ಸುಳ್ಯ (ದಕ್ಷಿಣ ಕನ್ನಡ): ತಾಲೂಕಿನ ಗುತ್ತಿಗಾರು ಸಮೀಪ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರು ಧ್ವಜ ಸ್ತಂಭದ ಬಳಿ ನಿಂತು ಆರೋಹಣಗೊಂಡಿದ್ದ ಧ್ವಜಕ್ಕೆ ಸೆಲ್ಯೂಟ್ ಹೊಡೆದಿರುವ ಫೋಟೊ ಇದೀಗ ಎಲ್ಲೆಡೆ ವೈರಲ್ ಆಗಿದೆ. ಮಹಿಳೆಯ ರಾಷ್ಟ್ರಪ್ರೇಮಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಗುತ್ತಿಗಾರು ಗ್ರಾಮದ ಮೊಗ್ರ ಏರಣಗುಡ್ಡೆಯಲ್ಲಿ ಗಾಂಧಿ ವಿಚಾರ ವೇದಿಕೆಯ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ನಡೆದಿತ್ತು. ಧ್ವಜಾರೋಹಣ ನಡೆಸಿ ಅತಿಥಿಗಳು ತೆರಳಿದ್ದರು. ಕಾರ್ಯಕ್ರಮದ ಸಂಘಟಕರಲ್ಲಿ ಕೆಲವರು ಅಲ್ಲಿಯೇ ಸಮೀಪ ಮಾತುಕತೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಕೂಲಿ ಕೆಲಸಕ್ಕೆ ಕತ್ತಿ ಸಹಿತವಾಗಿ ತೆರಳುತ್ತಿದ್ದ ಪರಮೇಶ್ವರಿ ಎಂಬವರು, ನೇರವಾಗಿ ಧ್ವಜ ಸ್ತಂಭದ ಬಳಿಗೆ ಆಗಮಿಸಿ ಚಪ್ಪಲಿ ತೆಗೆದು ಧ್ವಜ ವಂದನೆ ಮಾಡಿದ್ದಾರೆ. ಬಳಿಕ ಕೆಲಸಕ್ಕೆ ತೆರಳಿದ್ದಾರೆ.
-
ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮದ ನಂತರ ತನ್ನ ದೈನಂದಿನ ಕೆಲಸಕ್ಕೆ ಹೊರಟಿದ್ದ ಮಾತೆಯೊಬ್ಬರು ರಾಷ್ಟ್ರಧ್ವಜವನ್ನು ಕಂಡು, ಚಪ್ಪಲಿ ತೆಗೆದು ಧ್ವಜಕ್ಕೆ ಸೆಲ್ಯೂಟ್ ಮಾಡಿ ತನ್ನ ಪಾಡಿಗೆ ಕೆಲಸಕ್ಕೆ ಹೊರಟು ಹೋದರಂತೆ.
— C T Ravi 🇮🇳 ಸಿ ಟಿ ರವಿ (@CTRavi_BJP) August 15, 2021 " class="align-text-top noRightClick twitterSection" data="
ಇದು ಭಾರತ... ಇದು ಸಂಭ್ರಮ... ಇದು ಶ್ರದ್ಧೆ... ಇದು ಭಕ್ತಿ... pic.twitter.com/nYlW9WUygx
">ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮದ ನಂತರ ತನ್ನ ದೈನಂದಿನ ಕೆಲಸಕ್ಕೆ ಹೊರಟಿದ್ದ ಮಾತೆಯೊಬ್ಬರು ರಾಷ್ಟ್ರಧ್ವಜವನ್ನು ಕಂಡು, ಚಪ್ಪಲಿ ತೆಗೆದು ಧ್ವಜಕ್ಕೆ ಸೆಲ್ಯೂಟ್ ಮಾಡಿ ತನ್ನ ಪಾಡಿಗೆ ಕೆಲಸಕ್ಕೆ ಹೊರಟು ಹೋದರಂತೆ.
— C T Ravi 🇮🇳 ಸಿ ಟಿ ರವಿ (@CTRavi_BJP) August 15, 2021
ಇದು ಭಾರತ... ಇದು ಸಂಭ್ರಮ... ಇದು ಶ್ರದ್ಧೆ... ಇದು ಭಕ್ತಿ... pic.twitter.com/nYlW9WUygxಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮದ ನಂತರ ತನ್ನ ದೈನಂದಿನ ಕೆಲಸಕ್ಕೆ ಹೊರಟಿದ್ದ ಮಾತೆಯೊಬ್ಬರು ರಾಷ್ಟ್ರಧ್ವಜವನ್ನು ಕಂಡು, ಚಪ್ಪಲಿ ತೆಗೆದು ಧ್ವಜಕ್ಕೆ ಸೆಲ್ಯೂಟ್ ಮಾಡಿ ತನ್ನ ಪಾಡಿಗೆ ಕೆಲಸಕ್ಕೆ ಹೊರಟು ಹೋದರಂತೆ.
— C T Ravi 🇮🇳 ಸಿ ಟಿ ರವಿ (@CTRavi_BJP) August 15, 2021
ಇದು ಭಾರತ... ಇದು ಸಂಭ್ರಮ... ಇದು ಶ್ರದ್ಧೆ... ಇದು ಭಕ್ತಿ... pic.twitter.com/nYlW9WUygx
ಇದನ್ನೂ ಓದಿ: ಕಬಕದಲ್ಲಿ ದಾಂಧಲೆ ಮಾಡಿದ SDPI ಕಾರ್ಯಕರ್ತರ ಮೇಲೆ ಕ್ರಮಕ್ಕೆ ಸಚಿವ ಅಂಗಾರ ಸೂಚನೆ
ಮಹಿಳೆ ಧ್ವಜಕ್ಕೆ ಸೆಲ್ಯೂಟ್ ಹೊಡೆಯುತ್ತಿರುವ ಫೋಟೊವನ್ನು ಗಾಂಧಿ ವಿಚಾರ ವೇದಿಕೆಯ ತಾಲೂಕು ಅಧ್ಯಕ್ಷ ಲಕ್ಷ್ಮೀಶ ಗಬ್ಲಡ್ಕ ತನ್ನ ಮೊಬೈಲಿನಲ್ಲಿ ಸೆರೆ ಹಿಡಿದು, ತಮ್ಮ ವೇದಿಕೆಯ ಗುಂಪಿನಲ್ಲಿ ಹಂಚಿಕೊಂಡಿದ್ದಾರೆ.
ಈ ವೈರಲ್ ಫೋಟೋವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸೇರಿದಂತೆ ಹಲವು ಗಣ್ಯರು ತಮ್ಮ ಫೇಸ್ಬುಕ್, ಟ್ವಿಟ್ಟರ್ ಪೇಜ್ಗಳಲ್ಲಿ ಹಂಚಿಕೊಂಡು ಮಹಿಳೆಯನ್ನು ಶ್ಲಾಘಿಸಿದ್ದಾರೆ.