ETV Bharat / state

ನನ್ನವರು ನನಗೆ ಮೋಸ ಮಾಡಿದ್ರು, ರೆಡ್ಡಿ ಸಿಎಂ ಆಗುವನೆಂದು ಜೈಲಿನಲ್ಲಿಟ್ಟರು: ಗಾಲಿ ಜನಾರ್ದನ ರೆಡ್ಡಿ - ಪಕ್ಷ ಅಧಿಕಾರಕ್ಕೇ ಬಂದ್ರೇ ಹಿರಿಯೂರು ಗುಡಿಸಲು ಮುಕ್ತ

ಹಿರಿಯೂರಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬೃಹತ್ ಸಮಾವೇಶ - ನಮ್ಮವರೇ ನನ್ನನ್ನು ಜೈಲಿನ ಕಳುಹಿಸಿ, ರಾಜಕೀಯವಾಗಿ ತುಳಿದರು - ನನ್ನವರು ನನ್ನೊಂದಿಗೆ ಇದ್ದು ಮೋಸ ಮಾಡಿದರು ಎಂದು ಆರೋಪಿಸಿದ ರೆಡ್ಡಿ.

Former minister Janardhana Reddy
ಮಾಜಿ ಸಚಿವ ಜನಾರ್ದನ ರೆಡ್ಡಿ ಮಾತನಾಡಿದರು.
author img

By

Published : Feb 4, 2023, 9:05 PM IST

Updated : Feb 4, 2023, 9:19 PM IST

ಮಾಜಿ ಸಚಿವ ಜನಾರ್ದನ ರೆಡ್ಡಿ ಮಾತನಾಡಿದರು

ಚಿತ್ರದುರ್ಗ: ನನ್ನವರು ನನ್ನ ಜೊತೆಗೆ ಇದ್ದುಕೊಂಡೇ ನನಗೆ ಮೊಸ ಮಾಡಿದ್ರು ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ. ಜಿಲ್ಲೆಯ ಹಿರಿಯೂರು ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಹಿರಿಯೂರು ಅಂದ್ರೆ ಖುಷಿ ತರುತ್ತದೆ. ಹಿರಿಯೂರಿಗೆ ನನ್ನ ಪ್ರೀತಿ ಹಾಗೂ ಋಣ ಇದೆ. ಹಿಂದೆ 2008 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಹಿರಿಯೂರು ಜನತೆಯೇ ಕಾರಣ ಎಂದು ತಿಳಿಸಿದರು.

ಉದ್ಯಮ ಮುಂದುವರಿಸಿದ್ದರೆ ಅಂಬಾನಿ ಅದಾನಿ ಆಗುತ್ತಿದ್ದೆ: ಆಗ ಹಿರಿಯೂರು ಮತ್ತು ಹೊಸದುರ್ಗ ಮತದಾರರ ಆಶೀರ್ವಾದದಿಂದ ಸರ್ಕಾರ ಬರಲು ಕಾರಣವಾಯಿತು. ತಾಯಿ ಸುಷ್ಮಾ ಸ್ವರಾಜ್ ಅವರಿಗೊಸ್ಕರ ನಾನು ರಾಜಕೀಯಕ್ಕೆ ಬಂದಿರುವೆ. ನಾನು ಅದೇ ಉದ್ಯಮವನ್ನು ಮುಂದುವರಿಸಿದ್ದರೇ ನಾನು ಇವತ್ತು ಅಂಬಾನಿ ಅದಾನಿ ಸಾಲಿನಲ್ಲಿ ಇರುತ್ತಿದ್ದೇನು ಎಂದು ಅಭಿಪ್ರಾಯ ತಿಳಿಸಿದರು.
ರೆಡ್ಡಿ ಸಿಎಂ ಆಗುವನೆಂದು ಜೈಲಿನಲ್ಲಿಟ್ಟರು:4 ವರ್ಷಗಳ ಕಾಲ ಜೈಲಿನಲ್ಲಿ ಇಟ್ಟಿದ್ದರು. ರೆಡ್ಡಿ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗುತ್ತಾನೆ ಎಂಬ ನಿಟ್ಟಿನಲ್ಲಿ ನನ್ನನ್ನು ಬಂಧಿಸಿದ್ದರು. ನಾನು ಯಾವುದೇ ಸರ್ಕಾರಿ ಜಮೀನು, ಜಾಗ ಕಬಳಿಸಿ ಜೈಲಿಗೆ ಹೋಗಲಿಲ್ಲ. ನಮ್ಮವರೇ ನನ್ನನ್ನು ಬಂಧನದಲ್ಲಿ ಇರುವಂತೆ ಮಾಡಿದರು. ರಾಜಕೀಯವಾಗಿ ನನ್ನನ್ನು ತುಳಿಯಲು ಆರಂಭಿಸಿದರು. ನನ್ನ ಜೊತೆಯಲ್ಲಿ ಇದ್ದವರು ನನಗೆ ಮೋಸ ಮಾಡಿದರು.

