ಬಂಟ್ವಾಳ (ದ.ಕ): ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಲು ಸ್ನೇಹಿತರ ಜೊತೆ ತೆರಳಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬರಿಮಾರು ಎಂಬಲ್ಲಿ ಸಂಭವಿಸಿದೆ.
ಮಾಣಿ ಕರ್ನಾಟಕ ಪ್ರೌಢ ಶಾಲೆ ಸಮೀಪದ ಪಳಿಕೆ ನಿವಾಸಿ ಮಹಮ್ಮದ್ ಎಂಬುವರ ಮಗ ಅಬ್ದುಲ್ ರಹಮಾನ್ (31) ಮೃತಪಟ್ಟ ವ್ಯಕ್ತಿ. ಮಧ್ಯಾಹ್ನದ ಬಳಿಕ ರಹಮಾನ್ ಅವರು ತನ್ನ ಮೂವರು ಸ್ನೇಹಿತರಾದ ಸಮಾದ್, ಮುಸ್ತಫಾ ಮತ್ತು ಸಮಾದ್ ಎಂಬವರ ಜೊತೆಯಲ್ಲಿ ಬರಿಮಾರು ಕಡವಿನಬಾಗಿಲು ಎಂಬಲ್ಲಿ ನೇತ್ರಾವತಿ ನದಿಗೆ ಈಜಲು ತೆರಳಿದ್ದರು.
ಸುದ್ದಿ ತಿಳಿದ ಕ್ಷಣವೇ ಕಾರ್ಯಪವೃತ್ತರಾದ ಸ್ಥಳೀಯ ಈಜುಗಾರರು ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಸುಮಾರು 5.30 ಗಂಟೆ ವೇಳೆಗೆ ರಹಮಾನ್ ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ.