ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ವಾರ ಲಾಕ್ಡೌನ್ ಮುಂದುವರಿದಿದೆ. ಈ ಮಧ್ಯೆ ಜಿಲ್ಲೆಯಲ್ಲಿ 50 ಕೊರೊನಾ ಕೇಸ್ಗಳಿಗಿಂತ ಹೆಚ್ಚಿರುವ 17 ಗ್ರಾಮಗಳನ್ನು ಸೀಲ್ಡೌನ್ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಸುಳ್ಯ ತಾಲೂಕಿನ ಐವರ್ನಾಡು, ಅಮರ ಮುಡ್ನೂರು, ಕೊಲ್ಲಮೊಗ್ರ, ಗುತ್ತಿಗಾರು ಹಾಗೂ ಅರಂತೋಡು ಹಾಗೂ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ, ಸವಣೂರು ಸೇರಿದಂತೆ ಒಟ್ಟು ದಕ್ಷಿಣ ಕನ್ನಡ ಜಿಲ್ಲೆಯ 17 ಗ್ರಾಮಗಳನ್ನು ಜೂ. 14 ರಿಂದ 21 ರವರೆಗೆ ಸಂಪೂರ್ಣ ಲಾಕ್ ಡೌನ್ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಮಂಗಳೂರಿನ ಗ್ರಾಮಗಳಾದ ನೀರುಮಾರ್ಗ ಹಾಗೂ ಕೊಣಾಜೆ, ಬೆಳ್ತಂಗಡಿ ತಾಲೂಕಿಗೆ ಒಳಪಡುವ ನಾರಾವಿ,ಕೆಯ್ಯೂರು, ಮಿತಬಾಗಿಲು, ಮಾಲಾಡಿ, ನೆರಿಯ, ಲಾಯಿಲ, ಉಜಿರೆ, ಚಾರ್ಮಾಡಿ ಕೂಡಾ ಸಂಪೂರ್ಣವಾಗಿ ಲಾಕ್ ಆಗಲಿವೆ.
ಈ ಎಲ್ಲಾ ಗ್ರಾ.ಪಂ ವ್ಯಾಪ್ತಿಯಲ್ಲಿ ತುರ್ತು ವೈದ್ಯಕೀಯ ಸೇವೆಗಳಿಗೆ, ಹಾಲಿನ ಬೂತ್, ಹಾಲು ಸೊಸೈಟಿಗಳಲ್ಲಿ ಹಾಲು ಖರೀದಿ, ಪೆಟ್ರೋಲ್ ಪಂಪ್, ತುರ್ತು ಸೇವಾ ವಾಹನಗಳಿಗೆ ಬಿಟ್ಟು ಉಳಿದ ಯಾವುದೇ ಚಟುವಟಿಕೆಗಳಿಗೆ ಆಸ್ಪದ ಇಲ್ಲವೆಂದು ಜಿಲ್ಲಾಧಿಕಾರಿ ಹೇಳಿದ್ದಾರೆ.