ಮಂಗಳೂರು: ಅಪ್ರಾಪ್ತೆಗೆ ಮೊಬೈಲ್ ಗಿಫ್ಟ್ ನೀಡಿ ಆಕೆಯೊಂದಿಗೆ ಫೋನ್ನಲ್ಲಿ ಮಾತನಾಡುತ್ತ ಸ್ನೇಹ ಬೆಳೆಸಿದ ಆರೋಪಿ ಆಕೆಯ ಮನೆಗೆ ತೆರಳಿ ನಿರಂತರ ಅತ್ಯಾಚಾರ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಮಂಗಳೂರಿನ ಮಹಿಳಾ ಠಾಣೆಯಲ್ಲಿ ಆರೋಪಿ ವಿರುದ್ದ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಜೋಕಟ್ಟೆಯ ಅಬ್ದುಲ್ ರಫೂರ್ ಎಂಬಾತ ಆರೋಪಿ. ಈತ ಅಪ್ರಾಪ್ತೆಗೆ ಒಂದೂವರೆ ವರ್ಷದ ಹಿಂದೆ ಮೊಬೈಲ್ ಫೋನ್ ತೆಗೆದುಕೊಟ್ಟಿದ್ದ. ಬಳಿಕ ಆಕೆಯ ಜೊತೆ ಫೋನ್ನಲ್ಲಿ ಮಾತಾಡುವುದು ಮತ್ತು ಸಂದೇಶ ಕಳುಹಿಸುತ್ತಿದ್ದ. 2020ರ ಅಕ್ಟೋಬರ್ ಮೊದಲ ವಾರದಿಂದ ಈತ ಬಾಲಕಿಯ ಮನೆಗೆ ರಾತ್ರಿ ಬರಲು ಆರಂಭಿಸಿದ್ದಾನೆ. ಪ್ರತಿದಿನ ರಾತ್ರಿ 1 ಗಂಟೆಗೆ ಆಕೆಯ ಮನೆಯ ಕಾಂಪೌಂಡ್ ಗೋಡೆಯನ್ನು ಹಾರಿ ಬರುತ್ತಿದ್ದ ಈತ ಬಾಲ್ಕನಿಯ ಬಾಗಿಲನ್ನು ತೆಗೆಯುವಂತೆ ಒತ್ತಾಯಿಸುತ್ತಿದ್ದ. ಬಳಿಕ ಒಳಬಂದು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಬಾಲಕಿಗೆ ಜೂನ್ 9ರಂದು ಹೊಟ್ಟೆನೋವು ಕಾಣಿಸಿಕೊಂಡಿದ್ದು, ತಪಾಸಣೆಗೆ ವೈದ್ಯರಲ್ಲಿಗೆ ಕರೆದೊಯ್ದಾಗ ಗರ್ಭಿಣಿ ಎಂದು ತಿಳಿದುಬಂದಿದೆ. ಬಳಿಕ ಬಾಲಕಿಯನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಮಹಿಳಾ ಠಾಣೆಯಲ್ಲಿ ಆರೋಪಿ ವಿರುದ್ದ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಿಕ್ಕಿ ಕೌಶಲ್ - ನಟಿ ಕತ್ರಿನಾ ನಡುವಿನ ಸಂಬಂಧ ನಿಜವಂತೆ; ಸ್ಟಾರ್ ನಟನ ಮಗನಿಂದ ಬಯಲಾಯ್ತು ಸತ್ಯ..!