ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೆಂಬರ್ ತಿಂಗಳಲ್ಲಿ ನಾಲ್ಕು ಕೋಟಿ ರೂ ಮೌಲ್ಯದ ಅಕ್ರಮ ಚಿನ್ನ ಸಾಗಾಟವನ್ನು ಕಸ್ಟಮ್ಸ್ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.
ನವೆಂಬರ್ 1 ರಿಂದ 30 ವರೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹತ್ತು ಅಕ್ರಮ ಚಿನ್ನ ಸಾಗಣೆದಾರರನ್ನು ಪತ್ತೆ ಹಚ್ಚಿದ್ದಾರೆ. ಇವರಿಂದ 24 ಕ್ಯಾರೆಟ್ ಶುದ್ಧತೆಯ ಒಟ್ಟು 7,692.000 ಗ್ರಾಂ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 4,01,18,280 ರೂ ಎಂದು ಅಂದಾಜಿಸಲಾಗಿದೆ.
ದುಬೈನಿಂದ ಬಂದ ಹತ್ತು ಪ್ರಯಾಣಿಕರು ಎಲ್ಇಡಿ ಬಲ್ಬ್, ಕೈಗಡಿಯಾರ, ಕೀಪ್ಯಾಡ್ ಮೊಬೈಲ್ ಫೋನ್, ಟ್ರಾಲಿ ಬ್ಯಾಗ್‌ಗಳ , ರಟ್ಟಿನ ಪೆಟ್ಟಿಗೆಯ ಒಳಗೆ ಲೇಯರ್ಡ್ ಬನಿಯನ್, ಗುದನಾಳದಲ್ಲಿ, ಪೇಸ್ಟ್, ಪೌಡರ್ ರೂಪದಲ್ಲಿ ವಿವಿಧ ವಿಧಾನಗಳ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದರು.
ಇದನ್ನೂ ಓದಿ:ಬರ್ತ್ಡೇ ಪಾರ್ಟಿಯಲ್ಲಿದ್ದ ಗೆಳೆಯರ ಮೇಲೆ ಹಲ್ಲೆ ನಡೆಸಿ, ಹಣ ದೋಚಿ ಪರಾರಿಯಾಗಿದ್ದ ಆರು ಮಂದಿಯ ಬಂಧನ