ETV Bharat / state

ಅನುಮಾನಾಸ್ಪದವಾಗಿ ಬಾಲಕ ಸಾವು: ನ್ಯಾಯಕ್ಕಾಗಿ ಕುಟುಂಬಸ್ಥರ ಪ್ರತಿಭಟನೆ..!

ಜನವರಿ 02 ನೇ ತಾರೀಖಿನಂದು ಚಿತ್ರದುರ್ಗ ತಾಲೂಕಿನ ಕಳ್ಳಿಹಟ್ಟಿ ಗ್ರಾಮದ ಅಪ್ರಾಪ್ತ ಬಾಲಕ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇನ್ನು ನ್ಯಾಯ ನೀಡುವಂತೆ ಮೃತ ಬಾಲಕನ ಕುಟುಂಬಸ್ಥರು ಸದ್ಯ ಎಸ್ಪಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

chitradurga
ಮೃತ ಅಪ್ರಾಪ್ತ ಬಾಲಕನ ಕುಟುಂಬಸ್ಥರು
author img

By

Published : Jan 6, 2021, 7:07 AM IST

Updated : Jan 6, 2021, 7:35 AM IST

ಚಿತ್ರದುರ್ಗ: ಜಿಲ್ಲೆಯಲ್ಲಿ ಬಾಲಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು,‌ ಹಲವು ಅನುಮಾನಕ್ಕೆ ದಾರಿಯಾದರೆ, ಇತ್ತ ಬಾಲಕ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಾಗಿ ಪಕ್ಕದ ಮನೆಯವರು ಕೊಲೆ ಮಾಡಿದ್ದಾರೆ ಎಂದು ನ್ಯಾಯ ನೀಡುವಂತೆ ಮೃತ ಬಾಲಕನ ಕುಟುಂಬಸ್ಥರು ಸದ್ಯ ಎಸ್ಪಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಎಸ್ಪಿ ಕಚೇರಿ ಮುಂಭಾಗದಲ್ಲಿ ಮೃತ ಬಾಲಕನ ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.

ಜನವರಿ 02 ನೇ ತಾರೀಖಿನಂದು ಚಿತ್ರದುರ್ಗ ತಾಲೂಕಿನ ಕಳ್ಳಿಹಟ್ಟಿ ಗ್ರಾಮದ ಅಪ್ರಾಪ್ತ ಬಾಲಕನ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಳ್ಳಿಹಟ್ಟಿ ಜನ ಮಾತನಾಡುತ್ತಿದ್ದರು. ಆದರೆ, ಬಾಲಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಮೃತ ಬಾಲಕನ ಸಾವಿಗೆ ನ್ಯಾಯ ನೀಡುವಂತೆ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಎಸ್ಪಿ ಕಚೇರಿಗೆ ಜಮಾಯಿಸಿ, ಬಾಲಕ ಆತ್ಮಹತ್ಯೆಗೆ ಶರಣಾಗಿಲ್ಲ, ಬದಲಾಗಿ ಪಕ್ಕದ ಮನೆಯ ತಿಮ್ಮರಾಯ ಎಂಬುವವನು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ದೂರುತ್ತಿದ್ದಾರೆ.

ಹಳೆಯ ಹಗೆತನದಿಂದ ಯಾರೂ ಇಲ್ಲದ ಸಮಯದಲ್ಲಿ ಬಾಲಕನನ್ನು ಕತ್ತು ಹಿಸುಕಿ ಕೊಲೆ ಮಾಡಿ ಕುತ್ತಿಗೆಗೆ ಹಗ್ಗ ಬಿಗಿದು ಬಾಲಕನೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸುಳ್ಳು ಹೇಳಿ ಪರಾರಿಯಾಗಿದ್ದಾನೆ ಎಂದು ಕುಟುಂಬಸ್ಥರು‌ ಆರೋಪಿಸಿದ್ದಾರೆ.

ಇನ್ನು ಬಾಲಕನ ಸಾವಿಗೆ ಕಾರಣನಾದ ತಿಮ್ಮರಾಯನ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಎಸ್ಪಿ ಕಚೇರಿ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಪೊಲೀಸರು ಸೂಕ್ತ ತನಿಖೆ ನಡಿಸಿ ತಪ್ಪಿತಸ್ಥರ ಕ್ರಮಕ್ಕೆ ಮುಂದಾಗಬೇಕಿದೆ.

Last Updated : Jan 6, 2021, 7:35 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.