ETV Bharat / state

ವರುಣನ ಅಬ್ಬರಕ್ಕೆ ರಾಶಿ ಹಾಕಿದ್ದ ಈರುಳ್ಳಿ ಬೆಳೆಗೆ ಹಾನಿ: ಸಂಕಷ್ಟದಲ್ಲಿ ರೈತ - ಹೊಲದಲ್ಲಿ ರಾಶಿ ಹಾಕಿದ್ದ ಈರುಳ್ಳಿ ಬೆಳೆ

ಅಂದಾಜು 3 ಲಕ್ಷ ರೂ.ಗೂ ಅಧಿಕ ಮೌಲ್ಯದ ಈರುಳ್ಳಿ ಬೆಳೆ ಹೊಲದಲ್ಲೇ ಮಳೆ ನೀರಿಗೆ ನೆನೆದಿದೆ. ಇಂದು ಮತ್ತೆ ವರುಣ ಆರ್ಭಟಿಸಿದರೆ ಸಾಲ ಸೂಲ ಮಾಡಿ ಬೆಳೆದ ಈರುಳ್ಳಿ ಬೆಳೆ ಹಾಳಾಗಬಹುದು ಎಂಬ ಭಯ ಶುರುವಾಗಿದೆ.

rain-effect-damage-to-the-onion
ವರುಣನ ಅಬ್ಬರಕ್ಕೆ ರಾಶಿ ಹಾಕಿದ್ದ ಈರುಳ್ಳಿ ಬೆಳೆಗೆ ಹಾನಿ
author img

By

Published : Feb 19, 2021, 7:47 PM IST

ಚಿತ್ರದುರ್ಗ: ಹೊಲದಲ್ಲಿ ರಾಶಿ ಹಾಕಿದ್ದ ಈರುಳ್ಳಿ ಬೆಳೆ ನಿನ್ನೆ ತಡರಾತ್ರಿ ಸುರಿದ ಮಳೆಗೆ ನೆನೆದಿದ್ದು, ಕೊಳೆತು ಹೋಗಬಹುದೆಂಬ ಆತಂಕದಲ್ಲಿ ರೈತನಿದ್ದಾನೆ.

ವರುಣನ ಅಬ್ಬರಕ್ಕೆ ರಾಶಿ ಹಾಕಿದ್ದ ಈರುಳ್ಳಿ ಬೆಳೆಗೆ ಹಾನಿ

ಓದಿ: ಪಂಚಮಸಾಲಿ ಮೀಸಲಾತಿಗೆ ನನ್ನ ಬೆಂಬಲವಿದೆ : ಡಿಸಿಎಂ ಸವದಿ ಸ್ಪಷ್ಟೀಕರಣ

ಹಿರಿಯೂರು ತಾಲೂಕಿನ ಚಿತ್ರದೇವರಹಟ್ಟಿ ಗ್ರಾಮದ ರೈತ ಚಿತ್ತಪ್ಪ ಮಾಲಿಂಗಪ್ಪಗೆ ಸೇರಿದ 2 ಎಕರೆ ಪ್ರದೇಶದ ಈರುಳ್ಳಿ ಬೆಳೆಯನ್ನ ನಿನ್ನೆ ರಾಶಿ ಮಾಡಲು ಹೊಲದಿಂದ ಕಿತ್ತಿದ್ದರು. ತಡರಾತ್ರಿ ಏಕಾಏಕಿ ಆರ್ಭಟಿಸಿದ ವರುಣ ರೈತನನ್ನು ನಷ್ಟದ ಕೋಪಕ್ಕೆ ದುಡಿದ್ದಾನೆ.

ಅಂದಾಜು 3 ಲಕ್ಷ ರೂ.ಗೂ ಅಧಿಕ ಮೌಲ್ಯದ ಈರುಳ್ಳಿ ಬೆಳೆ ಹೊಲದಲ್ಲೇ ಮಳೆ ನೀರಿಗೆ ನೆನೆದಿದೆ. ಇಂದು ಮತ್ತೆ ವರುಣ ಆರ್ಭಟಿಸಿದರೆ ಸಾಲ ಸೂಲ ಮಾಡಿ ಬೆಳೆದ ಈರುಳ್ಳಿ ಬೆಳೆ ಹಾಳಾಗಬಹುದು ಎಂಬ ಭಯ ಶುರುವಾಗಿದೆ.

ಇನ್ನು ಎರಡು ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲು ರೈತ ಚಿತ್ತಪ್ಪ ಅಂದಾಜು ಒಂದು ಲಕ್ಷ ರೂ. ಖರ್ಚು ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ ಅಕಾಲಿಕ ಮಳೆಯಿಂದ ಈರುಳ್ಳಿ ಬೆಳೆ ಕೈಚೆಲ್ಲುವ ಆತಂಕ ರೈತನಲ್ಲಿ ಮನೆ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.