ಚಿತ್ರದುರ್ಗ: ಶಿಕ್ಷಕರ ದಿನಾಚರಣೆ ಅಂಗವಾಗಿ ಮುರುಘಾ ಮಠದಲ್ಲಿ ಸಾವಿರಾರು ಮಕ್ಕಳು ಭಾಗಿಯಾಗಿ, ತಮ್ಮ ನೆಚ್ಚಿನ ಗುರು ಮುರುಘಾ ಶರಣರಿಗೆ ಶುಭಾಶಯಕೋರಿದರು.
ಮುರುಘಾ ಮಠದ ಶೂನ್ಯ ಪೀಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರು, ಸರ್ವೇಪಲ್ಲಿ ರಾಧಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶಿಕ್ಷಕರ ದಿನಾಚರಣೆಗೆ ಚಾಲನೆ ನೀಡಿದರು.
ಮಠದ ಅನುಭವ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಮುರುಘಾ ಶರಣರು ಆಶೀರ್ವಾದ ವಚನ ನೀಡಿದರು. ಇದೇ ವೇಳೆ ವಿರಕ್ತ ಮಠದ ಶ್ರೀ ಬಸವ ಪ್ರಭು, ಭಾಗಿಯಾಗಿದ್ದಾರು.