ಚಿತ್ರದುರ್ಗ: ಶಾಸಕಿ ಪೂರ್ಣಿಮಾ ಮುಂದೊಂದು ದಿನ ಮಂತ್ರಿಯಾಗುತ್ತಾರೆ ಎಂದು ಸಚಿವ ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ.
ಹಿರಿಯೂರು ಪಟ್ಟಣದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣ ಬಳಿಕ ವೇದಿಕೆ ಭಾಷಣದಲ್ಲಿ ಮಾತನಾಡಿದ ಅವರು, ಶಾಸಕಿ ಪೂರ್ಣಿಮಾಗೆ ಒಳ್ಳೆ ಮನಸ್ಸಿದೆ. ಸಮಾಜದ ಪರವಾಗಿ, ಜನಗಳ ಪರವಾಗಿ ಕೆಲಸ ಮಾಡುವ ಹಮ್ಮಸ್ಸಿದೆ. ಹೀಗಾಗಿ ಸಮಾಜದ ಅಭಿವೃದ್ಧಿಗೆ ಸದಾ ಕಾಲ ಶಾಸಕಿ ಕಷ್ಟ ಪಡುತ್ತಿದ್ದಾರೆ ಎಂದರು.
ಪೂರ್ಣಿಮಾಗೆ ದೇವರು ಸಾಕಷ್ಟು ಕೂಟ್ಟಿದ್ದಾನೆ. ಆದ್ರೂ ಯಾಕೆ ಇಷ್ಟೊಂದು ಓಡಾಡುತ್ತೀರಿ ಎಂದು ನಾನು ಹಲವು ಬಾರಿ ಪ್ರಶ್ನೆ ಮಾಡಿರುವೆ. ಸಮಾಜ ಅಭಿವೃದ್ಧಿಗಾಗಿ ಜನ ಮತ ನೀಡಿದ್ದಾರೆ. ಅದಕ್ಕಾಗಿ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಉತ್ತರಿಸಿದ್ದಾರೆ. ಒಳ್ಳೆ ಮನಸ್ಸಿರುವ ಅವರು ಖಂಡಿತಾ ಮಂತ್ರಿಯಾಗುತ್ತಾರೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಓದಿ: ಫ್ರೀಡಂ ಪಾರ್ಕ್ ತಲುಪಿದ ರೈತರ ಪ್ರತಿಭಟನಾ ಮೆರವಣಿಗೆ... ಕೇಂದ್ರದ ವಿರುದ್ಧ ಅನ್ನದಾತರು ಕಿಡಿ
ಶ್ರಮ ವಹಿಸಿ ಪೂರ್ಣಿಮಾ ಅಭಿವೃದ್ಧಿಗಾಗಿ ಓಡಾಟ ನಡೆಸುತ್ತಾರೆ. ಬೆವರು ಸುರಿಸುತ್ತಾ ಅಭಿವೃದ್ಧಿ ಕೆಲಸ ಮಾಡುತ್ತಾರೆ. ನಾನು ಕೂಡ ಸಮಾಜ ಕಲ್ಯಾಣ ಮಂತ್ರಿಯಾಗಿ ಪೂರ್ಣಿಮಾ ಏನು ಕೇಳಿದರೂ ಅಭಿವೃದ್ಧಿ ಕೆಲಸ ಮಾಡಿ ಕೊಡ್ತೀನಿ ಎಂದ ಅವರು, ಹಿರಿಯೂರು ಶಾಸಕಿ ಪಕ್ಷಾತೀತವಾಗಿ, ಜ್ಯಾತ್ಯಾತೀತವಾಗಿ ಒಳ್ಳೆಯ ಹೆಸರು ಮಾಡುತ್ತಿದ್ದಾರೆ. ಅವರ ತಂದೆ ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಿ ಹೋಗಿದ್ದಾರೆ. ಹೆಣ್ಣು ಮಗಳಿಗೆ ಎಲ್ಲರೂ ಸಹಕಾರ ನೀಡಿ ಎಂದು ಮನವಿ ಮಾಡಿಕೊಂಡರು.