ETV Bharat / state

ಭಾಗವತ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ನೂತನ ಮೇಳ: ನವೆಂಬರ್ ಅಂತ್ಯದಿಂದ ತಿರುಗಾಟ ಆರಂಭ - ಮಂಗಳೂರು ಸುದ್ದಿ

ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವದಲ್ಲಿ ನೂತನ ಯಕ್ಷಗಾನ ಮೇಳವೊಂದು ಪ್ರದರ್ಶನ ನಡೆಸಲಿದೆ ಎಂಬ ಸುದ್ದಿಯೊಂದು ಯಕ್ಷಗಾನ ವಲಯದಲ್ಲಿ ಹರಿದಾಡುತ್ತಿತ್ತು. ಇದೀಗ ಈ ಗಾಳಿಸುದ್ದಿಗೆ ಅಧಿಕೃತ ಮುದ್ರೆ ಬಿದ್ದಂತಾಗಿದ್ದು, ಯಕ್ಷಗಾನ ಪ್ರೇಮಿಗಳಿಗೆ ಸಂತಸದ ಸುದ್ದಿಯಾಗಿದೆ.

Yakshagana
ಪಟ್ಲ ಸತೀಶ್ ಶೆಟ್ಟಿ
author img

By

Published : Oct 17, 2020, 8:09 PM IST

ಮಂಗಳೂರು: ಕಳೆದ ವರ್ಷ ಕಟೀಲು ಮೇಳದಿಂದ ಹೊರಹಾಕಲ್ಪಟ್ಟ ಪ್ರಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ನೂತನ ಮೇಳವೊಂದು ಈ ಬಾರಿ ಯಕ್ಷಗಾನ ತಿರುಗಾಟ ನಡೆಸಲಿದೆ ಎಂದು ಕೆಲ ದಿನಗಳಿಂದ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಇಂದು ತೆರೆಬಿದ್ದಿದೆ. ಸ್ವತಃ ಪಟ್ಲ ಸತೀಶ್ ಶೆಟ್ಟಿಯವರೇ ಇಂದು ಮಾಧ್ಯಮದ ಮುಂದೆ ಬಂದು ಈ ಸುದ್ದಿ ಹೌದು ಎಂದು ಸ್ಪಷ್ಟನೆ ನೀಡಿದ್ದಾರೆ.

ನೂತನ ಮೇಳದ ಕುರಿತಾಗಿ ಮಾತನಾಡಿದ ಭಾಗವತ ಪಟ್ಲ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಐದನೇ ಮೇಳದ ಪ್ರಧಾನ ಭಾಗವತರಾಗಿದ್ದ ಪಟ್ಲ ಸತೀಶ್ ಶೆಟ್ಟಿಯವರನ್ನು ನಾಲ್ಕನೇ ಮೇಳಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದನ್ನು ವಿರೋಧಿಸಿ ಐದನೇ ಮೇಳದ ಸುಮಾರು 10 ಕಲಾವಿದರು ಬಂಡಾಯವೆದ್ದರು. ಇದರಿಂದ ದೇವಳದ ಆಡಳಿತ ಮಂಡಳಿ ಹಾಗೂ ಮೇಳದ ಯಜಮಾನರು ಆ ಕಲಾವಿದರನ್ನು ಮೇಳದಿಂದ ಹೊರ ಕಳುಹಿಸಿದ್ದರು. ಬಳಿಕ ಈ ವಿಚಾರ ಕೋರ್ಟ್ ಮೆಟ್ಟಲೇರಿತ್ತು. ಈಗಲೂ ಈ ವಿಚಾರ ಕೋರ್ಟ್ ವಿಚಾರಣೆಯಲ್ಲಿದೆ. ಅದರ ಮರುವರ್ಷ ಪಟ್ಲ ಸತೀಶ್ ಶೆಟ್ಟಿಯವರನ್ನು ಒಂದನೇ ಮೇಳಕ್ಕೆ ಪ್ರಧಾನ ಭಾಗವತಿಕೆಯಿಂದ ತೆಗೆದು ಎರಡನೇ ಭಾಗವತರಾಗಿ ಹಾಕಲಾಯಿತು.

