ಮಂಗಳೂರು (ದ.ಕ): ಜಿಲ್ಲೆಯಲ್ಲಿ 33 ಮಂದಿಯಲ್ಲಿ ಸೋಂಕು ದೃಢವಾಗಿದೆ. ಇವರಲ್ಲಿ 15 ಮಂದಿಗೆ ಸೌದಿ ಅರೇಬಿಯಾ, ದಮಾಮ್, ಕತಾರ್ ಅಂತಾರಾಷ್ಟ್ರೀಯ ಪ್ರಯಾಣದಿಂದ ಮಂಗಳೂರಿಗೆ ಆಗಮಿಸಿದ್ದು, ಅವರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು.
ಇವರ ಗಂಟಲು ದ್ರವ ಪರೀಕ್ಷಾ ಮಾದರಿಯ ವರದಿ ಸ್ವೀಕೃತವಾಗಿದ್ದು, ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಅಲ್ಲದೆ ರೋಗಿ ಸಂಖ್ಯೆ P-8005ರ ಪ್ರಾಥಮಿಕ ಸಂಪರ್ಕ ಹೊಂದಿರುವ 22 ವರ್ಷದ ಪುರುಷನಿಗೆ, ರೋಗಿ ಸಂಖ್ಯೆ P-8004ರ ಪ್ರಾಥಮಿಕ ಸಂಪರ್ಕ ಹೊಂದಿರುವ 55 ವರ್ಷದ ಮಹಿಳೆ, ರೋಗಿ ಸಂಖ್ಯೆ P-10275ರ ಪ್ರಾಥಮಿಕ ಸಂಪರ್ಕ ಹೊಂದಿರುವ 55 ವರ್ಷದ ಪುರುಷನಿಗೆ, ರೋಗಿ ಸಂಖ್ಯೆ P-9739ರ ಪ್ರಾಥಮಿಕ ಸಂಪರ್ಕ ಹೊಂದಿರುವ 20 ವರ್ಷದ ಪುರುಷನಿಗೆ, ರೋಗಿ ಸಂಖ್ಯೆ P-8006ರ ಪ್ರಾಥಮಿಕ ಸಂಪರ್ಕ ಹೊಂದಿರುವ 54 ವರ್ಷದ ಮಹಿಳೆಯಲ್ಲಿ, ರೋಗಿ ಸಂಖ್ಯೆ P-9735ರ ಪ್ರಾಥಮಿಕ ಸಂಪರ್ಕ ಹೊಂದಿರುವ ನಾಲ್ವರು ಮಹಿಳೆಯರು ಹಾಗೂ ಓರ್ವ ಬಾಲಕಿಯಲ್ಲಿ ಸೋಂಕು ದೃಢಗೊಂಡಿದೆ.
ಇನ್ನು ನಾಲ್ವರು ಪುರುಷರಿಗೆ ಇಲಿ (Influenza Like Illness) ಪ್ರಕರಣದಿಂದ ಸೋಂಕು ಪತ್ತೆಯಾಗಿದೆ. ಸಾರಿ (Severe Acute Respiratory Influence) ಪ್ರಕರಣದಲ್ಲಿ ಓರ್ವ ಮಹಿಳೆ ಹಾಗೂ ಓರ್ವ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ. 62 ವರ್ಷದ ಪುರುಷನ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ಅಂತರ್ ಜಿಲ್ಲಾ ಪ್ರಯಾಣದಿಂದ ಬಂದಿರುವ 53 ವರ್ಷದ ಓರ್ವ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ. ಇಂದು ಸೋಂಕು ದೃಢಗೊಂಡವರೆಲ್ಲರನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ ಇಂದು 34 ಮಂದಿ ಗುಣಮುಖ:
ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 1 ವರ್ಷದ ಗಂಡು ಮಗು, 2 ವರ್ಷದ ಹೆಣ್ಣು ಮಗು ಸೇರಿ 34 ಮಂದಿ ಗುಣಮುಖರಾಗಿದ್ದಾರೆ. ಇವರ ಗಂಟಲು ದ್ರವ ಪರೀಕ್ಷೆಯಲ್ಲಿ ಎರಡು ಬಾರಿ ನೆಗೆಟಿವ್ ವರದಿ ಬಂದಿರುವ ಹಿನ್ನೆಲೆ ಗುಣಮುಖ ಎಂದು ಘೋಷಿಸಿ ಮನೆಗೆ ಕಳುಹಿಸಲಾಗಿದೆ.
ದ.ಕ ಜಿಲ್ಲೆಯಲ್ಲಿ ಈವರೆಗೆ 527 ಪ್ರಕರಣಗಳು ದೃಢಪಟ್ಟಿದೆ. ಇದರಲ್ಲಿ 378 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಈವರೆಗೆ ಹತ್ತು ಮಂದಿ ಸಾವನ್ನಪ್ಪಿದ್ದು, 139 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 303 ಮಂದಿಯ ವರದಿ ಬಂದಿದ್ದು, 270 ಮಂದಿಯ ವರದಿ ನೆಗೆಟಿವ್ ಬಂದಿದ್ದರೆ, 33 ಮಂದಿಯಲ್ಲಿ ಸೋಂಕು ದೃಢಗೊಂಡಿದೆ.