ಮಂಗಳೂರು : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮತ್ತು ಭಾರತದ ಖ್ಯಾತ ಐಟಿ ಕಂಪನಿ ಟಿಸಿಎಸ್ ಐಯಾನ್ ಜೊತೆಗೆ ಶೈಕ್ಷಣಿಕ ಒಪ್ಪಂದ ನಡೆದಿದೆ. ಟಿಸಿಎಸ್ ಐಯಾನ್, ಟಾಟಾ ಕನ್ಸ್‌ಲ್ಟನ್ಸಿ ಸರ್ವೀಸಸ್‍ನ ಭಾಗವಾಗಿದೆ.
ಸಲಹೆ ಮತ್ತು ವ್ಯವಹಾರ ಪರಿಹಾರದಲ್ಲಿ ಕುಶಲತೆಯನ್ನು ಹೊಂದಿರುವ ಈ ಸಂಸ್ಥೆಯೊಂದಿಗಿನ ಒಪ್ಪಂದವು ಆಳ್ವಾಸ್ ಎಂನಿಯರಿಂಗ್ ಕಾಲೇಜು ಹಾಗೂ ಆಳ್ವಾಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ನವಯುಗದ ಉದ್ಯಮ ಹೊಂದಾಣಿಕೆಯ, ಕೌಶಲ್ಯ ಹಾಗೂ ಉದ್ಯಮ ಪ್ರವೃತ್ತಿಯ ಇಂಟರ್ನ್ಶಿಪ್ ಅವಕಾಶವನ್ನು ಟಿಸಿಎಸ್ ಐಯಾನ್‍ನ ಐಹೆಚ್‍ಸಿ (ಇಂಡಸ್ಟ್ರಿ ಆನರ್ ಸರ್ಟಿಫಿಕೇಶನ್) ಮತ್ತು ಆರ್‍ಐಒ (ರಿಮೋಟ್ ಇಂಟರ್ನ್‍ಶಿಪ್ ಅಪಾರ್ಚುನಿಟಿಸ್) ಮೂಲಕ ಒದಗಿಸಿ ಕೊಡಲಿದೆ.
ಕರ್ನಾಟಕದ ಎಂಜಿನಿಯರಿಂಗ್ ಕಾಲೇಜುಗಳ ಪೈಕಿ ಆಳ್ವಾಸ್ ಕಾಲೇಜು ಟಿಸಿಎಸ್ ಐಯಾನ್‍ನ ಒಡಂಬಡಿಕೆಗೆ ಒಳಪಡುತ್ತಿರುವ ಮೊದಲ ಕಾಲೇಜು ಎಂಬ ಹೆಮ್ಮೆಗೆ ಪಾತ್ರವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ತಿಳಿಸಿದ್ದಾರೆ.
ಈ ಕೋರ್ಸ್ಗಳು ಆಳ್ವಾಸ್ ವಿದ್ಯಾರ್ಥಿ ಸಮೂಹಕ್ಕೆ ಔದ್ಯೋಗಿಕ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯ ಹಾಗೂ ಹೆಚ್ಚಿನ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗಬಲ್ಲ ಕ್ಷೇತ್ರಗಳಾದ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ರೊಬೋಟಿಕ್ಸ್, ಕ್ಲೌಡ್‍ಕಂಪ್ಯುಟಿಂಗ್, ಡಾಟಾ ಮೈನಿಂಗ್, ಅನಾಲಿಟಿಕ್ಸ್, ಐಒಟಿ ಮತ್ತು ಸೈಬರ್ ಸೆಕ್ಯುರಿಟಿ ಮುಂತಾದ ಏರಿಯಾಗಳಲ್ಲಿ ಪರಿಣತಿ ಹೊಂದಲು ಸಹಾಯ ಮಾಡಲಿದೆ. ಟಿಸಿಎಸ್ ಐಯಾನ್‍ನ ಐಹೆಚ್‍ಸಿ (ಇಂಡಸ್ಟ್ರಿ ಆನರ್ ಸರ್ಟಿಫಿಕೇಶನ್) ಕೋರ್ಸ್‍ಗಳನ್ನು ಶೈಕ್ಷಣಿಕ ಚೌಕಟ್ಟಿಗೆ ಸರಿಹೊಂದುವಂತೆ ರೂಪಿಸಲಾಗಿದೆ.
ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರದ ಪರಿಣತರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಟಿಸಿಎಸ್ ಐಯಾನ್ ವರ್ಷದಲ್ಲಿ 15 ವಾರಗಳ ಇಂಡಸ್ಟ್ರಿ ಆನರ್ ಪ್ರಮಾಣಪತ್ರ ನೀಡಲಿದೆ. ಹೀಗಾಗಿ ವಿದ್ಯಾರ್ಥಿಗಳು ಉತ್ತಮ ಕೌಶಲ್ಯಗಳನ್ನು ಕಲಿಯುವುದರ ಜೊತೆಗೆ ಅವುಗಳನ್ನು ಔದ್ಯೋಗಿಕ ಕ್ಷೇತ್ರದಲ್ಲಿ ಅದರ ಅನ್ವಯಿಕತೆಯ ಕುರಿತು ನಿಖರ ಮಾಹಿತಿ ಪಡೆಯಲಿದ್ದಾರೆ.
ಟಿಸಿಎಸ್ ಐಯಾನ್‍ನ ಆರ್‍ಐಒ(ರಿಮೋಟ್ ಇಂಟರ್ನ್‍ಶಿಪ್)ಇದೊಂದು ವಿನೂತನ ಡಿಜಿಟಲ್ ಇಂಟರ್ನ್ಶಿಪ್ ಪ್ರೊಜೆಕ್ಟ್ ಆಗಿದ್ದು, ಆಳ್ವಾಸ್ ವಿದ್ಯಾರ್ಥಿಗಳು ಕಾರ್ಪೊರೇಟ್ ಹಾಗೂ ಔದ್ಯೋಗಿಕ ಕ್ಷೇತ್ರದ ಸಾಧಕರ ಜೊತೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ. ಒಟ್ಟು 45 ರಿಂದ 60 ದಿನಗಳ ಇಂಟರ್ನ್‌ಶಿಪ್ ಅವಕಾಶವನ್ನು ವಿದ್ಯಾರ್ಥಿಗಳು ಪಡೆಯಲಿದ್ದಾರೆ. ಜೊತೆಗೆ ನಿಖರ ಕಲಿಕಾ ವಾತಾವರಣವನ್ನು ನಿರ್ಮಿಸುವುದಲ್ಲದೇ, ಇಂಟರ್ನ್ಶಿಪ್ ಯೋಜನೆಗಳನ್ನು ಕಾರ್ಯಗತಗೊಳಿಸಲು ಒಳ್ಳೆಯ ವೇದಿಕೆ ನೀಡುತ್ತದೆ.