ETV Bharat / state

ಶೀಲ ಶಂಕಿಸಿದ ಪತಿಯನ್ನ ಮುದ್ದೆ ಕೋಲಿಂದ ಹೊಡೆದು ಕೊಂದ ಪತ್ನಿ!

ಪತ್ನಿ ಮುದ್ದೆ ಕೋಲಿನಿಂದ ಪತಿಯ ತಲೆಗೆ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಬಿದ್ದು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲೂಕಿನ ಸಜ್ಜನಕೆರೆ ಗ್ರಾಮದಲ್ಲಿ ನಡೆದಿದೆ.

ಪತಿಯನ್ನೇ ಹತ್ಯೆ ಮಾಡಿದಳು ಪತ್ನಿ
author img

By

Published : Mar 12, 2019, 7:10 PM IST

ಚಿತ್ರದುರ್ಗ: ಶೀಲ ಶಂಕಿಸಿ ದಿನನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಪತಿಯನ್ನೇ ಪತ್ನಿ ಹೊಡೆದುರುಳಿಸಿ ಸಾಯಿಸಿದ್ದಾಳೆ.

ಹೌದು, ಪ್ರತಿನಿತ್ಯ ಪತಿಯ ಕಿರುಳದಿಂದ ಬೇಸತ್ತಿದ್ದ ಪತ್ನಿ, ಮುದ್ದೆ ಕೋಲಿನಿಂದ ಪತಿಯ ತಲೆಗೆ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಬಿದ್ದು ಸಾವನ್ನಪ್ಪಿದ್ದಾನೆ. ಗಂಡ ಹೆಣವಾಗಿದ್ದನ್ನ ಕಂಡ ಮಡದಿ ಗಾಬರಿಯಾಗಿ ಪ್ರಕರಣವನ್ನ ಮುಚ್ಚಿಹಾಕಲು ಪ್ಲ್ಯಾನ್ ಮಾಡಿ, ಇದೀಗ ಜೈಲಿನ ಕಂಬಿ ಎಣಿಸುವಂತಾಗಿದೆ.

ತಾಲೂಕಿನ ಸಜ್ಜನಕೆರೆ ಗ್ರಾಮದ ನಿವಾಸಿ ದಾಸಪ್ಪ, ತನ್ನ ಪತ್ನಿ ನೇತ್ರಾವತಿಯ ಶೀಲ ಶಂಕಿಸಿದ ಪರಿಣಾಮ ಕೊಲೆಯಾಗಿ ಹೆಣವಾಗಿದ್ದಾನೆ. ಹತ್ತು ವರ್ಷಗಳ ಹಿಂದೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಸಲಬಮ್ಮನಹಳ್ಳಿ ಗ್ರಾಮದ ನೇತ್ರಾವತಿ ಜೊತೆ ವಿವಾಹವಾಗಿ ಅದೇ ಗ್ರಾಮದಲ್ಲಿ ನೆಲೆಸಿದ್ದರು. ಇಬ್ಬರು ಪುಟ್ಟ ಮಕ್ಕಳಿರುವ ಕುಟುಂಬದಲ್ಲಿ ಗಂಡ ದಾಸಪ್ಪ, ದಿನಾ ಕುಡಿದು ಬಂದು ಜಗಳವಾಡುತ್ತಿರುವುದನ್ನು ನೋಡಿ ಹೈರಾಣಾದ ಪತ್ನಿ ನೇತ್ರಾವತಿ, ತನ್ನ ಮಕ್ಕಳನ್ನ ತವರು ಮನೆಯಲ್ಲಿ ಬಿಟ್ಟಿದ್ದಳು. ಮಾಮೂಲಿ‌ ಎಂಬಂತೆ ಕಳೆದ ಭಾನುವಾರ ರಾತ್ರಿ ಕೂಡ ಗಂಡ-ಹೆಂಡತಿ ಮಧ್ಯೆ ಜಗಳ ಆರಂಭವಾಗಿದ್ದು, ಇಬ್ಬರ ನಡುವಿನ ಕಲಹ ತಾರಕಕ್ಕೇರಿ ಗಂಡ ದಾಸಪ್ಪನ ಕೊಲೆಯಲ್ಲಿ ಅಂತ್ಯವಾಗಿದೆ.

