ಚಿತ್ರದುರ್ಗ: ಸಾಣಿಹಳ್ಳಿ ಗ್ರಾಮದ ತರಳಬಾಳು ಶಾಖಾಮಠದಲ್ಲಿ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದುರ್ಗ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಶ್ರೀಗಂಧ ಮರಗಳ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದ ಲೋಕೇಶ್ ತಿಪ್ಪಣ್ಣ (22), ಕಪಗೆರೆ ಗ್ರಾಮದ ಕೆಂಚಪ್ಪ ಪ್ರಹ್ಲಾದ್ (24) ಹಾಗೂ ಬಸವರಾಜ್ ದುರ್ಗಪ್ಪ(36) ಬಂಧಿತ ಆರೋಪಿಗಳು. ಬಂಧಿತರಿಂದ 3,700 ಕೆಜಿ ತೂಕದ 15,000 ರೂ. ಮೌಲ್ಯದ ಶ್ರೀಗಂಧ, ಕೃತ್ಯಕ್ಕೆ ಬಳಸಿದ್ದ ಮೋಟರ್ ಸೈಕಲ್ ಮತ್ತು ಒಂದು ಗರಗಸವನ್ನು ವಶಕ್ಕೆ ಪಡೆಯಲಾಗಿದೆ.
ಕಳೆದ ವರ್ಷ ಡಿ.24 ರಂದು ಸಾಣೆಹಳ್ಳಿ ಗ್ರಾಮದ ಮಠದಲ್ಲಿ ಶ್ರೀಗಂಧ ಮರಗಳ ಕಳ್ಳತನವಾಗಿತ್ತು. ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕಣರದ ಜಾಡು ಹಿಡಿದು ಹೊರಟ ಖಾಕಿ ಪಡೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಓದಿ: ಎಫ್ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಮತ್ತೋರ್ವ ಆರೋಪಿ ಬಂಧನ
ಹೊಸದುರ್ಗ ತಾಲೂಕಿನ ಕಪಗೆರೆ ಗ್ರಾಮದಲ್ಲಿ ಪೊಲೀಸರು ಗಸ್ತು ತಿರುಗುವಾಗ ಸಂಶಯಾಸ್ಪದವಾಗಿ ಮೋಟಾರ್ ಸೈಕಲ್ನಲ್ಲಿ ಬರುತ್ತಿದ್ದ ಮೂವರು ಆರೋಪಿಗಳನ್ನು ವಿಚಾರಣೆ ನಡೆಸಿದ್ದರು. ಈ ವೇಳೆ, ಆರೋಪಿಗಳು ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣ ಭೇದಿಸಿದ ಹೊಸದುರ್ಗ ಪಿಎಸ್‌ಐ ಶಿವಕುಮಾರ್.ಈ ಅವರ ನೇತೃತ್ವದ ತಂಡಕ್ಕೆ ಎಸ್ಪಿ ಜಿ.ರಾಧಿಕಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.