ಚಿತ್ರದುರ್ಗ: ಜಿಲ್ಲೆಯ ಕೃಷಿ ಇಲಾಖೆಯ ಮಣ್ಣು ಆರೋಗ್ಯ ಕೇಂದ್ರ ಸೌರ ಶಕ್ತಿ ಬಳಸಿ ಸಾವಿರಾರು ರೂಪಾಯಿ ವಿದ್ಯುತ್ ಬಿಲ್ ಉಳಿಸುತ್ತಿದೆ. ಜಿಲ್ಲೆಯಾದ್ಯಂತ ಒಟ್ಟು 2,90,577 ರೈತರು ತರುವ ಮಣ್ಣನ್ನು ಸೋಲಾರ್ ವಿದ್ಯುತ್ತಿನಿಂದ ಸ್ಯಾಂಪ್ಲಿಂಗ್ ಮಾಡುವ ಮೂಲಕ ಸಾಯಿಲ್ ಹೆಲ್ತ್ ಕಾರ್ಡನ್ನು ರೈತರಿಗೆ ವಿತರಿಸಲಾಗುತ್ತಿದೆ.
ಈ ಇಲಾಖೆಯಲ್ಲಿ ಕಳೆದ 2 ವರ್ಷಗಳಿಂದ ಸೌರ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಲಾಗುತ್ತಿದ್ದು, ವಿದ್ಯುತ್ ಕೈ ಕೊಟ್ಟ ಸಂದರ್ಭದಲ್ಲಿ ಮಣ್ಣು ಆರೋಗ್ಯ ಕೇಂದ್ರದಲ್ಲಿರುವ ಪ್ರತಿಯೊಂದು ವಿದ್ಯುತ್ ಉಪಕರಣಗಳು ಸೌರ ಶಕ್ತಿಯ ಮೇಲೆ ನಡೆಯುತ್ತಿವೆ. ಮಣ್ಣು ಪರೀಕ್ಷೆಗೆ ಉಪಯೋಗಿಸುವ ಪಿಹೆಚ್ ಮೀಟರ್, ಕಂಡಕ್ಟರೈಡಿ ಮೀಟರ್, ಶೇಕಿಂಗ್ ಮಿಷನ್, ಸೇರಿದಂತೆ 2 ಕಂಪ್ಯೂಟರ್ ಗಳು ಕೂಡ ಸೌರ ಶಕ್ತಿಯಲ್ಲೇ ಚಲಿಸುತ್ತಿವೆ. ಇಲ್ಲಿಗೆ ತರಭೇತಿ ಪಡೆಯಲು ಬರುವ ವಿದ್ಯಾರ್ಥಿಗಳಿಗೂ ಇದರಿಂದ ಸಹಕಾರಿಯಾಗಿದೆಯಂತೆ.
ಹೀಗೆ ಹೆಚ್ಚು ಹೆಚ್ಚು ಸರ್ಕಾರಿ ಕಚೇರಿಗಳು ಸೌರಶಕ್ತಿಯ ವಿದ್ಯುತ್ ಬಳಕೆ ಮಾಡುವ ಪದ್ಧತಿ ಬೆಳೆಸಿಕೊಂಡ್ರೆ, ವಿದ್ಯುತ್ ಬಿಲ್ ಪಾವತಿ ಕಡಿಮೆಯಾಗುವ ಜೊತೆಗೆ ಪರಿಸರಕ್ಕೂ ಒಳ್ಳಯದು! ಸರ್ಕಾರದ ಬೊಕ್ಕಸಕ್ಕೂ ಹೊರೆ ಕಡಿಮೆಯಾಗುತ್ತೆ.