ಚಿತ್ರದುರ್ಗ : ಕೋವಿಡ್-19 ಪರಿಹಾರಕ್ಕಾಗಿ ಸರ್ಕಾರಿ ನೌಕರರ ಒಂದು ದಿನದ ವೇತನ ಕಡಿತಕ್ಕೆ ಸರ್ಕಾರ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಯಿಂದ ವಿರೋಧ ವ್ಯಕ್ತವಾಗುತ್ತಿದೆ.
ಒಂದು ದಿನದ ವೇತನ ಕಡಿತಕ್ಕೆ ಚಿತ್ರದುರ್ಗದ ಕೆಲ ಪೊಲೀಸರು ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ವೇತನವನ್ನು ಕಡಿತಗೊಳಿಸದಂತೆ ಚಿತ್ರದುರ್ಗ ಎಸ್ಪಿ ಜಿ.ರಾಧಿಕಾಗೆ ಪೊಲೀಸರು ಅಸಮ್ಮತಿ ಪತ್ರ ಕೂಡ ರವಾನಿಸಿದ್ದಾರೆ. ಸುಮಾರು 50 ಪೊಲೀಸರು ಎಸ್ಪಿ ರಾಧಿಕಾ ಅವರಿಗೆ ಅಸಮ್ಮತಿ ಪತ್ರ ರವಾನಿಸಿದ್ದಾರೆ.
ಕೊರೊನಾ ವಿರುದ್ಧ ಹೋರಾಟದಲ್ಲೇ ಕರ್ತವ್ಯ ನಿರ್ವಹಣೆ ಹಿನ್ನೆಲೆಯಲ್ಲಿ ಒಂದು ದಿನದ ವೇತನ ಕಡಿತಕ್ಕೆ ಪೊಲೀಸರಿಂದ ಅಸಮ್ಮತಿ ಸೂಚಿಸಿರುವುದು ಬಹಿರಂಗವಾಗಿದೆ.