ETV Bharat / state

ಗ್ಲುಕೋಸ್ ಡ್ರಿಪ್ ಹಿಡಿದ ಬಾಲಕಿ ವಿಡಿಯೋ ವೈರಲ್ ಪ್ರಕರಣ, ಆಸ್ಪತ್ರೆಗೆ ಡಿಹೆಚ್ಓ ಭೇಟಿ..!

ಜಿಲ್ಲೆಯ ಚಳ್ಳಕೆರೆ ನಗರದ (ತಿರುಮಲ ನರ್ಸಿಂಗ್ ಹೋಂ) ಖಾಸಗಿ ಆಸ್ಪತ್ರೆಗೆ ಡಿಹೆಚ್ ಓ ಪಾಲಕ್ಷಪ್ಪ ಭೇಟಿ ನೀಡಿ ಪರಿಶೀಲನೆ‌ ನಡೆಸಿದರು.

KN_CTD_07_04_DHO_VISIT_AV_7204336
ಗ್ಲುಕೋಸ್ ಡ್ರಿಪ್ ಹಿಡಿದ ಬಾಲಕಿ ವಿಡಿಯೋ ವೈರಲ್ ಪ್ರಕರಣ, ಆಸ್ಪತ್ರೆಗೆ ಡಿಹೆಚ್ ಓ ಭೇಟಿ..!
author img

By

Published : Feb 5, 2020, 6:13 AM IST

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ನಗರದ (ತಿರುಮಲ ನರ್ಸಿಂಗ್ ಹೋಂ) ಖಾಸಗಿ ಆಸ್ಪತ್ರೆಗೆ ಡಿಹೆಚ್​ಓ ಪಾಲಕ್ಷಪ್ಪ ಭೇಟಿ ನೀಡಿ ಪರಿಶೀಲನೆ‌ ನಡೆಸಿದರು. ಚಿಕಿತ್ಸೆಗೆ ಹಣ ಇಲ್ಲ ಅಂತ ಬಾಲಕಿಯನ್ನ ಆಸ್ಪತ್ರೆಯಿಂದ ಸಿಬ್ಬಂದಿ ಹೊರ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಆಸ್ಪತ್ರೆಗೆ ಭೇಟಿ ನೀಡಿ ರೋಗಿ ಹಾಗೂ ಸಂಬಂಧಿಕರಿಂದ ಮಾಹಿತಿ ಕಲೆ ಹಾಕಿದ್ದಾರೆ.

ಬಾಲಕಿ ಅರ್ಚನಾ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುಡೇವು ಗ್ರಾಮದವರಾಗಿದ್ದು, ಟೈಫಾಯಿಡ್ ಜ್ವರಕ್ಕೆ ಬಳಲುತ್ತಿದ್ದು, ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೇಳಲಾಗಿತ್ತು. ತನ್ನ ಅಜ್ಜಿ ಜೊತೆ ಬಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿ ಅರ್ಚನಾಳಿಗೆ ಟೈಫಾಯಿಡ್ ನಿಯಂತ್ರಣ ಮಾಡುವ ಸಲುವಾಗಿ ಚಳ್ಳಕೆರೆ ಖಾಸಗಿ ಆಸ್ಪತ್ರೆಯ ವೈದ್ಯರು ಗ್ಲುಕೋಸ್ ಹಾಕಿದ್ದರು. ಬಳಿಕ ಒಂದೇ ದಿನಕ್ಕೆ 3 ಸಾವಿರ ಬಿಲ್ ಆಸ್ಪತ್ರೆ ಸಿಬ್ಬಂದಿ ಮಾಡಿದ್ದರು. ಬಿಲ್ ಕಟ್ಟಲು ಬಡ ಅಜ್ಜಿ ಬಳಿ ಅಷ್ಟು ಹಣ ಇಲ್ಲ ಎಂದು ತಿಳಿದುಬಂದಾಗ ಗ್ಲುಕೋಸ್ ಡ್ರಿಪ್ ಸಮೇತ ಬಾಲಕಿಯನ್ನ ಆಸ್ಪತ್ರೆಯಿಂದ ಸಿಬ್ಬಂದಿ ಹೊರ ಹಾಕಿದ್ದಾರೆ ಎಂದು ಸ್ಥಳೀಯರ ಆರೋಪ ಮಾಡಿದ್ದರು.

ಅದ್ರೇ ಮಾಹಿತಿ ಕಲೆ ಹಾಕಿದ ಡಿಹೆಚ್ಓ ಬಳಿ ಬಾಲಕಿ ಅರ್ಚನಾ ಹಾಗೂ ತಾಯಿ ನಮಗೆ ಆಸ್ಪತ್ರೆಯಿಂದ ಹೊರಹಾಕಿಲ್ಲ. ಬದಲಾಗಿ ನಾವು ಡ್ರಿಪ್ ತೆಗೆಸದೆ ತಿಂಡಿ ತರಲು ಹೋದಾಗ ಈ ಘಟನೆ ಜರುಗಿದೆ ಎಂದರು.

ಗ್ಲೂಕೋಸ್ ಹಿಡಿದು ಬಸ್ ನಿಲ್ಧಾಣದಲ್ಲಿ ಬಾಲಕಿ ನಿಂತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಡಿಹೆಚ್​ಓ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.