ETV Bharat / state

ಸುಳ್ಯ: ಮುಸ್ಲಿಂ ಯುವಕನನ್ನು ನದಿಗೆ ಹಾರಿ ರಕ್ಷಿಸಿದ ಹಿಂದೂ ಯುವಕ - A Hindu youth jumped into the river and rescued a Muslim youth who fell into the river in Sulya

ಆಯತಪ್ಪಿ ನದಿಗೆ ಬಿದ್ದ ಮುಸ್ಲಿಂ ಯುವಕನನ್ನು ಹಿಂದೂ ಯುವಕನೊಬ್ಬ ರಕ್ಷಿಸಿರುವ ಘಟನೆ ಸುಳ್ಯ ತಾಲೂಕಿನಲ್ಲಿ ನಡೆದಿದೆ.

a-hindu-youth-jumped-into-the-river-and-rescued-a-muslim-youth-who-fell-into-the-river-in-sulya
ಸುಳ್ಯ : ನದಿಗೆ ಬಿದ್ದ ಮುಸ್ಲಿಂ ಯುವಕನನ್ನು ನದಿಗೆ ಹಾರಿ ರಕ್ಷಿಸಿದ ಹಿಂದೂ ಯುವಕ
author img

By

Published : Aug 3, 2022, 7:51 AM IST

Updated : Aug 3, 2022, 9:07 AM IST

ಸುಳ್ಯ (ದಕ್ಷಿಣಕನ್ನಡ) : ಆಯತಪ್ಪಿ ನದಿಗೆ ಬಿದ್ದ ಮುಸ್ಲಿಂ ಯುವಕನನ್ನು ಹಿಂದೂ ಯುವಕನೊಬ್ಬ ರಕ್ಷಿಸಿರುವ ಘಟನೆ ಸುಬ್ರಮಣ್ಯ ಸಮೀಪದ ಹರಿಹರಪಳ್ಳತ್ತಡ್ಕ ಎಂಬಲ್ಲಿ ನಡೆದಿದೆ.

ಇಲ್ಲಿನ ಸೇತುವೆಯೊಂದರಲ್ಲಿ ಸಿಲುಕಿದ್ದ ಮರವನ್ನು ತೆರವುಗೊಳಿಸುವ ಸಂದರ್ಭ ಕ್ರೈನ್ ಆಪರೇಟರ್ ಶರೀಫ್ ಎಂಬಾತ ಆಯತಪ್ಪಿ ನದಿಗೆ ಬಿದ್ದಿದ್ದಾನೆ. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಸೋಮಶೇಖರ್ ಕಟ್ಟೆಮನೆ ಎಂಬವರು ತಕ್ಷಣ ನದಿಗೆ ಹಾರಿ ಆ ಯುವಕನನ್ನು ರಕ್ಷಿಸಿದ್ದಾರೆ. ಇವರ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

ಸುಳ್ಯ: ಮುಸ್ಲಿಂ ಯುವಕನನ್ನು ನದಿಗೆ ಹಾರಿ ರಕ್ಷಿಸಿದ ಹಿಂದೂ ಯುವಕ

ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಉಂಟಾದ ಭಾರಿ ಮಳೆಗೆ ಇಲ್ಲಿನ ನದಿಗಳು ತುಂಬಿ ಹರಿಯುತ್ತಿದೆ. ಹಲವು ಕಡೆಗಳಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಜೊತೆಗೆ ಭಾರೀ ಮಳೆಗೆ ಸೇತುವೆಗಳು ಮುಳುಗಿದ್ದು, ಗ್ರಾಮಗಳ ಸಂಪರ್ಕವೂ ಕಡಿತಗೊಂಡಿದೆ.

ಓದಿ : ರಷ್ಯಾ ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ ನವೀನ್ ಹುಟ್ಟುಹಬ್ಬ ಆಚರಣೆ

Last Updated : Aug 3, 2022, 9:07 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.