ಚಿತ್ರದುರ್ಗ: ನಗರದ ಗಾಂಧಿ ವೃತ್ತದಲ್ಲಿ ಮಾರುಕಟ್ಟೆಗೆ ಬಂದಿದ್ದ ಗಣಿ ಕಂಪನಿಯಲ್ಲಿ ಕೆಲಸ ಮಾಡುವ ಮಹಿಳೆ ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ.
ನಗರಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ಬೆಳ್ಳಗೆ 10 ಗಂಟೆಯತನಕ ಓಡಾಡೋಕೆ ಸಮಯ ಇಲ್ವಾ ಅಂತ ಮಹಿಳೆ ಆವಾಜ್ ಹಾಕಿದ್ದಾರೆ. ಈ ವೇಳೆ ಪೊಲೀಸರು ಐಡಿ ಕಾರ್ಡ್ ತೋರಿಸುವಂತೆ ಕೇಳಿದಾಕ್ಷಣ ಕೆಂಡಮಂಡಲವಾದ ಮಹಿಳೆ, ನಿಮಗೆ 20 ಸಲ ತೋರಿಸ್ಕೊಂಡು ನಿಲ್ಲಬೇಕಾ ಎಂದು ಪ್ರಶ್ನೆ ಮಾಡಿದರು.
ಮಹಿಳೆ ಈ ರೀತಿ ಸಿಡಿಗೊಂಡಿದ್ದಕ್ಕೆ ದಂಗಾದ ಪೊಲೀಸರು, ಸುಮ್ಮನೆ ಬೈಕ್ ಏರಿ ಹೊರಟು ಹೋದರು.
ಓದಿ: ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಆಹಾರ ವಿತರಣೆಗೆ ನಿರ್ಧಾರ: ಎಂಟಿಬಿ ನಾಗರಾಜ್