ETV Bharat / state

ABVP protest: ಮಂಗಳೂರಿನಲ್ಲಿ ಸಂಶುಲ್ ಇಸ್ಲಾಂ ಉಪನ್ಯಾಸ.. ಎಬಿವಿಪಿ ಕಾರ್ಯಕರ್ತರಿಂದ ಪ್ರತಿಭಟನೆ - ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನ

ABVP protest in Mangaluru: ಪ್ರತಿಭಟನೆ ವೇಳೆ ಹಲವು ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Sanshul Islam lecture in Mangalore
ಮಂಗಳೂರಿನಲ್ಲಿ ಸಂಶುಲ್ ಇಸ್ಲಾಂ ಉಪನ್ಯಾಸ
author img

By ETV Bharat Karnataka Team

Published : Sep 9, 2023, 12:33 PM IST

Updated : Sep 9, 2023, 1:03 PM IST

ಮಂಗಳೂರು: ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಆಯೋಜಿಸಲಾದ ಸಂಶುಲ್ ಇಸ್ಲಾಂ ಅವರ ಉಪನ್ಯಾಸಕ್ಕೆ ಎಬಿವಿಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದು, ಹಲವರನ್ನು ವಶಕ್ಕೆ ಪಡೆಯಲಾಗಿದೆ.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಬಿ ವಿ ಕಕ್ಕಿಲ್ಲಾಯ ಅವರ ಸ್ಮರಣಾರ್ಥ ಬಿ ವಿ ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸವನ್ನು ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ದಿಲ್ಲಿ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಸಂಶುಲ್ ಇಸ್ಲಾಂ ಅವರು ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಂಶುಲ್ ಇಸ್ಲಾಂ ಅವರ 'ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ 1857- ಹೇಳದೆ ಉಳಿದ ಅದ್ಭುತ ಕಥೆಗಳು' ಎಂಬ ಕನ್ನಡ ಅನುವಾದದ ಕೃತಿಯನ್ನು ಬಿಡುಗಡೆಗೊಳಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಎಬಿವಿಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ವಿಶ್ವವಿದ್ಯಾಲಯ ಕಾಲೇಜಿನ ಹೊರಭಾಗದ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ವೇಳೆ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ. ಕಾಲೇಜಿನ ಎಬಿವಿಪಿ ವಿದ್ಯಾರ್ಥಿಗಳು ಕೂಡ ಕಾಲೇಜಿನ ಒಳಗೆ ಪ್ರತಿಭಟನೆ ನಡೆಸಿದರು.

ಇವತ್ತು ನಡೆಸಿದ ಕಾರ್ಯಕ್ರಮ ಸ್ಫೂರ್ತಿದಾಯಕವಾದದ್ದು. ಆ ಕಾರ್ಯಕ್ರಮಕ್ಕೆ ನಮ್ಮ ವಿರೋಧವಿಲ್ಲ. ಆದರೆ ಈ ಕಾರ್ಯಕ್ರಮಕ್ಕೆ ಬಂದಿರುವ ಅತಿಥಿ ಸಂಶುಲ್ ಇಸ್ಲಾಂ ಅವರ ಭಾಗವಹಿಸುವಿಕೆಗೆ ನಮ್ಮ ವಿರೋಧವಿದೆ. ಅವರು ಈ ಹಿಂದೆ ಹಲವು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸಾವರ್ಕರ್ ವಿರುದ್ಧ ಮಾತನಾಡಿದ್ದರು. ಇಂತಹವರು ನಮ್ಮ ಕಾಲೇಜಿಗೆ ಬರುವುದು ಬೇಡ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಇನ್ನು ಸಂಶುಲ್ ಇಸ್ಲಾಂ ಅವರು ಮಾತನಾಡಿ, ನಾನು ಸಾವರ್ಕರ್ ವಿರೋಧಿ ಮಾತ್ರವಲ್ಲ, ಜಿನ್ನಾ ಅವರ ವಿರೋಧಿ ಕೂಡ ಹೌದು. ನಾನು ದೇಶ ವಿರೋಧಿಗಳ ವಿರೋಧಿಯಾಗಿದ್ದೇನೆ. ಜಿನ್ನಾ ಮತ್ತು ಸಾವರ್ಕರ್ ಎರಡು ದೇಶದ ಸ್ಥಾಪನೆಯ ಬಗ್ಗೆ ಒಲವು ಹೊಂದಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ ಜಯರಾಜ್ ಅಮೀನ್, ಪತ್ರಿಕೆಯೊಂದರ ಸಂಪಾದಕ ಡಾ ಸಿದ್ಧನಗೌಡ ಪಾಟೀಲ್, ವೈದ್ಯ ಡಾ ಶ್ರೀನಿವಾಸ ಕಕ್ಕಿಲ್ಲಾಯ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿತ್ತು.

ಇದನ್ನೂ ಓದಿ : ಲೋಕಸಭೆ ಚುನಾವಣೆ ಬಳಿಕ ಪಕ್ಷ ತೊರೆದ ನಾಯಕರ ಕಥೆ ನಾಯಿಪಾಡು: ಮಾಜಿ ಸಚಿವ ಬಿ ಸಿ ಪಾಟೀಲ್​

Last Updated : Sep 9, 2023, 1:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.