ಪತಿಯನ್ನೇ ಹತ್ಯೆ ಮಾಡಿದಳು ಪತ್ನಿ

ಜಗಳದಲ್ಲಿ ಪತ್ನಿ ನೇತ್ರಾವತಿ ಮುದ್ದೆ ಕೋಲಿನಿಂದ ಗಂಡನ ತಲೆಗೆ ಬಲವಾಗಿ ಹೊಡೆದಿದ್ದಾಳೆ. ಹೆಂಡತಿ ಕೊಟ್ಟ ಏಟಿಗೆ ಕುಸಿದು ಬಿದ್ದ ಗಂಡ, ತೀವ್ರ ರಕ್ತಸ್ರಾವವಾಗಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗಂಡ ಹೆಣವಾಗಿದ್ದನ್ನ ಕಂಡ ನೇತ್ರಾವತಿ, ಗಂಡನ ಶವವನ್ನ ಮನೆಯ ಹೊರಗಡೆ ಹಾಕಿ, ನೆಲದಲ್ಲಿದ್ದ ರಕ್ತದ ಕಲೆಗಳನ್ನ ಸಗಣಿಯಿಂದ ಸಾರಿಸಿದ್ದಾಳೆ. ನಂತರ ಗ್ರಾಮದ ಜನರ ಬಳಿ ಗಂಡ ಮನೆಯ ಹೊರಗಡೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಬಿಂಬಿಸಲು ಮುಂದಾಗಿದ್ದಾಳೆ.

ಇನ್ನು ದಾಸಪ್ಪ ಸಾವನ್ನಪ್ಪಿರುವ ಬಗ್ಗೆ ನಿನ್ನೆ ರಾತ್ರಿ ಗ್ರಾಮಸ್ಥರಿಂದ ಮಾಹಿತಿ ತಿಳಿದ ಐಮಂಗಲ ಠಾಣೆ ಪೊಲೀಸರು, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಸತ್ಯ ಹೊರಬಂದಿದೆ.‌ ಶವದ ಮೇಲಿನ ಗಾಯದ ಗುರುತು ನೋಡಿ ಈತ ಬಿದ್ದು ಸಾವನ್ನಪ್ಪಿಲ್ಲ. ಯಾರೋ ಹಲ್ಲೆ ಮಾಡುವ ಮೂಲಕ ಕೊಲೆ ಮಾಡಿದ್ದಾರೆ ಎಂಬುದನ್ನ ಮನಗಂಡು, ಹೆಂಡತಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಗಂಡನ ಕಿರುಕುಳದಿಂದ ಬೇಸತ್ತು ಆಕ್ರೋಶದಿಂದ ನಾನೇ ಹೊಡೆದು ಕೊಲೆ ಮಾಡಿದೆ. ನಂತರ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದ್ದಾಗಿ ಪತ್ನಿ ನೇತ್ರಾವತಿ ಪೋಲಿಸರಿಗೆ ತಿಳಿಸಿದ್ದಾಳೆ.

ಒಟ್ಟಾರೆ ಕುಡಿದು ದಿನನಿತ್ಯ ಕಿರುಕುಳ ನೀಡುತ್ತಿದ್ದ ಪತಿ ದಾಸಪ್ಪ ಹೆಂಡತಿಯಿಂದಲೇ ಕೊಲೆಯಾಗಿದ್ದು, ತಂದೆ-ತಾಯಿಯ ಜಗಳದ ಮಧ್ಯೆ ಕೂಸು ಬಡವಾಯಿತು ಎಂಬತೆ ಇಬ್ಬರು ಪುಟಾಣಿ ಮಕ್ಕಳು ಅನಾಥರಾಗಿದ್ದಾರೆ. ಸದ್ಯ ಗಂಡನನ್ನ ಕೊಂದ ಆರೋಪದಲ್ಲಿ ಪತ್ನಿ ನೇತ್ರಾವತಿ ಜೈಲು ವಾಸ ಅನುಭವಿಸುವಂತಾಗಿದೆ.

