ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಪುರ ಸಮುದ್ರ ತೀರದಲ್ಲಿ ಅಪರಿಚಿತ ಮಹಿಳೆಯ ಅರ್ಧ ಮೃತದೇಹ ಪತ್ತೆಯಾಗಿದೆ.
ಮೃತದೇಹದಲ್ಲಿ ಸೊಂಟದಿಂದ ಕೆಳಗಿನ ಭಾಗ ಮಾತ್ರ ಇದ್ದು, ಉಳಿದ ದೇಹ ಪತ್ತೆಯಾಗಿಲ್ಲ. ಕೋಟೆಪುರದ ಸಮುದ್ರ ತೀರಕ್ಕೆ ಈ ಮೃತದೇಹವು ಎಲ್ಲಿಂದಲೋ ಕೊಚ್ಚಿ ಬಂದಿದ್ದು, ಎರಡೂ ಕಾಲುಗಳಲ್ಲಿ ಕಾಲ್ಗೆಜ್ಜೆ ಹಾಗೂ ಕಾಲುಂಗುರಗಳಿವೆ. ಮೃತದೇಹ ಯಾರದು, ಕೊಲೆಯೋ, ಆತ್ಮಹತ್ಯೆಯೋ ಎಂಬುವುದು ತನಿಖೆಯಿಂದಷ್ಟೇ ತಿಳಿದುಬರಬೇಕಾಗಿದೆ.
![dead body](https://etvbharatimages.akamaized.net/etvbharat/prod-images/kn-mng-01-womendeadbody-script-ka10015_01092019214221_0109f_1567354341_1068.jpg)
ಇನ್ನು ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.