ETV Bharat / state

ಕೊರೊನಾ ಸೋಂಕಿತೆಯ ಶವ ಸಂಸ್ಕಾರ ಮಾಡಿದ ಉಪ್ಪಿನಂಗಡಿಯ ರಿಯಲ್​​​ ಹೀರೋ

ಕೊರೊನಾ ಸೋಂಕಿನಿಂದ ವೃದ್ಧೆಯ ಅಂತ್ಯಕ್ರಿಯೆಗೆ ಹೊರ ಊರಿನ ಜನರನ್ನೆಲ್ಲಾ ವಿಚಾರಿಸಿದ ಪೊಲೀಸರಿಗೆ ಯಾರೊಬ್ಬರು ಮುಂದೆ ಬರುವ ಮನಸ್ಸು ಮಾಡಿರಲಿಲ್ಲ. ಈ ವೇಳೆ ಪೊಲೀಸರಿಗೆ ಉಪ್ಪಿನಂಗಡಿಯ ಉಮೇಶ್​ ಅಮೀನ್ ಎಂಬ ಬಿಎಸ್​​ಎನ್​ಎಲ್ ನೌಕರನ ಬಗ್ಗೆ ಕೇಳಿಬಂದಿತ್ತು. ತಕ್ಷಣವೇ ಮಧ್ಯರಾತ್ರಿ 12ಗಂಟೆ ಸುಮಾರಿಗೆ ಉಮೇಶ್​ ಮನೆಗೆ ಧಾವಿಸಿದ ಪೊಲೀಸರು ವೃದ್ಧೆಯ ಶವ ಸಂಸ್ಕಾರ ನೆರವೇರಿಸುವಂತೆ ಮನವಿ ಮಾಡಿದ್ದಾರೆ. ಪೊಲೀಸರ ಮನವಿಗೆ ತಕ್ಷಣವೇ ಸ್ಪಂದಿಸಿದ ಉಮೇಶ್​ ಅಮೀನ್ ಶವದಹನ ಮಾಡಿ ಮಾನವೀಯತೆ ಮೆರೆದಿದ್ದಾರೆ.

a man done funeral of corona infected body in Uppinangadi
ಉಪ್ಪಿನಂಗಡಿಯಲ್ಲಿ ಕೊರೊನಾ ಸೋಂಕಿತೆ ಶವ ಸಂಸ್ಕಾರ ಮಾಡಿದ ಪಬ್ಲಿಕ್ ಹೀರೋ
author img

By

Published : Apr 27, 2020, 6:59 PM IST

Updated : Apr 27, 2020, 8:20 PM IST

ಉಪ್ಪಿನಂಗಡಿ/ದಕ್ಷಿಣ ಕನ್ನಡ: ಕೊರೊನಾ ಪ್ರಕರಣದಲ್ಲಿ ಮೃತಪಟ್ಟವರ ಶವದಹನದ ಸಮಯದಲ್ಲಿ ಪರಿಸರದಲ್ಲಿ ಸೋಂಕು ಹರಡುತ್ತದೆ ಎಂಬ ಭೀತಿಯಿಂದ ಜನರು ಅಲ್ಲಲ್ಲಿ ಇದಕ್ಕೆ ತಡೆಯೊಡ್ಡುತ್ತಿದ್ದಾರೆ. ಅಂತಹ ಒಂದು ಘಟನೆಯು ದಕ್ಷಿಣ ಕನ್ನಡದಲ್ಲಿ ವೃದ್ದೆಯ ವಿಷಯದಲ್ಲೂ ಇತ್ತೀಚೆಗೆ ನಡೆದಿತ್ತು. ಈ ಸಮಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಪೊಲೀಸರಿಗೆ ಸೋಂಕಿತರ ಶವ ಸಂಸ್ಕಾರವೇ ದೊಡ್ಡ ತಲೆನೋವಾಗಿತ್ತು.

ವೃದ್ಧೆಯ ಶವ ಸಂಸ್ಕಾರಕ್ಕೆ ಪೊಲೀಸರು ಹೊರ ಊರಿನ ಜನರನ್ನೆಲ್ಲಾ ಕೋರಿದದರೂ ಯಾರೊಬ್ಬರು ಮುಂದೆ ಬರಲು ಮನಸ್ಸು ಮಾಡಿರಲಿಲ್ಲಾ. ಈ ವೇಳೆ ಪೊಲೀಸರಿಗೆ ಉಪ್ಪಿನಂಗಡಿಯ ಉಮೇಶ್​ ಅಮೀನ್ ಎಂಬ ಬಿಎಸ್​​ಎನ್​ಎಲ್ ನೌಕರನ ಬಗ್ಗೆ ಕೇಳಿಬಂದಿದೆ. ತಕ್ಷಣವೇ ಮಧ್ಯರಾತ್ರಿ 12ಗಂಟೆ ಸುಮಾರಿಗೆ ಉಮೇಶ್​ ಮನೆಗೆ ಧಾವಿಸಿದ್ದ ಪೊಲೀಸರು ವೃದ್ಧೆಯ ಶವ ಸಂಸ್ಕಾರ ನೆರವೇರಿಸುವಂತೆ ಮನವಿ ಮಾಡಿದ್ದಾರೆ. ಪೊಲೀಸರ ಮನವಿಗೆ ತಕ್ಷಣವೇ ಸ್ಪಂದಿಸಿದ ಉಮೇಶ್​ ಅಮೀನ್ ಶವ ದಹನ ಮಾಡಲು ಒಪ್ಪಿಕೊಂಡಿದ್ದಾರೆ.

