ಮಂಗಳೂರು: ಲಾಕ್ಡೌನ್ನಿಂದಾಗಿ ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಹಲವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆ ಇಂತವರ ಸಹಾಯಕ್ಕಾಗಿ ಹಲವಾರು ಸಂಘ-ಸಂಸ್ಥೆಗಳು ಕೈ ಜೋಡಿಸಿವೆ. ಇದೀಗ ಇಂತಹ ಸಂಸ್ಥೆಯೊಂದಕ್ಕೆ ತಮ್ಮ ಅರ್ಧ ತಿಂಗಳ ಸಂಬಳ ನೀಡಿ ಪೊಲೀಸ್ ಪೇದೆಯೊಬ್ಬರು ಮಾದರಿಯಾಗಿದ್ದಾರೆ.
ಪುತ್ತೂರಿನ ಪಾಣಾಜೆಯಲ್ಲಿರುವ ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ಗೆ ಮುಖ್ಯ ಪೇದೆ ಶ್ರೀಹರಿ ಎನ್.ಎಸ್. ಎಂಬುವವರು ತಮ್ಮ ತಿಂಗಳ ಅರ್ಧ ಸಂಬಳವನ್ನೇ ನೀಡಿ, ಬಡವರಿಗೆ ಆಹಾರ ಪದಾರ್ಥಗಳ ಕಿಟ್ ಒದಗಿಸಲು ಸಹಾಯ ಮಾಡಿದ್ದಾರೆ.
ಈ ಹಿಂದೆ ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ನ ಸದಸ್ಯರಾಗಿದ್ದ ಪೇದೆ ಶ್ರೀಹರಿ, ಸರ್ಕಾರಿ ನೌಕರಿ ಸಿಕ್ಕ ನಂತರ ಟ್ರಸ್ಟ್ನಿಂದ ದೂರವಾಗಿದ್ದರು. ಇದೀಗ ಟ್ರಸ್ಟ್ ಮಾಡುತ್ತಿರುವ ಸಮಾಜಮುಖಿ ಕಾರ್ಯ ನೋಡಿ ತಮ್ಮ ಕೈಲಾಗುವ ಸಹಾಯ ಮಾಡುತ್ತಿದ್ದಾರೆ.
ಇನ್ನು ಈ ಟ್ರಸ್ಟ್ ಲಾಕ್ಡೌನ್ನಿಂದ ಸಮಸ್ಯೆಗೊಳಗಾದ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ಒದಗಿಸುತ್ತಿದೆ ಎಂದು ತಿಳಿದ ಅವರು, ತಮ್ಮ ಸಂಬಳದಲ್ಲಿ ಅರ್ಧ ಭಾಗ ನೀಡಿ ಮಾನವೀಯತೆ ಮೆರೆದಿದ್ದಾರೆ. ಈಗಾಗಲೇ 110 ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ಒದಗಿಸಿರುದ ಟ್ರಸ್ಟ್, ಇನ್ನಷ್ಟು ಜನರ ಸೇವೆಗೆ ಅಣಿಯಾಗುತ್ತಿದೆ. ಇನ್ನು ಬಡವರ ಕಷ್ಟಕ್ಕೆ ನೆರವಾದ ಮುಖ್ಯ ಪೇದೆ ಶ್ರೀಹರಿಯ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.