ಚಿತ್ರದುರ್ಗ : ಮಹಿಳೆಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಬಡಾಮಕಾನ್ ಬಡಾವಣೆಯಲ್ಲಿ ನಡೆದಿದೆ.
ಬರಹನ್ ಬೇಗಂ (55) ಕೊಲೆಯಾದ ಮಹಿಳೆ. ಹಳೆ ವೈಷಮ್ಯದಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ತಾಯಿಯನ್ನು ಹತ್ಯೆ ಮಾಡಲು ಮುಂದಾದಾಗ ಬಿಡಿಸಲು ಹೋದ ಪುತ್ರ ಮೆಹಫೂಜ್ ಇಲಾಯಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ.
ಓದಿ : ಮಾವನ ಮೇಲಿನ ದ್ವೇಷ: ಕೊಳವೆ ಬಾವಿಗೆ ಕಲ್ಲು ಹಾಕಿದ ಅಳಿಯ ಮಹಾಶಯ!
ಗಾಯಗೊಂಡ ಯುವಕ ಮೆಹಫೂಜ್ ಇಲಾಯಿಯನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೃತ್ಯದ ಬಳಿಕ ಅರೋಪಿ ಇಂತಿರಾಜ್ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಚಿತ್ರದುರ್ಗ ನಗರ ಠಾಣಾ ಪೊಲೀಸರು, ಆರೋಪಿಗಾಗಿ ಬಲೆ ಬೀಸಿದ್ದಾರೆ.