ETV Bharat / state

ಆ್ಯಸಿಡ್ ದಾಳಿ ಪ್ರಕರಣ: ಸ್ವಪ್ನಾ ಖಾತೆಗೆ ಸರ್ಕಾರದಿಂದ 3 ಲಕ್ಷ ರೂ ತುರ್ತು ಪರಿಹಾರ

ಆ್ಯಸಿಡ್ ದಾಳಿಗೊಳಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಪ್ನಾ ರವಿಕುಮಾರ್​​ಗೆ ತುರ್ತು ವೈದ್ಯಕೀಯ ವೆಚ್ಚಕ್ಕಾಗಿ ರಾಜ್ಯ ಸರ್ಕಾರದಿಂದ 3 ಲಕ್ಷ ರೂ. ಪರಿಹಾರದ ಹಣ ಜಮೆಯಾಗಿದೆ.

Acid attack case
ಸಪ್ನಾ ರವಿಕುಮಾರ್
author img

By

Published : Feb 8, 2020, 11:29 PM IST

ಕಡಬ: ಆ್ಯಸಿಡ್ ದಾಳಿಗೊಳಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋಡಿಂಬಾಳದ ಸಪ್ನಾ ರವಿಕುಮಾರ್​​ಗೆ ತುರ್ತು ವೈದ್ಯಕೀಯ ವೆಚ್ಚಕ್ಕಾಗಿ ರಾಜ್ಯ ಸರ್ಕಾರದಿಂದ 3 ಲಕ್ಷ ರೂ. ಪರಿಹಾರ ಹಣ ಜಮೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಬ್ಯಾಂಕ್ ರಜೆಯಿರುವ ಕಾರಣದಿಂದ ಸ್ಪಷ್ಟ ವಿವರ ಲಭಿಸಿಲ್ಲ ಎಂದು ತಿಳಿದು ಬಂದಿದೆ.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಸಂತ್ರಸ್ತೆ ದಾಖಲಾಗಿದ್ದ ಆಸ್ಪತ್ರೆಗೆ ಭೇಟಿ ನೀಡಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಒದಗಿಸಲು ಶಿಫಾರಸ್ಸು ಮಾಡಿರುವುದಾಗಿ ಭರವಸೆ ನೀಡಿದ್ದರು.

Acid attack case
ಜಮೆಯಾದ ಹಣ

ಈ ಕುರಿತಾಗಿ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ.ಲಕ್ಷ್ಮೀ ಪ್ರಸಾದ್ ಅವರ ಸೂಚನೆಯಂತೆ ಡಿವೈಎಸ್​ಪಿ ದಿನಕರ್​ ಶೆಟ್ಟಿ ನೇತೃತ್ವದ ತಂಡ ಆಸಿಡ್ ದಾಳಿಯ ಕುರಿತು ಸಮರ್ಪಕ ತನಿಖೆ ನಡೆಸಿತ್ತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅವರು ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿದ್ದರು.

ನೀತಿ ಸಾಮಾಜಿಕ ಸಂಘಟನೆ, ಬಿಜೆಪಿ ಮಹಿಳಾ ಮೋರ್ಚಾ ಸೇರಿದಂತೆ ವಿವಿಧ ಸಂಘಟನೆಗಳು ವೈದ್ಯಕೀಯ ವೆಚ್ಚ ಭರಿಸುವಂತೆ ಮತ್ತು ಸಂತ್ರಸ್ತ ಮಹಿಳೆ ಹಾಗೂ ಮಗುವಿಗೆ ಮತ್ತು ಅವರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದವು.

ಇದೀಗ ರಾಜ್ಯ ಸರ್ಕಾರ ಸಂತ್ರಸ್ತೆ ಸಪ್ನಾ ಅವರ ಬ್ಯಾಂಕ್ ಖಾತೆಗೆ ಪರಿಹಾರ ಮೊತ್ತ ಜಮೆ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆ್ಯಸಿಡ್ ದಾಳಿ ಬಳಿಕ ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.