ETV Bharat / state

ಲಾರಿ, ಕ್ರೂಸರ್​​​ ಡಿಕ್ಕಿ: ಸ್ಥಳದಲ್ಲೇ ಇಬ್ಬರ ಸಾವು, ಐವರಿಗೆ ಗಾಯ - ಚಿತ್ರದುರ್ಗ ಅಪಘಾತ ಸುದ್ದಿ

ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ಬಿ.ಜಿ.ಕೆರೆ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಐವರಿಗೆ ಗಂಭೀರ ಗಾಯವಾಗಳಾಗಿವೆ.

accident
ಲಾರಿ, ಕ್ರೂಸರ್​ ಮುಖಾಮುಖಿ
author img

By

Published : Mar 21, 2020, 3:40 PM IST

ಚಿತ್ರದುರ್ಗ: ಕ್ರೂಸರ್ ಮತ್ತು ಲಾರಿ‌ ನಡುವೆ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಿ.ಜಿ.ಕೆರೆ ಗ್ರಾಮದ ಬಳಿ ನಡೆದಿದೆ.

ಅಪಘಾತದ ರಭಸಕ್ಕೆ ಕ್ರೂಸರ್ ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಯಚೂರು ಮೂಲದ ಚಾಲಕ ಮಹಾಂತೇಶ(35) ಹಾಗೂ ಸಾವಿತ್ರಮ್ಮ(30) ಸಾವನ್ನಪ್ಪಿದವರು ಎಂದು ತಿಳಿದು ಬಂದಿದೆ.

ಐವರು ಗಾಯಾಳುಗಳನ್ನು ಬಳ್ಳಾರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮೊಳಕಾಲ್ಮೂರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.