ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಸಿಹಿನೀರು ಕಟ್ಟೆ, ಹುಣಸೆಪಂಚೆ ಗ್ರಾಮಸ್ಥರು ಸೇರಿದಂತೆ ರೈತರು ಹಾಗೂ ಜನರು ಕಲ್ಲು ಗಣಿಗಾರಿಕೆ ವಿರೋಧಿಸಿ ಪ್ರತಿಭಟಿನೆ ನಡೆಸಿದರು.
ಈ ವೇಳೆ ಕಲ್ಲು ಗಣಿಗಾರಿಕೆ ವಿರುದ್ಧ ಪ್ರತಿಭಟನಾಕಾರರು ಧ್ವನಿ ಎತ್ತಿದ್ದಕ್ಕಾಗಿ ಅಧಿಕಾರಿಗಳು ಹಾಗೂ ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ವಾಗ್ವಾದಕ್ಕಿಳಿದ ಪ್ರತಿಭಟನಾಕಾರರಿಗೆ ತಹಶೀಲ್ದಾರ್ ನಾಗರಾಜ್ ಅವಾಜ್ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಪ್ರತಿಭಟನಕಾರರ ಮೇಲೆ ಹರಿಹಾಯ್ದ ತಹಶೀಲ್ದಾರ್, ಕೋರ್ಟಿಗೆ ಹೋಗ್ತಿಯೇನೋ ಹೋಗೋ ಧಮ್ಕಿ ಹಾಕಿದ್ರು. ಇನ್ನು ಹೊಳಲ್ಕೆರೆ ತಹಶೀಲ್ದಾರ್ ನಾಗರಾಜ್ ಈ ವರ್ತನೆಗೆ ಪ್ರತಿಭಟನೆಕಾರರಿಂದ ಆಕ್ರೋಶ ವ್ಯಕ್ತವಾಗಿದೆ.