ETV Bharat / state

ವಿಷಪೂರಿತ ಮೇವು ಸೇವನೆ: 30ಕ್ಕೂ ಹೆಚ್ಚು ಕುರಿಗಳು ಸಾವು

ವಿಷಪೂರಿತ ಆಹಾರ ಸೇವನೆ ಮಾಡಿ ಸುಮಾರು 30ಕ್ಕೂ ಹೆಚ್ಚು ಕುರಿಗಳು ಬಲಿಯಾಗಿದೆ. ಈ ಘಟನೆ ಚಿತ್ರದುರ್ಗದ ಹಿರಿಯೂರು ತಾಲೂಕಿನಲ್ಲಿ ನಡೆದಿದೆ.

ಕುರಿಗಳು ಸಾವು
ಕುರಿಗಳು ಸಾವು
author img

By

Published : Nov 20, 2020, 12:03 PM IST

ಚಿತ್ರದುರ್ಗ: ವಿಷಪೂರಿತ ಮೇವು ಸೇವಿಸಿ 30ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಹಿರಿಯೂರು ತಾಲೂಕಿನ ಸರಸ್ವತಿಹಟ್ಟಿ ಹಾಗೂ ಹೊಸಹಟ್ಟಿ ಎಂಬ ಗ್ರಾಮದಲ್ಲಿ ನಡೆದಿದೆ.

ಸರಸ್ವತಿಹಟ್ಟಿ ಹಾಗೂ ಹೊಸಹಟ್ಟಿ ಗ್ರಾಮದ ನಿವಾಸಿಗಳಾದ ಚಿತ್ತಪ್ಪ ಮತ್ತು ಕೆಂಚಪ್ಪ ಎಂಬ ರೈತರಿಗೆ ಸೇರಿದ ಕುರಿಗಳಾಗಿವೆ. ಕುರಿಗಳು ಮೇಯಲು ತೆರಳಿದ ಸಮಯದಲ್ಲಿ ಜೋಳದ ಸಪ್ಪೆಯ ಚಿಗುರು ಸೇವಿಸಿ ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ತಿಳಿದ ಹಿರಿಯೂರು ತಾಲೂಕಿನ ಪಶು ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ವಿಷಪೂರಿತ ಆಹಾರ ಸೇವಿಸಿದ್ದ 200 ಕುರಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಇನ್ನು 200 ಕುರಿಗಳ ಪೈಕಿ 30ಕ್ಕೂ ಹೆಚ್ಚು ಕುರಿಗಳು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿವೆ.

ಕುರಿಗಳ ಸಾವಿನ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಹಿರಿಯೂರು ತಹಶೀಲ್ದಾರ್ ಜಿ. ಸತ್ಯನಾರಾಯಣ ಅವರು ರೈತರಿಗೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಇನ್ನು ಶಾಸಕಿ ಪೂರ್ಣಿಮಾ ಶ್ರೀನಿವಾಸ್​ರವರು ಕೂಡ ಕುರಿಗಾಯಿಗಳೊಂದಿಗೆ ಮಾತನಾಡಿ ಸರ್ಕಾರದಿಂದ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.