Intro:ಶೀಲ ಶಂಕಿಸಿದ ಪತಿಯನ್ನು ಹತ್ಯೆ ಮಾಡಿದ ಪತ್ನಿ

ಚಿತ್ರದುರ್ಗ:- ಶೀಲ ಶಂಕಿಸಿ ದಿನನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಪತಿಯನ್ನು ಪತ್ನಿ ಹೊಡೆದುರುಳಿಸಿದ್ದಾಳೆ. ಪತಿಯ ಕಿರುಳದಿಂದ ಬೇಸತ್ತಿದ್ದ ಪತ್ನಿ ಮುದ್ದೆ ಕೋಲಿನಿಂದ ಪತಿಯ ತಲೆಗೆ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ, ಗಂಡ ಹೆಣವಾಗಿದ್ದನ್ನ ಕಂಡ ಮಡದಿ ಗಾಭರಿಯಾಗಿ ಪ್ರಕರಣವನ್ನ ಮುಚ್ಚಿಹಾಕಲು ಪ್ಲ್ಯಾನ್ ಮಾಡಿ ಇದೀಗ ಜೈಲಿನ ಕಂಬಿ ಎಣಿಸುವಂತ್ತಾಗಿದೆ.

ಪತ್ನಿಯ ಶೀಲಶಂಕಿಸಿ ಸದಾ ಕಿರುಕುಳ ನೀಡುತ್ತಿದ್ದ ಪತಿಯನ್ನು ಪತ್ನಿ ಹತ್ಯೆ ಮಾಡಿರುವ ಘಟನೆಗೆ ಕೋಟೆನಾಡು ಚಿತ್ರದುರ್ಗ ಸಾಕ್ಷಿಯಾಗಿದೆ‌. ತಾಲೂಕಿನ ಸಜ್ಜನಕೆರೆ ಗ್ರಾಮದ ನಿವಾಸಿ ದಾಸಪ್ಪ ತನ್ನ ಮಡದಿಯಾದ ನೇತ್ರಾವತಿಯ ಶೀಲ ಶಂಕಿಸಿದ ಪರಿಣಾಮ ಕೊಲೆಯಾಗಿ ಹೆಣಾವಾಗಿದ್ದಾನೆ. ಕಳೆದ ಹತ್ತು ವರ್ಷಗಳ ಹಿಂದೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಸಲಬಮ್ಮನಹಳ್ಳಿ ಗ್ರಾಮದ ನೇತ್ರಾವತಿ ಜೊತೆ ವಿವಾಹವಾಗಿ ಅದೇ ಗ್ರಾಮದಲ್ಲಿ ನೆಲೆಸಿದ್ದರು. ಇಬ್ಬರು ಪುಟ್ಟ ಮಕ್ಕಳಿರುವ ಕುಟುಂಬದಲ್ಲಿ ಗಂಡ ದಾಸಪ್ಪ ದಿನಾ ಕುಡಿದು ಬಂದು ಹೆಂಡತಿ ಜೊತೆ ಜಗಳವಾಡುತ್ತಿರುವುದನ್ನು ನೋಡಿ ಹೈರಾಣಾದ ಪತ್ನಿ ನೇತ್ರಾವತಿ ತನ್ನ ಮಕ್ಕಳನ್ನ ತವರು ಮನೆಯಲ್ಲಿ ಬಿಟ್ಟಿರುತ್ತಾಳೆ. ಮಾಮೂಲಿ‌ಎಂಬಂತೆ ಕಳೆದ ಭಾನುವಾರ ರಾತ್ರಿ ಕೂಡ ಗಂಡ ಹೆಂಡ್ತಿ ಮಧ್ಯೆ ಜಗಳ ಆರಂಭವಾಗಿದ್ದು, ಇಬ್ಬರ ನಡುವಿನ ಕಲಹ ತಾರಕಕ್ಕೇರಿ ಗಂಡ ದಾಸಪ್ಪನ ಕೊಲೆಯಲ್ಲಿ ಅಂತ್ಯವಾಗಿದೆ. ಜಗಳದಲ್ಲಿ ಪತ್ನಿ ನೇತ್ರಾವತಿ ಮುದ್ದೆ ಕೋಲಿನಿಂದ ಗಂಡನ ತಲೆಗೆ ಬಲವಾಗಿ ಹೊಡೆದಿದ್ದಾಳೆ, ಹೆಂಡತಿ ಕೊಟ್ಟ ಏಟಿಗೆ ಕುಸಿದು ಬಿದ್ದ ಗಂಡ ತೀವ್ರ ರಕ್ತಸ್ರಾವವಾಗಿದ್ರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ, ಗಂಡ ಹೆಣವಾಗಿದ್ದನ್ನ ಕಂಡ ನೇತ್ರಾವತಿ, ಗಂಡನ ಶವವನ್ನ ಮನೆಯ ಹೊರಗಡೆ ಹಾಕಿ, ನಮೆಯಲ್ಲಿದ್ದ ರಕ್ತದ ಕಲೆಗಳನ್ನ ಸಗಣಿಯಿಂದಾ ಸಾರಿಸಿದ ನಂತರ, ಗ್ರಾಮದ ಜನರ ಬಳಿ ಗಂಡ ಮನೆಯ ಹೊರಗಡೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಬಿಂಬಿಸಲು ಮುಂದಾಗಿದ್ದಾಳೆ.