ಕಳೆದ ವರ್ಷ ಮೇಳದ ಮೊದಲ ತಿರುಗಾಟದ ದಿನವೇ ಭಾಗವತಿಕೆ ಮಾಡಲು ಹೊರಟವರನ್ನು ರಂಗಸ್ಥಳದಿಂದಲೇ ಕೆಳಗಿಳಿಸಲಾಯಿತು. ಇದು ಇಡೀ ಯಕ್ಷಗಾನ ಹಾಗೂ ಪ್ರೇಕ್ಷಕರ ವಲಯದಲ್ಲೂ ಬಹುದೊಡ್ಡ ಸುದ್ದಿಯಾಗಿತ್ತು. ಆ ಬಳಿಕ ಕಳೆದ ವರ್ಷ ಪೂರ್ತಿ ಪಟ್ಲ ಸತೀಶ್ ಶೆಟ್ಟಿಯವರು ಕಟೀಲು ಹಾಗೂ ಧರ್ಮಸ್ಥಳ ಮೇಳವನ್ನು ಹೊರತುಪಡಿಸಿ ಮಿಕ್ಕ ಹೆಚ್ಚಿನ ತೆಂಕುತಿಟ್ಟಿನ ಮೇಳಗಳಿಗೆ ಅತಿಥಿ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಈ ನಡುವೆ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವದಲ್ಲಿ ನೂತನ ಯಕ್ಷಗಾನ ಮೇಳವೊಂದು ಪ್ರದರ್ಶನ ನಡೆಸಲಿದೆ ಎಂಬ ಸುದ್ದಿಯೊಂದು ಯಕ್ಷಗಾನ ವಲಯದಲ್ಲಿ ಹರಿದಾಡುತ್ತಿತ್ತು. ಇದೀಗ ಈ ಗಾಳಿಸುದ್ದಿಗೆ ಅಧಿಕೃತ ಮುದ್ರೆ ಬಿದ್ದಂತಾಗಿದ್ದು, ಯಕ್ಷಗಾನ ಪ್ರೇಮಿಗಳಿಗೆ ಸಂತಸದ ಸುದ್ದಿಯಾಗಿದೆ.

ಈ ಬಗ್ಗೆ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಶಶೀಂದ್ರ ಕುಮಾರ್ ಮಾತನಾಡಿ, ನಮ್ಮ ಕ್ಷೇತ್ರದ ವತಿಯಿಂದ ಈ ಬಾರಿಯಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಎಂಬ ನೂತನ ಯಕ್ಷಗಾನ ಮೇಳ ತಿರುಗಾಟ ನಡೆಸಲಿದೆ. ಅಕ್ಟೋಬರ್ 26 ವಿಜಯದಶಮಿ‌ಯಂದು ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವಠಾರದಲ್ಲಿ ಯಕ್ಷಗಾನ ಪ್ರದರ್ಶನದೊಂದಿಗೆ ಮೇಳ ಉದ್ಘಾಟನೆಗೊಳ್ಳಲಿದೆ. ನವೆಂಬರ್‌ 27ರಿಂದ ಮೇಳ ತಿರುಗಾಟ ಆರಂಭಿಸಲಿದೆ ಎಂದು ಮಾಹಿತಿ ನೀಡಿದರು.

