ಚಿತ್ರದುರ್ಗ: ಆದಷ್ಟು ಬೇಗ ಉತ್ತರಾಧಿಕಾರಿ ಆಯ್ಕೆ ಮಾಡಿ ಜವಾಬ್ದಾರಿ ವರ್ಗಾಯಿಸಿ ಎಂದು ತರಳಬಾಳು ಶಾಖಾ ಮಠದ ಡಾ.ಪಂಡಿತಾರಾಧ್ಯ ಶ್ರೀ ನಿವೃತ್ತಿಯ ಮಾತನಾಡಿದ್ದಾರೆ.
ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಶಾಖಾ ಮಠದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮರಣ ಯಾರಿಗೆ, ಯಾವಾಗ, ಎಲ್ಲಿ ಬರುತ್ತದೆಂದು ಬಲ್ಲವರು ಯಾರು?
ಅದು ಬರುವ ಮುನ್ನವೇ ಜವಾಬ್ದಾರಿ ನಿರ್ವಹಿಸುವವರು ನಮ್ಮ ಜಾಗಕ್ಕೆ ಬರಬೇಕೆಂಬ ಬಯಕೆ ನಮ್ಮದು ಎಂದು ಸಿರಿಗೆರೆಯ ತರಳಬಾಳು ಮಠದ ಜಗದ್ಗುರುಗಳಾದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳಿಗೆ ವೇದಿಕೆಯಲ್ಲೇ ಮನವಿ ಮಾಡಿದರು.