ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ 9 ಮಂದಿ ಸಾವನ್ನಪ್ಪಿದ್ದು 243 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. 519 ಮಂದಿ ಗುಣಮುಖರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಸಾವನ್ನಪ್ಪಿದ 9 ಮಂದಿಯಲ್ಲಿ 8 ಮಂದಿ ಮಂಗಳೂರು ತಾಲೂಕಿನವರಾಗಿದ್ದು, ಒಬ್ಬರು ಹೊರ ಜಿಲ್ಲೆಯವರಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾದಿಂದ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 237 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಂದು 237 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಇದರಲ್ಲಿ 189 ಮಂದಿ ಮಂಗಳೂರು ತಾಲೂಕು, 30 ಮಂದಿ ಬಂಟ್ವಾಳ ತಾಲೂಕು, 6 ಮಂದಿ ಪುತ್ತೂರು ತಾಲೂಕು, 4 ಮಂದಿ ಸುಳ್ಯ, 10 ಮಂದಿ ಬೆಳ್ತಂಗಡಿ ತಾಲೂಕಿನವರಾಗಿದ್ದಾರೆ. 4 ಮಂದಿ ಹೊರಜಿಲ್ಲೆಯವರಿಗೂ ಕೊರೊನಾ ದೃಢಪಟ್ಟಿದೆ.
ಪ್ರಾಥಮಿಕ ಸಂಪರ್ಕದಿಂದ 23, ಐಎಲ್ಐನಿಂದ 123, ಸಾರಿಯಿಂದ 9 ಮಂದಿಗೆ ಕೊರೊನಾಗೆ ದೃಢಪಟ್ಟಿದೆ. 88 ಮಂದಿಯ ಕೊರೊನಾ ಮೂಲ ಇನ್ನೂ ಪತ್ತೆಯಾಗಿಲ್ಲ. ಕೋವಿಡ್ ಗುಣಲಕ್ಷಣಗಳು ಇರುವ 94 ಪುರುಷರಿಗೆ, 43 ಮಹಿಳೆಯರಿಗೆ, ಕೊರೊನಾ ಗುಣಲಕ್ಷಣಗಳು ಇಲ್ಲದ 75 ಪುರುಷರಿಗೆ, 31 ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಈವರೆಗೆ 7,596 ಮಂದಿಗೆ ಕೊರೊನಾ ದೃಢಪಟ್ಟಿದೆ. ಜಿಲ್ಲೆಯಲ್ಲಿ ಇಂದು ಒಂದೇ ದಿನ 519 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಗುಣಮುಖರಾದವರ ಸಂಖ್ಯೆ 4,734 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 2,625 ಸಕ್ರಿಯ ಪ್ರಕರಣಗಳಿದ್ದು, ಸಕ್ರಿಯ ಸೋಂಕಿತರಿಗಿಂತಲೂ ಗುಣಮುಖರಾದವರ ಸಂಖ್ಯೆ ಹೆಚ್ಚಳವಾಗಿರುವುದು ಸಮಧಾನ ತಂದಿದೆ.