ETV Bharat / state

ಸದಾಶಿವ ಆಯೋಗದ ವರದಿ ಜಾರಿಗೆ ಸರ್ಕಾರ ಸಿದ್ಧ : ಕಟೀಲ್ ಹೇಳಿಕೆಗೆ ಸೇವಾಲಾಲ್ ಶ್ರೀ ಕೆಂಡಾಮಂಡಲ - ಚಿತ್ರದುರ್ಗ ಹೊರವಲಯದಲ್ಲಿರುವ ಬಂಜಾರ ಗುರುಪೀಠ

ಕಟೀಲ್​ರ ಹೇಳಿಕೆಯಿಂದ ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳ ಮಧ್ಯೆ ವೈಮನಸ್ಸು ಉಂಟಾಗಲಿದೆ. ಈ ಹಿನ್ನೆಲೆ ಅವರು ಕ್ಷಮೆ ಯಾಚಿಸಬೇಕು ಎಂದು ಸೇವಾಲಾಲ್ ಶ್ರೀ ಕಿಡಿಕಾರಿದ್ದಾರೆ.

Sevalal outrage against Kateel statement, ಕಟೀಲ್ ಹೇಳಿಕೆಗೆ ಸೇವಾಲಾಲ್  ಶ್ರೀ ಕೆಂಡಾಮಂಡಲ
ಕಟೀಲ್ ಹೇಳಿಕೆಗೆ ಸೇವಾಲಾಲ್ ಶ್ರೀ ಕೆಂಡಾಮಂಡಲ
author img

By

Published : Nov 3, 2020, 6:37 AM IST

Updated : Nov 3, 2020, 6:43 AM IST

ಚಿತ್ರದುರ್ಗ: ಶಿರಾ ವಿಧಾನಸಭೆ ಉಪಚುನಾವಣೆಯ ಪ್ರಚಾರದ ಭರದಲ್ಲಿ ಸದಾಶಿವ ಆಯೋಗದ ವರದಿ ಜಾರಿಗೆ ಸರ್ಕಾರ ಸಿದ್ಧ ಎಂಬ ನಳೀನ್ ಕುಮಾರ್ ಕಟೀಲ್ ಹೇಳಿಕೆ ಬಂಜಾರ ಗುರು ಪೀಠದ ಶ್ರೀಯವರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಹೇಳಿಕೆ ಹಿಂಪಡೆಯದಿದ್ದರೆ ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ರವರ ವಿರುದ್ಧ ರಾಜ್ಯದಂತ್ಯ ಪ್ರತಿಭಟಿಸಲಾಗುವುದೆಂದು ಬಂಜಾರ ಗುರು ಪೀಠದ ಸರ್ದಾರ್ ಸೇವಾಲಾಲ್ ಶ್ರೀ ಆಕ್ರೋಶ ಹೊರಹಾಕಿದ್ದಾರೆ.

ಚಿತ್ರದುರ್ಗ ಹೊರವಲಯದಲ್ಲಿರುವ ಬಂಜಾರ ಗುರುಪೀಠದಲ್ಲಿ ನಡೆದ ಮಹಾಯಾಗ ಹಾಗು ಚಿಂತನ ಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ರವರಿಗೆ ಬಯಲು ಸೀಮೆ ಚಿತ್ರದುರ್ಗದ ಜನರ ಸಮಸ್ಯೆಗಳ ಬಗ್ಗೆ ಅರಿವಿದ್ದಿದ್ದರೇ ಈ ರೀತಿ ಬೇಜವಬ್ದಾರಿ ಹೇಳಿಕೆ ನೀಡುತ್ತಿರಲಿಲ್ಲ, ಕೂಡಲೆ ಅವರು ಕ್ಷೇಮ ಯಾಚಿಸಬೇಕೆಂದರು.

ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳ ಮಧ್ಯೆ ವೈಮನಸ್ಸು ಮೂಡಲಿದ್ದು, ಉಪಜಾತಿಗಳ ಮನಸ್ಸು ಒಡೆಯುವ ಕೆಲಸಕ್ಕೆ ಕಟೀಲ್ ರವರು ಕೈ ಹಾಕಕೂಡದೆಂದು ಅವರ ಹೇಳಿಕೆಯನ್ನು ಖಂಡಿಸಿದರು‌.

Last Updated : Nov 3, 2020, 6:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.