ಚಿತ್ರದುರ್ಗ: ಗ್ರಾಮ ಪಂಚಾಯತ್ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಮೊಳಕಾಲ್ಮೂರು ಸಿಪಿಐ ಉಮೇಶ್ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇಂದು ಬೆಳಿಗ್ಗೆ ಮೊಳಕಾಲ್ಮೂರು ಪೊಲೀಸ್ ಠಾಣೆಗೆ ರೌಡಿಗಳನ್ನು ಕರೆಸಿದ ಇನ್ಸ್ಪೆಕ್ಟರ್ ಉಮೇಶ್, ಗ್ರಾಮ ಪಂಚಾಯತಿ ಚುನಾವಣೆ ಸಮೀಪಿಸುತ್ತಿದ್ದು, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ, ಗಲಭೆಯಾಗುವಂತಹ ಕೆಲಸ ಮಾಡುವವರ ಮೇಲೆ ಗುಂಡಾ ಕೇಸ್ ದಾಖಲಿಸಿ ಗಡಿಪಾರು ಮಾಡುತ್ತೇವೆ ಎಂದು ಖಾರವಾಗಿಯೇ ನುಡಿದು ಖಡಕ್ ಎಚ್ಚರಿಕೆ ನೀಡಿದರು.