ETV Bharat / state

ಸೈನಿಕನೆಂದು ನಂಬಿಸಿ ವ್ಯಕ್ತಿಗೆ ₹51 ಸಾವಿರ ಪಂಗನಾಮ ಹಾಕಿದ ಚಾಲಾಕಿ!!

ಮುಂಗಡ ಹಣ ಕಳುಹಿಸುವಂತೆ ಈತನಿಗೆ ತಿಳಿಸಿ ಮೊದಲು ₹3 ಸಾವಿರ ಪಡೆದು ಆರ್‌ಸಿ ವರ್ಗಾಯಿಸಲು ಆಧಾರ್ ಕಾರ್ಡ್ ಕೇಳಿದ್ದಾನೆ. ನಂತರ ಬೇರೆ ಬೇರೆ ರೀತಿಯಲ್ಲಿ ₹51,300 ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ. ಇಷ್ಟಾದರೂ ದ್ವಿಚಕ್ರ ವಾಹನ ಸಿಗದೇ ಇರುವುದರಿಂದ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಹಣ ಕಳೆದುಕೊಂಡ ವ್ಯಕ್ತಿ ಪ್ರಕರಣ ದಾಖಲಿಸಿದ್ದಾರೆ..

author img

By

Published : Jun 23, 2021, 10:09 PM IST

Updated : Jun 23, 2021, 10:57 PM IST

ಸೈನಿಕನೆಂದು ನಂಬಿಸಿ ವ್ಯಕ್ತಿಗೆ 51 ಸಾವಿರ ಪಂಗನಾಮ ಹಾಕಿದ ಚಾಲಕಿ!

ಮಂಗಳೂರು : ಮಂಗಳೂರಿನ ವ್ಯಕ್ತಿಯೊಬ್ಬರಿಗೆ ತಾನೊಬ್ಬ ಸೈನಿಕನೆಂದು ನಂಬಿಸಿದ ವ್ಯಕ್ತಿಯೊಬ್ಬ 51,300 ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶ್ರೀನಿವಾಸ್ ಎಂಬಾತ ಹೋಂಡಾ ಡಿಯೋ ವಾಹನವನ್ನು ₹23,000ಗೆ ಮಾರಾಟಕ್ಕಿದೆ ಎಂದು ಜಾಹೀರಾತು ಹಾಕಿದ್ದ. ಇದನ್ನು ನೋಡಿ ಮಂಗಳೂರಿನ ವ್ಯಕ್ತಿ ಆತನ ಜೊತೆಗೆ ಮಾತನಾಡಿ ₹18 ಸಾವಿರಕ್ಕೆ ಒಪ್ಪಂದ ಮಾಡಿಕೊಂಡಿದ್ದ.

ಇದೇ ವೇಳೆ ಶ್ರೀನಿವಾಸ್ ತಾನು ಆರ್ಮಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿ ಯೂನಿಫಾರ್ಮ್‌ನಲ್ಲಿದ್ದ ಫೋಟೋ ಮತ್ತು ಕಚೇರಿ ಎಂದು ಮತ್ತೊಂದು ಫೋಟೋವನ್ನು ಮಂಗಳೂರಿನ ವ್ಯಕ್ತಿಗೆ ಕಳುಹಿಸಿ ತಾನು ಸೈನಿಕನೆಂದು ನಂಬಿಸಿದ್ದ.

ಮುಂಗಡ ಹಣ ಕಳುಹಿಸುವಂತೆ ಈತನಿಗೆ ತಿಳಿಸಿ ಮೊದಲು ₹3 ಸಾವಿರ ಪಡೆದು ಆರ್‌ಸಿ ವರ್ಗಾಯಿಸಲು ಆಧಾರ್ ಕಾರ್ಡ್ ಕೇಳಿದ್ದಾನೆ. ನಂತರ ಬೇರೆ ಬೇರೆ ರೀತಿಯಲ್ಲಿ ₹51,300 ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ. ಇಷ್ಟಾದರೂ ದ್ವಿಚಕ್ರ ವಾಹನ ಸಿಗದೇ ಇರುವುದರಿಂದ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಹಣ ಕಳೆದುಕೊಂಡ ವ್ಯಕ್ತಿ ಪ್ರಕರಣ ದಾಖಲಿಸಿದ್ದಾರೆ.

ಓದಿ:ಶಾಲೆಯಿಂದ ಹೊರಗುಳಿದ ಮಕ್ಕಳ ಗುರುತಿಸುವ ಸಮೀಕ್ಷೆ: ದಾಖಲೆಗಳ ಪರಿಶೀಲನೆಗೆ ಹೈಕೋರ್ಟ್ ನಿರ್ದೇಶನ

Last Updated : Jun 23, 2021, 10:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.