲೀಸರ ಮೇಲೆ ವಾಹನ ಹರಿಸುವ ಯತ್ನವನ್ನು ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ.

ಪೊಲೀಸರನ್ನು ನಿಂದಿಸಿದ ಎಸ್​​ಡಿಪಿಐ ಕಾರ್ಯಕರ್ತರು

ಕೊಡಕ್ಕಲ್ ಕಣ್ಣೂರು ಬ್ಯಾರಿಕೇಡ್ ಚೆಕ್ ಪೋಸ್ಟ್​​ನಲ್ಲಿ ಪೊಲೀಸ್ ಸಿಬ್ಬಂದಿಗಳಾದ ಪುಟ್ಟರಾಮ, ರವಿಕುಮಾರ್, ಜಗದೀಶ್ ಮೆಟಗುಡ್ಡ ಮತ್ತು ಸಂಗನ ಗೌಡರು ಬಂದೋಬದ್ತ್ ಕರ್ತವ್ಯ ಮಾಡುತ್ತಿದ್ದರು. ಈ ವೇಳೆ ಪಡೀಲ್ ಕಡೆಯಿಂದ ಬಂದ ಕೆ.ಟಿ.ಎಂ ಬೈಕ್​​ನ ಸವಾರ ಹಾಗೂ ಸಹ ಸವಾರ ಮತ್ತು ಕಾರ್​ನಲ್ಲಿದ್ದ ಸವಾರ ಹಾಗೂ ಇತರರು ನಿಂದಿಸಿದ್ದಾರೆ ಎನ್ನಲಾಗ್ತಿದೆ. ಆರೋಪಿಗಳು ಕರ್ತವ್ಯನಿರತ ಪೊಲೀಸರಿಗೆ ನಿಂದಿಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಕಾಂಗ್ರೆಸ್​​ ದಲಿತರಿಗೆ ಸಿಎಂ ಆಗುವ ಅವಕಾಶ ಕೊಡುತ್ತೆ: ಸಿದ್ದರಾಮಯ್ಯ ಭೇಟಿ ಬಳಿಕ ಪರಮೇಶ್ವರ್​ ಆಶಾಭಾವ

Last Updated : May 29, 2022, 3:31 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.