ETV Bharat / state

ರಾಜ್ಯದ ವಿವಿಧೆಡೆ 3 ಪ್ರತ್ಯೇಕ ಘಟನೆ: ವಿದ್ಯಾರ್ಥಿ ಸೇರಿ ಮೂವರು ಸಾವು - ಈಟಿವಿ ಭಾರತ ಕನ್ನಡ

ಚಿತ್ರದುರ್ಗದಲ್ಲಿ ಬಸ್​ನಿಂದ ಬಿದ್ದು ಯುವಕ ಸಾವಿಗೀಡಾಗಿದ್ದಾನೆ. ರಾಯಚೂರಿನಲ್ಲಿ ಬೈಕ್​ಗೆ ಬಸ್​ ಡಿಕ್ಕಿಯಾಗಿ ವಿದ್ಯಾರ್ಥಿಯ ಪ್ರಾಣಪಕ್ಷಿ ಹಾರಿಹೋಗಿದೆ. ವಿಜಯಪುರಲ್ಲಿ ಈಜು ಪ್ರಾಣಕ್ಕೆ ಕುತ್ತು ತಂದಿದೆ.

separate incidents
ಮೂರು ಪ್ರತ್ಯೇಕ ಘಟನೆ
author img

By

Published : Jan 8, 2023, 1:43 PM IST

ಚಿತ್ರದುರ್ಗ/ರಾಯಚೂರು/ವಿಜಯಪುರ: ರಾಜ್ಯದ ವಿವಿಧೆಡೆ ನಡೆದ ಮೂರು ಪ್ರತ್ಯೇಕ ಘಟನೆಗಳಲ್ಲಿ ವಿದ್ಯಾರ್ಥಿ ಸೇರಿದಂತೆ ಮೂವರು ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡಿದ್ದಾನೆ. ಚಿತ್ರದುರ್ಗದ ಚಳ್ಳಕೆರೆಯಲ್ಲಿ ಬಸ್​ನಿಂದ ಕೆಳಗೆ ಬಿದ್ದು, ಯುವಕ ಮೃತಪಟ್ಟರೆ, ರಾಯಚೂರಿನಲ್ಲಿ ಬಸ್​ ಡಿಕ್ಕಿಯಾಗಿ ವಿದ್ಯಾರ್ಥಿ ಅಸುನೀಗಿದ್ದಾನೆ. ಇನ್ನೊಂದೆಡೆ, ವಿಜಯಪುರದಲ್ಲಿ ಈಜಾಡಲು ಹೋಗಿ ಯುವಕ ನೀರುಪಾಲಾದ ಘಟನೆ ನಡೆದಿದೆ.

ಬಸ್ ಬಾಗಿಲಲ್ಲಿ ಕಾದಿತ್ತು ಸಾವು: ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯಿಂದಾಗಿ ಬಸ್ಸಿನ ಮುಂಬಾಗಿಲಿನಲ್ಲಿ ನಿಂತಿದ್ದ ಯುವಕ ಆಯತಪ್ಪಿ ಕೆಳಗೆ ಬಿದ್ದಿದ್ದು, ಆತನ ಮೇಲೆ ಬಸ್​ ಹರಿದಿದೆ. ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆಯ ಹೊತ್ತಿಗೆ ಚಳ್ಳಕೆರೆ ಟೌನ್ ಕಡೆಯಿಂದ ರೆಡ್ಡಿಹಳ್ಳಿ ಕಡೆಗೆ ಬಸ್‌ ಬರುತ್ತಿತ್ತು. ಈ ಬಸ್ಸಿನ ಮುಂಬಾಗಿಲಿನಲ್ಲಿ ನಿಂತಿದ್ದ ಚೇತನ್​ ಎಂಬ ಯುವಕ ಸಮತೋಲನ ತಪ್ಪಿ ಕೆಳಗೆ ಬಿದ್ದಿದ್ದಾನೆ. ಬಸ್ ಚಕ್ರ ಆತನ ಸೊಂಟ ಮತ್ತು ಕಾಲಿನ ಮೇಲೆ ಹರಿದಿದೆ. ತಕ್ಷಣ ಚೇತನ್​ ಅವರನ್ನು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಸ್ಥಳಕ್ಕೆ ಚಳ್ಳಕೆರೆ ಪಿಎಸ್ಐ ಡಿ.ತಿಮ್ಮಣ್ಣ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕೆಲಸಕ್ಕಿದ್ದ ಜ್ಯುವೆಲ್ಲರಿಯಿಂದ ₹58 ಲಕ್ಷ ಮೌಲ್ಯದ ಆಭರಣ ಕದ್ದ ಯುವತಿ ಸೆರೆ: ಸಿಸಿಟಿವಿ ದೃಶ್ಯ

ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿ ಸಾವು: ಯುವಕ ಕಾಲೇಜಿಗೆ ತೆರಳುವಾಗ ತಡವಾಗಿದ್ದು ಬಸ್​ ತಪ್ಪಿಸಿಕೊಂಡಿದ್ದಾನೆ. ಮುಂದೆ ಹೋಗುತ್ತಿದ್ದ ಬಸ್ಸನ್ನು ಬೈಕ್​ನಲ್ಲಿ ಚೇಸ್​ ಮಾಡಲು ಹೋಗಿದ್ದು, ಅಚಾನಕ್ಕಾಗಿ ಅದೇ ಬಸ್​ ಡಿಕ್ಕಿ ಹೊಡೆದು ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಅಪಘಾತದಲ್ಲಿ ಬೈಕ್​ ಹಿಂಬದಿ ಕುಳಿತಿದ್ದ ಯುವಕ ಗಂಭೀರ ಗಾಯಗೊಂಡಿದ್ದಾನೆ.

ಜಿಲ್ಲೆಯ ಮಾನವಿ ತಾಲೂಕಿನ ಗೋರ್ಕಲ್ ಹತ್ತಿರ ಇಂದು ಬೆಳಗ್ಗೆ ದುರ್ಘಟನೆ ನಡೆದಿದೆ. ಗೋರ್ಕಲ್ ಗ್ರಾಮದ ನಿವಾಸಿ ಖಾಸಿಂ ಅಲಿ ಎಂಬವರ ಪುತ್ರ ಮಹಮ್ಮದ್​ ರಫಿ(21) ಮೃತ ಯುವಕ ಎಂದು ಗುರುತಿಸಲಾಗಿದೆ. ಗಾಯಾಳು ಇರ್ಫಾನ್ ಅವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದ ಮಾನವಿ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈಜಲು ಹೋದ ಯುವಕ ನೀರುಪಾಲು: ಈಜು ಬಾರದಿದ್ದರೂ ಬಾವಿಯಲ್ಲಿ ಈಜಲು ತೆರಳಿದ್ದ ಯುವಕ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ನಡೆದಿದೆ. ಅಭಿಷೇಕ ಪತ್ತಾರ(22) ಮೃತಯುವಕ. ಸ್ಥಳಕ್ಕೆ ಇಂಡಿ ಗ್ರಾಮೀಣ ಪೊಲೀಸರು ಭೇಟಿ ‌ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ದೇವಾಲಯದಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಆರೋಪಿ ಧರ್ಮದರ್ಶಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.