ಮಂಗಳೂರು: ಕೋವಿಡ್ ಸಂಕಷ್ಟದ ನಡುವೆಯೂ 100 ಭತ್ತದ ಕೊಯ್ಲು ಯಂತ್ರಗಳು ಸರಕು ಸಾಗಾಟದ ರೈಲಿನ ಮೂಲಕ ತಮಿಳುನಾಡಿನ ಚಿನ್ನ ಸೇಲಂನಿಂದ ಮಂಗಳೂರಿನ ಸುರತ್ಕಲ್ ರೈಲು ನಿಲ್ದಾಣದಲ್ಲಿ ಇಂದು ಬಂದಿಳಿದವು.
ಸರಕು ಸಾಗಾಟದ 32 ರೈಲು ಬೋಗಿಗಳಲ್ಲಿ ಬಂದಿರುವ ಈ ಭತ್ತ ಕಟಾವು ಯಂತ್ರಗಳು ರೈತರಿಗೆ ಕೃಷಿ ಚಟುವಟಿಕೆಗಳಿಗೆ ಉಪಯುಕ್ತವಾಗಲಿದೆ. ಕೋವಿಡ್ ಸಂಕಷ್ಟದ ಬಳಿಕ ದಕ್ಷಿಣ ರೈಲ್ವೆ ವಿವಿಧ ಅಗತ್ಯದ ವಸ್ತುಗಳು ಮತ್ತು ಇತರ ಸರಕು ವಸ್ತುಗಳ ಸಾಗಾಟವನ್ನು ಯಾವುದೇ ಅಡೆತಡೆಯಿಲ್ಲದೆ ಸಾಗಣೆ ಮಾಡಲು ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಭತ್ತ ಕಟಾವು ಯಂತ್ರಗಳು ಚಿನ್ನ ಸೇಲಂನಿಂದ ಆಗಮಿಸಿವೆ.
ಇತ್ತೀಚೆಗೆ ದಕ್ಷಿಣ ರೈಲ್ವೆಯು 32 ರೈಲು ಬೋಗಿಗಳಲ್ಲಿ 80 ಕೊಯ್ಲು ಯಂತ್ರಗಳನ್ನು ಚಿನ್ನ ಸೇಲಂನಿಂದ ತೆಲಂಗಾಣದ ನಲ್ಗೊಂಡಕ್ಕೆ ಸಾಗಾಟ ಮಾಡಲಾಗಿತ್ತು.