ETV Bharat / state

2020-21ನೇ ಸಾಲಿನಲ್ಲಿ ಎಂಆರ್​ಪಿಎಲ್​ಗೆ 240 ಕೋಟಿ ರೂ. ನಷ್ಟ - Corona effect on MRPL

ಕೊರೊನಾ ಸೋಂಕಿನ ಪರಿಣಾಮ ಜಾಗತಿಕ ತೈಲ ಕಂಪನಿಗಳ ವ್ಯವಹಾರದ ಮೇಲೆ ಪರಿಣಾಮ ಬೀರಿದ್ದು, ಇದರ ಪರಿಣಾಮ ಎಂಆರ್​ಪಿಎಲ್ ಮೇಲೂ ಆಗಿದೆ ಎಂದು ಹಣಕಾಸು ವರದಿಯಲ್ಲಿ ತಿಳಿಸಲಾಗಿದೆ..

MRPL
MRPL
author img

By

Published : May 18, 2021, 7:35 PM IST

ಮಂಗಳೂರು : ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಭಾರತ ಸರ್ಕಾರದ ಉದ್ಯಮ ಎಂಆರ್​ಪಿಎಲ್​ಗೆ 2020-21ನೇ ಸಾಲಿನಲ್ಲಿ ರೂ. 240 ಕೋಟಿ ರೂ. ನಷ್ಟವಾಗಿದೆ.

ಎಂಆರ್​ಪಿಎಲ್​ಗೆ 2019-20ರ ಸಾಲಿನಲ್ಲಿ 2740 ಕೋಟಿ ರೂ. ನಷ್ಟ ಉಂಟಾಗಿತ್ತು. ಹಿಂದಿನ ಸಾಲಿಗೆ ಹೋಲಿಸಿದಾಗ ನಷ್ಟದ ಪ್ರಮಾಣ ಇಳಿಕೆಯಾಗಿದೆ.

ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಸಂಸ್ಥೆಗೆ ತೆರಿಗೆ ಪಾವತಿಸಿದ ಬಳಿಕ ₹328 ಕೋಟಿ ಲಾಭವಾಗಿದೆ. ಆದರೆ, ನಾಲ್ಕು ತ್ರೈಮಾಸಿಕ ಅವಧಿಯಲ್ಲಿ ತೆರಿಗೆ ಪಾವತಿಸಿ 240 ಕೋಟಿ ನಷ್ಟವಾಗಿದೆ.

ಕಾರ್ಯ‌ನಿರ್ವಹಣೆಯಲ್ಲಿ ಈ ಹಣಕಾಸು ವರ್ಷದಲ್ಲಿ 51,019 ಕೋಟಿ ರೂ. ಸಂಗ್ರಹವಾದರೆ, ಕಳೆದ ಬಾರಿ 60,752 ಕೋಟಿ ಸಂಗ್ರಹವಾಗಿತ್ತು.

ಕೊರೊನಾ ಸೋಂಕಿನ ಪರಿಣಾಮ ಜಾಗತಿಕ ತೈಲ ಕಂಪನಿಗಳ ವ್ಯವಹಾರದ ಮೇಲೆ ಪರಿಣಾಮ ಬೀರಿದ್ದು, ಇದರ ಪರಿಣಾಮ ಎಂಆರ್​ಪಿಎಲ್ ಮೇಲೂ ಆಗಿದೆ ಎಂದು ಹಣಕಾಸು ವರದಿಯಲ್ಲಿ ತಿಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.