ತೆಂಕುತಿಟ್ಟಿನ ಈಗಿನ ಪ್ರಖ್ಯಾತ ಭಾಗವತರೆಂದು ಪ್ರಸಿದ್ಧಿ ಪಡೆದ ಪಟ್ಲ ಸತೀಶ್ ಶೆಟ್ಟಿಯವರು ಪ್ರಧಾನ ಭಾಗವತಿಕೆಯಲ್ಲಿ ಈ ನೂತನ ಮೇಳ ಮುನ್ನಡೆಯಲಿದೆ. ಅಲ್ಲದೇ ಮತ್ತೋರ್ವ ಪ್ರಸಿದ್ಧ ಭಾಗವತ ಪ್ರಪುಲ್ಲಚಂದ್ರ ನೆಲ್ಯಾಡಿಯವರು ಇದ್ದು, ಚಂಡೆ-ಮದ್ದಳೆ-ಚಕ್ರತಾಳದಲ್ಲಿ ಪದ್ಮನಾಭ ಉಪಾಧ್ಯಾಯ, ಗುರುಪ್ರಸಾದ್ ಬೊಳಿಂಜಡ್ಕ, ಪ್ರಶಾಂತ್ ವಗೆನಾಡು, ಪೂರ್ಣೇಶ್ ಆಚಾರ್ಯ ಇರಲಿದ್ದಾರೆ. ಮುಮ್ಮೇಳ ಕಲಾವಿದಾರಾಗಿ ರಾಧಾಕೃಷ್ಣ ನಾವಡ, ದಿವಾಣ ಶಿವಶಂಕರ್ ಭಟ್, ಸಂತೋಷ್ ಮಾನ್ಯ, ರಾಕೇಶ್ ರೈ ಅಡ್ಕ, ಸತೀಶ್ ನೈನಾಡು, ಮಾಧವ ಕೊಳತ್ತಮಜಲು, ಮೋಹನ್ ಬೆಳ್ಳಿಪಾಡಿ, ಮನೀಷ್ ಪಾಟಾಳಿ, ಲೋಕೇಶ್ ಮುಚ್ಚೂರು, ಹರಿರಾಜ್ ಕಿನ್ನಿಗೋಳಿ, ರೋಹಿತ್, ದಿವಾಕರ, ಲಕ್ಷ್ಮಣ, ಮಧುರಾಜ್, ಭುವನ್ ಮತ್ತಿತರ ಪ್ರಖ್ಯಾತ ಕಲಾವಿದರು ಪ್ರೇಕ್ಷಕರನ್ನು ರಂಜಿಸಲಿದ್ದಾರೆ ಎಂದು ಹೇಳಿದರು.

ಈ ಹೊಸ ಮೇಳವು ಪೌರಾಣಿಕ ಪ್ರಸಂಗಗಳನ್ನು ಮಾತ್ರ ಆಡಿ ತೋರಿಸಲಿದ್ದು, ಸಂಜೆ 6 ರಿಂದ ರಾತ್ರಿ 11ರವರೆಗೆ ಕಾಲಮಿತಿಯ ಪ್ರದರ್ಶನ ನೀಡಲಿದೆ. ಈ ಮೇಳ ವರ್ಷದ ಆರು ತಿಂಗಳು ಮಾತ್ರವಲ್ಲ, ವರ್ಷಪೂರ್ತಿ ಮೇಳ ನಡೆಸಲಿದೆ. ಮಳೆಗಾಲದ ಸಂದರ್ಭದಲ್ಲಿ ಶ್ರೀಕ್ಷೇತ್ರ ಪಾವಂಜೆಯಲ್ಲಿಯೇ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಮೇಳದ ವೀಳ್ಯವನ್ನು ಇನ್ನೂ ನಿರ್ಧಾರ ಮಾಡಿಲ್ಲ ಎಂದು ಎಂ.ಶಶೀಂದ್ರ ಕುಮಾರ್ ಹೇಳಿದರು.

ಭಾಗವತ ಪಟ್ಲ ಸತೀಶ್ ಶೆಟ್ಟಿಯವರು ಮಾತನಾಡಿ, ಕೋವಿಡ್​ನಿಂದಾಗಿ ಎಲ್ಲಾ ಕಲಾವಲಯವೂ ನಿಂತುಹೋಗಿದೆ. ಅಂತಹ ಪರಿಸ್ಥಿತಿಯಲ್ಲಿ ಹರಕೆ ಯಕ್ಷಗಾನ ಮೇಳಗಳು ಯಾವ ರೀತಿಯಲ್ಲಿ ಈ ಬಾರಿ ತಿರುಗಾಟ ನಡೆಸೋದು ಎಂಬ ಚಿಂತನೆ ನಡೆಸುವ ಕಾಲಘಟ್ಟದಲ್ಲಿ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಕ್ತಾದಿಗಳು ಸೇರಿ ಯಕ್ಷಗಾನ ಮೇಳವನ್ನು ನಡೆಸಲು ಹೊರಟಿರೋದು ಇತಿಹಾಸದ ಪುಟಗಳಲ್ಲಿ ದಾಖಲೆಯಾಗಬೇಕಾದ ವಿಚಾರ.‌ ಅವರಿಗೆ ನಾನು ಕಲಾವಿದರ ಪರವಾಗಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.