ಅಷ್ಟಕ್ಕೂ ಉಮೇಶ್​ ಅಮೀನ್ ಅವರು ಬಿಎಸ್ಎನ್​ಎಲ್​ ನೌಕರಿ ಜೊತೆ ಜೊತೆಗೆ ಶವ ಸಂಸ್ಕಾರ ಕಾರ್ಯವನ್ನು ಮಾಡುತ್ತಾರೆ. ಬದಲಿಗೆ ಬಿಎಸ್​​ಎನ್​ಎಲ್​​ನಲ್ಲಿ ದಿನಗೂಲಿ ನೌಕರರಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ತಮ್ಮಿಂದಾಗುವ ಒಳಿತನ್ನು ಸಮಾಜಕ್ಕೆ ಮಾಡುತ್ತಾ ಬಂದಿದ್ದಾರೆ.

ಕೊರೊನಾ ಸೋಂಕಿತೆಯ ಶವ ಸಂಸ್ಕಾರ ನೆರವೇರಿಸಿದ ಉಪ್ಪಿನಂಗಡಿಯ ಪಬ್ಲಿಕ್ ಹೀರೋ

ಬಳಿಕ ಪೊಲೀಸರು ಉಮೇಶ್​ಗೆ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲ ರಕ್ಷಣಾ ಕವಚಗಳನ್ನು ಹಾಕಿಸಿ ಶವದಹನಕ್ಕೆ ಕಳುಹಿಸಿಕೊಟ್ಟಿದ್ದು, ಉಮೇಶ್​​ ಶವ ಸಂಸ್ಕಾರ ನೆರವೇರಿಸಿದ್ದಾರೆ. ಬಳಿಕ ಜಿಲ್ಲಾಡಳಿತ ಹಾಗೂ ಪೊಲೀಸ್​ ಇಲಾಖೆಯಿಂದ ಉಮೇಶ್​ಗೆ ಧನ್ಯವಾದ ಅರ್ಪಿಸಲಾಗಿದೆ.

ಈ ವೇಳೆ ಈಟಿವಿ ಭಾರತದೊಂದಿಗೆ ಮಾತನಾಡಿದ ಉಮೇಶ್ ಅಮೀನ್​, ರಾತ್ರಿ 12ಗಂಟೆಯವರೆಗೂ ಪೊಲೀಸರು ನಮಗಾಗಿ ದುಡಿಯುತ್ತಿದ್ದಾರೆ. ನನ್ನ ಮನೆ ಬಾಗಿಲಿಗೆ ಬಂದು ನನ್ನನ್ನು ಶವದಹನಕ್ಕೆ ಬರುವಂತೆ ಆಹ್ವಾನಿಸಿದ ಉಪ್ಪಿನಂಗಡಿ ಠಾಣಾಧಿಕಾರಿ ಈರಯ್ಯ ಸರ್ ಮತ್ತು ಸಿಬ್ಬಂದಿಯನ್ನು ನೋಡುವಾಗ ನಿಜವಾಗಲೂ ಪೊಲೀಸರು ನಮಗಾಗಿ ಈ ಸಮಯದಲ್ಲಿ ಎಷ್ಟು ಕಷ್ಟಪಡುತ್ತಿದ್ದಾರೆ ಎಂಬುದು ಅರಿವಾಗುತ್ತದೆ. ನಾನು ಈ ಕೆಲಸವನ್ನು ಮಾಡಿಲ್ಲವಾದರೆ ನಿಜವಾಗಿಯೂ ನಾನು ಸಮಾಜಕ್ಕೆ ಮಾಡುತ್ತಿರುವ ಮಹಾದ್ರೋಹ. ಹೀಗಾಗಿ ಧೈರ್ಯದಿಂದ ನೆರವಾಗಲು ಮುಂದೆ ಬಂದೆ ಎಂದಿದ್ದಾರೆ.

ಈಟಿವಿ ಭಾರತ ಉಮೇಶ್ ಅವರನ್ನು ಸಂಪರ್ಕಿಸುವ ಸಮಯದಲ್ಲೂ ತನ್ನ ಕರ್ತವ್ಯ ಪ್ರಜ್ಞೆಯೊಂದಿಗೆ ಉಪ್ಪಿನಂಗಡಿಯ ಚಿತಾಗಾರದಲ್ಲಿ ಚಿತೆಗೆ ಬೆಂಕಿ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದರು. ಸಮಾಜದೊಂದಿಗೆ ಕೈಜೋಡಿಸುವ ಇಂತಹ ಹೀರೋಗಳಿಗೆ ಒಂದು ಸೆಲ್ಯೂಟ್​ ಹೊಡೆಯಲೇಬೇಕು.

Last Updated : Apr 27, 2020, 8:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.