ETV Bharat / state

ಚಿತ್ರದುರ್ಗಕ್ಕೆ 7 ಸಾವಿರ ಲೀಟರ್​​ ಆಕ್ಸಿಜನ್ ನೀಡಲು ಸಿಎಂ ಬಳಿ ಮನವಿ: ಶ್ರೀರಾಮುಲು - chitradurga Corona news

ಚಿತ್ರದುರ್ಗ ಜಿಲ್ಲೆಗೆ 7 ಸಾವಿರ ಲೀಟರ್​​ ಆಕ್ಸಿಜನ್ ಬೇಕೆಂದು ಈಗಾಗಲೇ ಸಿಎಂ ಬಳಿ ಮನವಿ ಮಾಡಲಾಗಿದೆ. ಅಷ್ಟೇ ಅಲ್ಲದೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ರೆಮ್​ಡೆಸಿವಿರ್ ಪೂರೈಕೆಯ ಬಗ್ಗೆ ಡಿಸಿಎಂ ಜೊತೆ ಮಾತನಾಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಹೇಳಿದ್ದಾರೆ.

chitradurga
ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು
author img

By

Published : May 6, 2021, 10:16 AM IST

ಚಿತ್ರದುರ್ಗ: ಎಲ್ಲೆಡೆ ಕೊರೊನಾ ಎರಡನೇ ಅಲೆ ಹಬ್ಬುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ 7 ಸಾವಿರ ಲೀಟರ್​​ ಆಕ್ಸಿಜನ್ ಬೇಕೆಂದು ಈಗಾಗಲೇ ಸಿಎಂ ಬಳಿ ಮನವಿ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಸದ್ಯ ಪ್ರತಿದಿನ 3 ಸಾವಿರ ಲೀಟರ್​ ಆಕ್ಸಿಜನ್ ಬೇಕಾಗುತ್ತಿದೆ. ಆಕ್ಸಿಜನ್ ಉತ್ಪಾದನೆ ಘಟಕ ನಿರ್ಮಾಣಕ್ಕೆ ಈಗಾಗಲೇ ಚಿತ್ರದುರ್ಗ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇನ್ನು ಸಚಿವ‌ ಜಗದೀಶ್ ಶೆಟ್ಟರ್ ಜತೆಗೆ ಈ ಬಗ್ಗೆ ಮಾತಾನಾಡಿ ಬೇಡಿಕೆ‌ ಕೂಡ ಸಲ್ಲಿಸಿದ್ದೇನೆ. ಎಲ್ಲೆಡೆ ರೆಮ್​ಡೆಸಿವಿರ್ ಕಾಳಸಂತೆಯಲ್ಲಿ ಮಾರಾಟದ ಬಗ್ಗೆ ಅತಿ ಹೆಚ್ಚು ಆರೋಪ ಕೇಳಿ ಬಂದಿದ್ದು, ರೆಮ್‌ಡೆಸಿವಿರ್ ಸಹ ಕೊರತೆ ಇದೆ ಎಂದು ಹೇಳುತ್ತಿದ್ದಾರೆ. ಹಾಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ರೆಮ್​ಡೆಸಿವಿರ್ ಪೂರೈಕೆಯ ವ್ಯವಸ್ಥೆಯ ಬಗ್ಗೆ ಡಿಸಿಎಂ ಅಶ್ವತ್ಥ ನಾರಾಯಣ‌ ಜತೆ ಮಾತಾಡಿದ್ದೇನೆ ಎಂದರು.

ಅಷ್ಟೇ ಅಲ್ಲದೆ ಕೋವಿಡ್ ಪೀಡಿತರು ಹೋಂ ಐಸೋಲೇಷನ್ ಬದಲಾಗಿ ಹಾಸ್ಟೆಲ್​ಗಳಲ್ಲಿ ಸಾಂಸ್ಥಿಕವಾಗಿ ಕ್ವಾರಂಟೈನ್ ಆಗುವಂತೆ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗಿದ್ದು, ಎಲ್ಲಿಲ್ಲಿ ಬೆಡ್​​​ಗಳಿವೆ ಎಂಬುದರ ಮಾಹಿತಿ ನೀಡುವ ಆ್ಯಪ್ ಡೆವಲಪ್ಮೆಂಟ್​ಗೆ ಜಿಲ್ಲಾಧಿಕಾರಿ ಮತ್ತು ಡಿಹೆಚ್​​ಒ ಅವರಿಗೆ ಸೂಚನೆ ನೀಡಿದ್ದೇನೆ ಎಂದರು.

ಜಿಲ್ಲೆಯಲ್ಲಿ ಆರ್​ಟಿಪಿಸಿಆರ್ ಲ್ಯಾಬ್ ನಿರ್ಮಾಣ ಮತ್ತು ಬೆಂಗಳೂರಿನಲ್ಲಿ ನಡೆದ ಆಕ್ಸಿಜನ್ ಬೆಡ್ ಬ್ಲಾಕಿಂಗ್ ವಿಚಾರ ಸಂಬಂಧ ಮಾತನಾಡಿದ ಅವರು, ಆಸೆಗೆ ಬಿದ್ದು ಪ್ರತಿ ವಿಚಾರದಲ್ಲಿ ವ್ಯಾಪಾರ ಮಾಡುತ್ತಾರೆ. ಜನರ‌ ಸಾವಿನಲ್ಲೂ ಲಾಭ ಪಡೆದುಕೊಳ್ಳುವಂತಹ ಮನುಷ್ಯರಿದ್ದಾರೆ. ಜಿಲ್ಲೆಗಳಲ್ಲಿ ಬೆಡ್ ಬ್ಲಾಕಿಂಗ್ ಕಂಡು ಬಂದಿಲ್ಲ. ಬೆಂಗಳೂರಿನಲ್ಲಿ ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ ಎಂದು ತೇಜಸ್ವಿ ಸೂರ್ಯ ಆರೋಪ ಮಾಡಿದ್ದಾರೆ. ಬೆಡ್ ಬ್ಲಾಕಿಂಗ್ ಕಂಡು ಬಂದಲ್ಲಿ ಅಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.