ಚಿತ್ರದುರ್ಗ: ವಿವಿಧ ಬೆಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ಆರ್ಟಿಸಿ ನೌಕರರು ಎರಡು ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸತತ ಮೂರು ದಿನಗಳಿಂದ ಕರ್ತವ್ಯ ನಿರ್ಹಿಸುತ್ತಿದ್ದ ಟ್ರೈನಿ ಬಸ್ ಕಂಡಕ್ಟರ್ ಬಸ್ನಲ್ಲೇ ಕುಸಿದು ಬಿದ್ದಿರುವ ಘಟನೆ ಜಿಲ್ಲೆಯ ಚಳ್ಳಕೆರೆ ನಗರದಲ್ಲಿ ನಡೆದಿದೆ.
ಅಸ್ವಸ್ಥಗೊಂಡಿರುವ ಬಸ್ ನಿರ್ವಾಹಕ ಶಿವರಾಜ್ ಅವರ ಸೊಂಟಕ್ಕೆ ಸಣ್ಣಪುಣ್ಣ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತ ಭರಮಸಾಗರ ಮೂಲದರಾಗಿದ್ದು, ಚಳ್ಳಕೆರೆಯ ಬಸ್ ಡಿಪೋದಲ್ಲಿ ಕೆಲಸ ಮಾಡುತ್ತಿದ್ದಾರೆ.
ಓದಿ: ಬೆಂಗಳೂರಿನಲ್ಲಿ ರಾತ್ರಿ ಮನೆಗೆ ನುಗ್ಗಿ ಡಬಲ್ ಮರ್ಡರ್: ನಗ,ನಾಣ್ಯ ದೋಚಿ ಹಂತಕ ಪರಾರಿ
ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶಿವರಾಜ್, ಮೇಲಾಧಿಕಾರಿಗಳ ಒತ್ತಾಯಕ್ಕೆ ಮಣಿದು ಕೆಲಸಕ್ಕೆ ಹಾಜರಾದ ಪರಿಣಾಮ ಅಸ್ವಸ್ಥರಾಗಿದ್ದಾರೆ ಎನ್ನಲಾಗುತ್ತಿದೆ.