ಚಿತ್ರದುರ್ಗ: ಲಾಕ್ ಡೌನ್ ನಿಂದಾಗಿ ಬಂದ್ ಆಗಿದ್ದಾ ಮದ್ಯದಂಗಡಿಗಳು ಇಂದು ಆರಂಭವಾಗಿವೆ.
20 MSIL ಸೇರಿ ಜಿಲ್ಲೆಯಲ್ಲಿನ 97 ಮದ್ಯದಂಗಡಿಗಳು ಇಂದು ಬಾಗಿಲು ತೆರೆದಿದ್ದು, ವೈನ್ ಶಾಪ್ ಬಾಗಿಲು ಓಪನ್ ಮಾಡ್ತಿದ್ದಂತೆ ಸಾಲಿನಲ್ಲಿ ನಿಂತಿದ್ದ ಮದ್ಯಪ್ರಿಯರು ಡ್ಯಾನ್ಸ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವು ಮದ್ಯಪ್ರಿಯರು ಬಾರ್ ತೆರೆಯುತ್ತಿದ್ದಂತೆ ಕೈ ಮುಗಿಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಚಿತ್ರದುರ್ಗ ನಗರದ ಮೆದೇಹಳ್ಳಿ ರಸ್ತೆ ಬಳಿಯ ವೈನ್ಸ್ ಎದುರು ಜಮಾಯಿಸಿದ ಮದ್ಯಪ್ರಿಯರು ಎಣ್ಣೆ ಪಡೆದುಕೊಳ್ಳಲು ಸಾಮಾಜಿಕ ಅಂತರದ ಮಾರ್ಕ್ ನಲ್ಲಿ ಚಪ್ಪಲಿ ಬಿಟ್ಟು ಕ್ಯೂ ನಿಲ್ಲುವ ಮೂಲಕ ಎಣ್ಣೆ ಖರೀದಿ ಮಾಡಿದರು. ಮದ್ಯದಂಗಡಿಗಳ ಎದುರು ಉದ್ದಕ್ಕೂ ಕ್ಯೂ ನಿಂತ ಮದ್ಯಪ್ರಿಯರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಈಗಾಗಲೇ 97 ಮದ್ಯದಂಗಡಿ ಬಳಿ ಮುಂಜಾಗೃತ ಕ್ರಮವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಅವರು ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದು, ಬ್ಯಾರಿಕೇಡ್ ನಿರ್ಮಿಸಿ ನಿಯಮ ಪಾಲಿಸುವಂತೆ ಸೂಚನೆ ನೀಡಿದ್ದಾರೆ. ಎಲ್ಲ ಎಣ್ಣೆ ಅಂಗಡಿಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ ನೀಡಲಾಗಿದ್ದು, ಎಣ್ಣೆ ಪ್ರಿಯರು ಮದ್ಯ ಕೊಳ್ಳುವಲ್ಲಿ ನಿರತರಾಗಿದ್ದಾರೆ.