ಚಿತ್ರದುರ್ಗ: ಲಾಕ್ಡೌನ್ ತೆರವುಗೊಳಿಸಿದ ಬಳಿಕ ರಾಜ್ಯದಲ್ಲಿ ವಲಸಿಗರಿಂದ, ಕೊರೊನಾ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಚಿತ್ರದುರ್ಗ ಜಿಲ್ಲೆಗೆ ಇದೀಗ ಕಂಟಕ ಎದುರಾಗಿದ್ದು, ಹೊರ ರಾಜ್ಯದಿಂದ ಜಿಲ್ಲೆಗೆ ಆಮಿಸಿದ ಎರಡು ಸಾವಿರಕ್ಕೂ ಅಧಿಕ ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ಜನ್ರು ಭಯದಲ್ಲಿ ಜೀವನ ದೂಡುತ್ತಿದ್ದಾರೆ.
ಕೋಟೆನಾಡು ಚಿತ್ರದುರ್ಗದಲ್ಲಿ ಈಗಾಗಲೇ ಕೊರೊನಾ ತನ್ನ ಕಬಂದಬಾಹು ಚಾಚುತ್ತಲೇ ಇದ್ದು, ಜಿಲ್ಲೆಯಲ್ಲಿ ಈಗಾಗಲೇ 47 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 45 ಜನ ಕೊರೊನಾದಿಂದ ವಾಸಿಯಾಗುವ ಮೂಲಕ ಮನೆ ಸೇರಿದ್ದಾರೆ. ಆದರೆ ಇದೀಗ ಜನತೆಗೆ ಅರಗಿಸಿಕೊಳ್ಳದ ಸುದ್ದಿಯೊಂದು ಬಂದೊದಗಿದ್ದು, ಜನರನ್ನು ಭಯಭೀತರನ್ನಾಗಿ ಮಾಡಿದೆ.
ಪುಣೆ, ರಾಜಸ್ಥಾನ, ದೆಹಲಿ ಸೇರಿದ್ದಂತೆ ಕೊರೊನಾ ಹಾಟ್ಸ್ಪಾಟ್ಗಳ ನಾನಾ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿರುವ ಸುಮಾರು 2,245 ಮಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಈಗಾಗಲೇ ಕೊರೊನಾದಿಂದ ಸುಧಾರಣೆಯತ್ತ ಮುಖ ಮಾಡಿರುವ ಜಿಲ್ಲೆಯಲ್ಲಿ, ಇಷ್ಟೊಂದು ಜನರನ್ನು ಕ್ವಾರಂಟೈನ್ ಮಾಡಿರುವುದು ಬೆಚ್ಚಿಬೀಳಿಸಿದೆ. ಇನ್ನು ಈ ಹಿಂದೆ 57 ಜನ ಉತ್ತರಪ್ರದೇಶ ಮೂಲಕದ ಕಾರ್ಮಿಕರ ಪೈಕಿ, 27 ಜನ್ರಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ಆ ಪ್ರಕರಣ ಮಾಸುವ ಮುನ್ನವೇ ಇದೀಗ ಬೃಹತ್ ಸಂಖ್ಯೆಯಲ್ಲಿ ಆರೋಗ್ಯ ಇಲಾಖೆ ಹೊರ ರಾಜ್ಯಗಳಿಂದ ಆಗಮಿಸಿದವರಿಗೆ ಕ್ವಾರಂಟೈನ್ ಮಾಡಿರುವುದು ಆತಂಕ ಮನೆ ಮಾಡುವಂತೆ ಮಾಡಿದೆ.
ಜಿಲ್ಲೆಯಲ್ಲಿ ಪ್ರಸ್ತುತವಾಗಿ 3 ಸಕ್ರಿಯ ಪ್ರಕರಣಗಳು ಇದ್ದು, ಮನೆಯಲ್ಲೇ ಕ್ವಾರಂಟೈನ್ ಮಾಡಿರುವ ಜನ್ರು ಹೊರ ಬಾರದಂತೆ ಜಿಲ್ಲಾ ಆರೋಗ್ಯ ಇಲಾಖೆ ನಿಗಾ ವಹಿಸಿದೆ. ಜನರು ಯಾವುದೇ ಭಯ ಪಡುವ ಅವಶ್ಯಕತೆ ಇಲ್ಲ. ಉತ್ತಮ ಸೌಕರ್ಯ ಹೊಂದಿರುವವರಿಗೆ ಮನೆಯಲ್ಲೇ ಕ್ವಾರಟೈನ್ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಧಿಕಾರಿ ಡಾ ಪಾಲಾಕ್ಷ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಸಕ್ರಿಯ ಕೊರೊನಾ ಪ್ರಕರಣಗಳು ವಾಸಿಯಾಗಿ, ಜಿಲ್ಲೆ ಕೊರೊನಾ ಮುಕ್ತ ಎಂಬ ಹಣೆ ಪಟ್ಟಿ ಕಟ್ಟಿಕೊಂಡಿತ್ತು. ಅದ್ರೇ ಇದೀಗ ಹೆಚ್ಚು ಸಂಖ್ಯೆಯಲ್ಲಿ ಹೊರ ರಾಜ್ಯದವರನ್ನು ಕ್ವಾರಂಟೈನ್ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ.