ETV Bharat / state

ಮಂಗಳೂರಲ್ಲಿ ಕೊರೊನಾ ಮಣಿಸಿದ 70ರ ವೃದ್ಧೆ: ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್!

ಮಂಗಳೂರಲ್ಲಿ ಕೊರೊನಾ ಸೋಂಕಿನಿಂದ ಆಸ್ಪತ್ರೆಯಲ್ಲಿ ಜಿಕಿತ್ಸೆ ಪಡೆಯುತ್ತಿದ್ದ 70 ವರ್ಷದ ವೃದ್ಧೆಯು ಚೇತರಿಸಿಕೊಂಡಿದ್ದಾರೆ. ಕೇರಳದ ವೃದ್ಧೆ ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

70 year-old Covid-19 positive woman cured after treatment, discharged
ಮಂಗಳೂರಲ್ಲಿ ಕೊರೊನಾ ಮಣಿಸಿದ 70ರ ವೃದ್ಧೆ
author img

By

Published : Apr 12, 2020, 8:55 PM IST

ಮಂಗಳೂರು: ಕೋವಿಡ್-19ನಿಂದ ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 70ರ ವೃದ್ಧೆ ಗುಣಮುಖವಾಗಿ ಮನೆಗೆ ತೆರಳಿದ್ದಾರೆ. ಈ ಮೂಲಕ ದ.ಕ. ಜಿಲ್ಲೆಯಲ್ಲಿ 12 ಸೋಂಕಿತರಲ್ಲಿ 7 ಮಂದಿ ಗುಣಮುಖರಾಗಿದ್ದು, ಇನ್ನು 5 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

70 year-old Covid-19 positive woman cured after treatment, discharged
ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ

ವೃದ್ಧೆಯು ಸೌದಿ ಅರೇಬಿಯಾದಿಂದ ಕೇರಳ ರಾಜ್ಯದ ಕಲ್ಲಿಕೋಟೆಗೆ ಮಾರ್ಚ್ 9ರಂದು ಬಂದಿದ್ದರು. ಆದರೆ ಆ ಬಳಿಕ ಅವರು ಅನಾರೋಗ್ಯಕ್ಕೆ ಒಳಗಾಗಿದ್ದು, ಮಾರ್ಚ್ 19ರಂದು ಅವರು ಚಿಕಿತ್ಸೆಗಾಗಿ ಮಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭ ಕೋವಿಡ್ ಶಂಕೆಯ ಮೇರೆಗೆ ವೃದ್ಧೆಯ ಗಂಟಲು ದ್ರವವನ್ನು ಪರೀಕ್ಷೆಗೆ ರವಾನೆ ಮಾಡಲಾಗಿತ್ತು. ನಂತರ ಮಾರ್ಚ್ 24ರಂದು ವೃದ್ಧೆಗೆ ಕೋವಿಡ್-19 ಸೋಂಕು ಇರುವುದು ದೃಢಗೊಂಡಿತ್ತು.

ಬಳಿಕ ವೃದ್ಧೆಯನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ವಿಶೇಷ ನಿಗಾ ಘಟಕದಲ್ಲಿ ಇರಿಸಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಆಕೆಯ ಗಂಟಲು ದ್ರವವನ್ನು ಎಪ್ರಿಲ್ 7 ಹಾಗೂ 8ರಂದು ಪರೀಕ್ಷೆಗೆ ಕಳುಹಿಸಿದ್ದು, ಅದರಲ್ಲಿ ನೆಗೆಟಿವ್ ವರದಿ ದಾಖಲಾಗಿದೆ. ಆದ್ದರಿಂದ ವೃದ್ಧೆಯು ಇಂದು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.