ಸ್ವಂತ ಊರಲ್ಲಿ ಇರಲು ಅವಕಾಶ ಕೊಡಲಿಲ್ಲ:4 ವರ್ಷಗಳ ಕಾಲ ಮನೆಯಲ್ಲಿ ಸುಮ್ಮನೆ ಕುಳಿತಿರಲಿಲ್ಲ. ಎಲ್ಲವನ್ನೂ ನೋಡ್ತಾ ಇದ್ದೆ. ಸ್ವಂತ ಊರಿನಲ್ಲಿ ನಾನು ಇರಲು ಅವಕಾಶ ಮಾಡಿ ಕೊಡಲಿಲ್ಲ. ಪಕ್ಷ ಕಟ್ಟಿ ಜನರ ಮುಂದೆ ಹೋಗುತ್ತೇನೆ ಎಂದು ಇಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿದೆ. ನನ್ನ ಮಗಳ ಹೆರಿಗೆ ಸಂದರ್ಭದಲ್ಲಿ ನನಗೆ ತುಂಬಾ ಕಷ್ಟ ಕೊಟ್ಟಿದ್ದರು. ಬಾಣಂತಿ ಹಾಗೂ ಹಸುಗೂಸು ಪೋಟೋ ತೆಗೆಯಬೇಕು ಎಂದು ಅಧಿಕೃತ ಕೇಳುತ್ತಾರೆ ಎಂಥ ನಾಚಿಕೆ ಆಗುತ್ತದೆ ಅಲ್ವಾ ಬಂಧುಗಳೇ ಎಂದು ಟೀಕಿಸಿದರು.

ಪಕ್ಷ ಅಧಿಕಾರಕ್ಕೇ ಬಂದರೆ ಹಿರಿಯೂರು ಗುಡಿಸಲು ಮುಕ್ತ :12 ವರ್ಷಗಳ ಕಾಲ ಮನೆಯಿಂದ ಹೊರಗಡೆ ಬರದಂತೆ ಮಾಡಿದ್ದರು. 1907 ರಲ್ಲಿ ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಿರಿಯೂರಿನ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲವಾಗುವಂತೆ ವೇದಾವತಿ ನದಿಗೆ ವಾಣಿವಿಲಾಸ ಸಾಗರ ಡ್ಯಾಂನ್ನು ಅಡ್ಡಲಾಗಿ ಕಟ್ಟಿದ್ದಾರೆ. ನಾನು ಪಕ್ಷ ಅಧಿಕಾರಕ್ಕೆ ಬಂದರೆ ಹಿರಿಯೂರನ್ನು ಗುಡಿಸಲು ಮುಕ್ತ ತಾಲೂಕನ್ನಾಗಿ ಮಾಡುತ್ತೇನೆ ಎಂದರು.

ಉದ್ಯೋಗ ಸೃಷ್ಟಿ: ಮಹಿಳೆಯರ ಅಭಿವೃದ್ಧಿಗೆ ನಾನಾ ಯೋಜನೆಗಳನ್ನೂ ಜಾರಿಗೆ ತರುವೆ. ಯುವಕ, ಯುವತಿಯರಿಗೆ ಉದ್ಯೋಗಗಳನ್ನು ಒದಗಿಸುವೆ. ಹಿರಿಯೂರು ಭಾಗದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಅಭ್ಯರ್ಥಿ ಘೋಷಣೆ:ಹಿರಿಯೂರು ಕ್ಷೇತ್ರದ ಕೆಆರ್​​ಪಿ ಪಕ್ಷದ ಅಭ್ಯರ್ಥಿ ಗನ್ನಾಯಕನಹಳ್ಳಿ ಹೆಚ್ ಮಹೇಶ್ ಅವರನ್ನು ಈ ಸಂದರ್ಭದಲ್ಲಿ ಘೋಷಿಸಿದರು. ಇಲ್ಲಿನ ಮತದಾರರು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ತಾಲೂಕಿನ ಸ್ವಾಭಿಮಾನದ ಬದುಕಿಗೆ ಸ್ಥಳೀಯ ಅಭ್ಯರ್ಥಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ಇದನ್ನೂಓದಿ: ಸತತ ಮೂರನೇ ಬಾರಿ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ ಪ್ರಧಾನಿ ಮೋದಿ

Last Updated : Feb 4, 2023, 9:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.