ಇನ್ನೂ ದಾಸಪ್ಪ ಸಾವನ್ನಪ್ಪಿರುವ ಬಗ್ಗೆ ನಿನ್ನೆ ರಾತ್ರಿ ಗ್ರಾಮಸ್ಥರಿಂದ ಮಾಹಿತಿ ತಿಳಿದ ಐಮಂಗಲ ಠಾಣೆ ಪೊಲೀಸರು, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಸತ್ಯಸತ್ಯತೆ ಹೊರಬಂದಿದೆ.‌ಇನ್ನೂ ಶವದ ಮೇಲಿನ ಗಾಯದ ಗುರುತು ನೋಡಿ ಈತ ಬಿದ್ದು ಸಾವನ್ನಪ್ಪಿಲ್ಲ, ಯಾರೋ ಹಲ್ಲೆ ಮಾಡುವ ಮೂಲಕ ಕೊಲೆಮಾಡಿದ್ದಾರೆ ಎಂಬುದನ್ನ ಮನಗಂಡು, ಹೆಂಡತಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಗಂಡನ ಕಿರುಕುಳದಿಂದ ಬೇಸತ್ತು ಆಕ್ರೋಶದಿಂದ ನಾನೇ ಹೊಡೆದು ಕೊಲೆ ಮಾಡಿದ ನಂತರ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದ್ದಾಗಿ ಪತ್ನಿ ನೇತ್ರಾವತಿ ಪೋಲಿಸರಿಗೆ ತಿಳಿಸಿದ್ದಾಳೆ.

ಒಟ್ಟಾರೆ ಸದಾ ಕುಡಿದು ದಿನನಿತ್ಯ ಕಿರುಕುಳ ನೀಡುತ್ತಿದ್ದ ಪತಿ ದಾಸಪ್ಪ ಹೆಂಡತಿಯಿಂದಲೇ ಕೊಲೆಯಾಗಿದ್ದು, ತಂದೆ ತಾಯಿಯ ಜಗಳದ ಮಧ್ಯೆ ಕೂಸು ಬಡವಾಯಿತು ಎಂಬತೆ ಇಬ್ಬರು ಪುಟಾಣಿ ಮಕ್ಕಳು ಅನಾಥರಾಗಿದ್ದಾರೆ. ಸಧ್ಯ ಗಂಡನನ್ನ ಕೊಂದ ಆರೋಪದಲ್ಲಿ ಪತ್ನಿ ನೇತ್ರಾವತಿ ಸಧ್ಯ ಜೈಲು ವಾಸ ಅನುಭವಿಸಿದ್ದಂತಾಗಿದೆ.
Body:HusbandConclusion:Murder
ETV Bharat Logo

Copyright © 2024 Ushodaya Enterprises Pvt. Ltd., All Rights Reserved.